ವೈಯುಕ್ತಿಕ ಹಿತಾಸಕ್ತಿ ಕೊಲೆಗಳು : ಸೈದುಲು ಅಡವಾತ್

ಹೊಸಪೇಟೆ, ಮಾ.22: ಯುವ ವಕೀಲ ತಾರಿಹಳ್ಳಿ ವೆಂಕಟೇಶ್, ಸ್ಥಳೀಯ ಟಿ.ಬಿ.ಡ್ಯಾಂನಲ್ಲಿ ಜಾನ್ ಮೈಕಲ್ ಕೊಲೆಗಳು ವೈಯುಕ್ತಿಕ ದ್ವೇಷಾಸುಯೆಗಳಿಂದ ನಡೆದದ್ದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು ಸಾರ್ವಜನಿಕರು ಬಯಪಡುವ ಕಾರಣವೇ ಇಲ್ಲಾ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡವಾತ್ ತಿಳಿಸಿದ್ದಾರೆ.
ಶನಿವಾರ ರಾತ್ರಿ ಕೊಲೆಯಾದ ಜಾನ್ ಮೈಕಲ್ ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ನಂತರ ಸಂಜೆವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ನ್ಯಾಯಾಲಯ ಆವರಣದಲ್ಲಿ ವಕೀಲ ವೆಂಕಟೇಶ್ ಕೊಲೆಯ ಆರೋಪಪಟ್ಟಿಯನ್ನು ಸಲ್ಲಿಸಲಾಗಿದ್ದು ಇಷ್ಟುಬೇಗ ಒಂದು ಕೊಲೆಯ ಆರೋಪಪಟ್ಟಿ ಸಿದ್ದಪಡಿಸಿ ನೀಡುತ್ತಿರುವುದು ಒಂದು ಸಾಧನೆಯೆ ಸರಿ ಎಂದ ಅವರು ಕಾನೂನು ಸುವ್ಯವಸ್ಥೆ ಹಾಳಗಲು ಇಲಾಖೆ ಬಿಡುವುದಿಲ್ಲಾ ಎಂದರು.
ಎಲ್ಲಾ ಕೊಲೆ ಪ್ರಕರಣಗಳು ವೈಯುಕ್ತಿಕ ಹಿನ್ನೆಲೆಯಲ್ಲಿಯೇ ನಡೆದಿರುವ ಕಾರಣ ಭಯಪಡುವ ಅಗತ್ಯವಿಲ್ಲಾ ಇಲಾಖೆ ಅತ್ಯಂತ ಸೂಕ್ಷ್ಮವಾಗಿ ಕಾರ್ಯನಿರ್ವಹಿಸುತ್ತಿದ್ದು ಆದಷ್ಟು ಬೇಗ ಈ ಪ್ರಕರಣವನ್ನು ಭೇದಿಸುವುದಾಗಿ ತಿಳಿಸಿದರು.