ವೈರಂ ಟೀಸರ್ ಬಿಡುಗಡೆ

ಯುವ ನಟ ಪ್ರಣಾಮ್ ನಾಯಕನಾಗಿರುವ ” ವೈರಂ” ಚಿತ್ರದ ಟೀಸರ್  ಅನ್ನು ಹಿರಿಯ ನಟ ದೇವರಾಜ್  ಬಿಡುಗಡೆ ಮಾಡಿ ಪುತ್ರನ ಚಿತ್ರಕ್ಕೆ ಶುಭಕೋರಿದ್ದಾರೆ.

ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಸಾಯಿ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ಮೂರು ಗಂಟೆಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಟ ಪ್ರಣಾಮ್ ಒಂದೂಕಾಲು ಗಂಟೆ ತಡವಾಗಿ ಆಗಮಿಸಿದರು.

ನಟ ಪ್ರಣಾಮ್ ಮಾತನಾಡಿ  4 ವರ್ಷದ ನಂತರ ನಟಿಸುತ್ತಿರುವ ಚಿತ್ರ. ಆಕ್ಷನ್ ಪ್ಯಾಕ್ ಲವ್ ಸ್ಟೋರಿ ಚಿತ್ರ, ಇಡೀ ತಂಡ, ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ವೇದಿಕೆ ಮೇಲೆ ಭಾವುಕರಾದರು. ಎದುರಿಗೆ ಕುಳಿತ ತಂದೆ, ತಾಯಿ ಕಣ್ಣಲ್ಲಿ ನೀರು ತುಂಬಿಕೊಂಡರು.

ನಟಿ ಮೋನಲ್, ಮೊದಲ ಚಿತ್ರ ಸಹಕಾರ ಇರಲಿದೆ. ಹಿಂದು ಕ್ರಿಶ್ಚಿಯನ್ ಹುಡುಗ ಹುಡಗಿಯ ಪ್ರೇಮಕಥೆ ಚಿತ್ರ ಒಳಗೊಂಡಿದೆ ಎಂದರು. ಖಳ ನಟ ರಾಮ್ ,ಚಿತ್ರದಲ್ಲಿ  ಪ್ರಮುಖ ಪಾತ್ರ ಮಾಡಿದ್ದೇನೆ ಎಲ್ಲರಿಗೂ ಇಷ್ಡವಾಗಲಿದೆ ಎಂದು ಮಾಹಿತಿ ನೀಡಿದರು.

ನಿರ್ದೇಶಕ ಸಾಯಿ ಶಿವನ್, ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.‌ಒಳ್ಳೆಯ ಕಥೆ ಇದೆ‌‌ ಎಂದರು. ಚಿತ್ರಕ್ಕೆ ಮಲ್ಲಿಕಾರ್ಜುನ್ ಮತ್ತು ವೇಮಾ ರೆಡ್ಡಿ ಬಂಡವಾಳ  ಹಾಕಿದ್ದಾರೆ. ಚಿತ್ರದಲ್ಲಿ ಶಂಕರ್ ಅಶ್ವಥ್, ವೀಣಾ ಸುಂದರ್ ಸೇರಿದಂತೆ ಮತ್ತಿತರು ಕಾಣಿಸಿಕೊಂಡಿದ್ದಾರೆ.