
ಶಿವಮೊಗ್ಗ, ಎ. 21: ಶಿವಮೊಗ್ಗ ಜಿಲ್ಲೆ ಸಾಗರ ನಗರಸಭೆಯ ಸದಸ್ಯರೋರ್ವರು ಮನೆಯೊಂದರಲ್ಲಿ ಕಂತೆ ಕಂತೆಯ ಹಣವನ್ನು ಬ್ಯಾಗ್ ನಲ್ಲಿ ತುಂಬುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!ವೀಡಿಯೋ ಆಧಾರದ ಮೇಲೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ತಂಡವು, ನಗರಸಭೆ ಸದಸ್ಯನ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದೆ. ಆದರೆ ಮನೆಯಲ್ಲಿ ಯಾವುದೇ ಹಣ ದೊರಕಿಲ್ಲ ಎಂದು ತಿಳಿದುಬಂದಿದೆ.ವೀಡಿಯೋ ಆಧಾರದ ಮೇಲೆ ಸದಸ್ಯನ ವಿರುದ್ದ ಫ್ಲೈಯಿಂಗ್ ಸ್ಕ್ವಾಡ್ ತಂಡ ದೂರು ದಾಖಲಿಸಿದೆ. ಈ ಸಂಬಂಧ ಸಾಗರ ಪಟ್ಟಣ ಪೇಟೆಯಲ್ಲಿ ಸದಸ್ಯನ ವಿರುದ್ದ ಎಫ್ಐಆರ್ ದಾಖಲಾಗಿದೆ. ಹಣ ಯಾರಿಗೆ ಸೇರಿದ್ದು ಎಂಬುವುದರ ಬಗ್ಗೆ ಪೊಲೀಸರ ತನಿಖೆ ಮುಂದುವರಿಸಿದ್ದಾರೆ.ವೈರಲ್: ಬ್ಯಾಗ್ ಗೆ ಕಂತೆ ಕಂತೆ ಹಣ ತುಂಬುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.