ವೈರಸ್ ಗೆ ಭಯಪಡುವ ಅಗತ್ಯವಿಲ್ಲ ಆತ್ಮಸ್ಥೈರ್ಯ ಮುಖ್ಯ

ಹರಿಹರ.ಏ.30;  ವೈರಸ್ ಗೆ ಯಾರೂ ಭಯಪಡುವ ಅಗತ್ಯವಿಲ್ಲ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಧೈರ್ಯದಿಂದ ರೋಗವನ್ನು ಎದುರಿಸಬೇಕೆಂದು ಕಾಗಿನೆಲೆ ಮಹಾಸಂಸ್ಥಾನದ ಕನಕ ಪೀಠದ ಶ್ರೀ ಗಳಾದ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಹೇಳಿದರು ಸಾರ್ವಜನಿಕ ಆಸ್ಪತ್ರೆಯಲ್ಲಿ ಎರಡನೇ ಹಂತದ ಲಸಿಕೆ ಪಡೆದು ಮಾತನಾಡಿದ ಅವರು ಸಾಂಕ್ರಾಮಿಕ ರೋಗವಾದ ಮಹಾಮಾರಿ ವೈರಸ್ಸಿನಮ್ಮ ಹತ್ತಿರ ಸುಳಿಯದಂತೆ  ರಕ್ಷಿಸಿಕೊಳ್ಳುವುದಕ್ಕೆ ಮಾಸ್ಕನ್ನು ಧರಿಸಿಕೊಳ್ಳಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಸ್ವಚ್ಛತೆಯಿಂದ ಉತ್ತಮ ಪರಿಸರದಲ್ಲಿ ವಾಸಿಸುವ ಬೇಕೆಂದರು .
ನಾವು ಈಗಾಗಲೇ ಎರಡನೇ ಹಂತದ ಲಸಿಕೆಯನ್ನು ಹಾಕಿಸಿಕೊಂಡಿದ್ದೇವೆ ಪ್ರತಿಯೊಬ್ಬರು ಲಸಿಕೆಯನ್ನು ಹಾಕಿಸಿಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಮಹಾಮಾರಿ ನಿಯಂತ್ರಣ ಗೊಳ್ಳಬೇಕಾದರೆ ಪ್ರತಿಯೊಬ್ಬರೂ ಜಾಗೃತರಾಗಿರಿ ಪೊಲೀಸ್ ಕಂದಾಯ ನಗರಸಭೆ ಆರೋಗ್ಯ ವೈದ್ಯ ಸಿಬ್ಬಂದಿಗಳೊಂದಿಗೆ ಕೈಜೋಡಿಸಿ ವೈರಸ್ ಮುಕ್ತ ಮಾಡೋದಕ್ಕೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಡಿ ಚಂದ್ರಮೋಹನ್ .ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್  ಹನುಮಾನಾಯಕ್ . ಗ್ರಾಮಾಂತರ ಠಾಣೆಯ ಪಿಎಸ್ ಐ ಡಿ ರವಿಕುಮಾರ್ .ಶಾಸಕರ ಆಪ್ತ ಕಾರ್ಯದರ್ಶಿ ವಿಜಯ ಮಹಾಂತೇಶ್ .ಚೂರಿ ಜಗದೀಶ್. ಬೀರಪ್ಪ .ಪೊಲೀಸ್ ಪೇದೆ ಕರಿಯಪ್ಪ .ಮಠದ ಸದ್ಭಕ್ತರು ಆಸ್ಪತ್ರೆಯ ವೈದ್ಯರು ಸಿಬ್ಬಂದಿ ವರ್ಗದವರು ಇದ್ದರು