ವೈಯಕ್ತಿಕ ವಿಚಾರ ಹಂಚಿಕೊಂಡ ಜಾನ್ವಿ

ನವದೆಹಲಿ,ಸೆ.೩೦-ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ೨೦೧೮ ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಧಡಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು,ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.ಹಿಂದಿ ಚಿತ್ರರಂಗದಲ್ಲಿ ತಮ್ಮ ವೃತ್ತಿ ಜೀವನಕ್ಕೆ ಯಶಸ್ಸು ಕಾಣುತ್ತಿರುವ ನಟಿ ಸೌತ್ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದಾರೆ.ಈ ಮಧ್ಯೆ ಕೆಲವು ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ತೆರೆದಿಟ್ಟಿದ್ದಾರೆ.
ಹದಿಹರೆಯದಿಂದಲೂ ಸ್ಟಾರ್ ಕಿಡ್ ಆಗಿ ತಾನು ಎದುರಿಸಿದ ಕಷ್ಟಗಳ ಬಗ್ಗೆ ಜಾನ್ವಿ ಕಪೂರ್ ತೆರೆದಿಟ್ಟಿದ್ದಾರೆ. ಶಾಲಾ ದಿನಗಳಲ್ಲಿ ವಿವಿಧ ವೆಬ್‌ಸೈಟ್‌ಗಳಲ್ಲಿ ತನ್ನ ಮಾರ್ಫ್ ಮಾಡಿದ ಚಿತ್ರಗಳನ್ನು ನೋಡುತ್ತಿದ್ದುದನ್ನು ನಟಿ ನೆನಪಿಸಿಕೊಂಡರು.
ಇತ್ತೀಚಿನ ಸಂಭಾಷಣೆಯಲ್ಲಿ, ಮಿಲಿ ನಟಿ ಕ್ಯಾಮೆರಾಗಳು ಯಾವಾಗಲೂ ತನ್ನ ಜೀವನದ ಒಂದು ಭಾಗವಾಗಿದ್ದು, ತಾನು ಬಾಲ್ಯದಿಂದಲೂ ಕ್ಯಾಮೆರಾಗಳೊಂದಿಗೆ ಬೆಳೆದಿದ್ದೇನೆ, ಎಷ್ಟು ಜನರು ತಮ್ಮ ಮತ್ತು ಅವರ ಸಹೋದರಿ ಖುಷಿ ಕಪೂರ್ ಅವರ ಅನುಮತಿಯೊಂದಿಗೆ ಅಥವಾ ಅನುಮತಿ ಇಲ್ಲದೆ ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ನೆನಪಿಸಿಕೊಂಡರು. ಪಾಪರಾಜಿ ಫೋಟೋಗಳು ಶಾಲೆಯಲ್ಲಿ ತನ್ನ ಗೆಳೆತಿಯರಿಂದ ಹೇಗೆ ತಮ್ಮನ್ನು ದೂರ ಇಡಲಾಯಿತು ಎಂದು ತಿಳಿಸಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಜಾಹ್ನವಿ ಕಪೂರ್, ಪಾಪರಾಜಿಗಳು ತಮ್ಮ ೧೦ ನೇ ವಯಸ್ಸಿನಲ್ಲಿ ತಮ್ಮ ಪೋಷಕರ ಸೆಲೆಬ್ರಿಟಿ ಸ್ಥಾನಮಾನದ ಕಾರಣದಿಂದ ಫೋಟೋ ತೆಗೆಯಲು ಪ್ರಾರಂಭಿಸಿದರು ಎಂದು ಹೇಳಿದರು. ಅಂದು ತೆಗೆದ ಫೋಟೋಗಳು ಯಾಹೂ ನಂತಹ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡವು. ಆ ಫೋಟೋಗಳನ್ನು ನೋಡುವಾಗ ನಟಿ ಒಮ್ಮೆ ಅಹಿತಕರವಾದ ಭಾವನೆಯನ್ನು ಅನುಭವಿಸಿದ್ದು. ಕೆಲವು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ನನ್ನ ಫೋಟೋಗಳು ಕಾಣಿಸಿಕೊಂಡಿದ್ದವು ಎಂದು ಅವರು ನೆನಪಿಸಿಕೊಂಡರು.
ಒಂದು ದಿನ ಶಾಲೆಯ ಲ್ಯಾಬ್‌ನ ಕಂಪ್ಯೂಟರ್‌ಗಳಲ್ಲಿ ಎಲ್ಲಾ ಸಹಪಾಠಿಗಳ ಮುಂದೆ ಪಾಪರಾಜಿಗಳು ತೆಗೆದ ಫೋಟೋಗಳು ಕಾಣಿಸಿಕೊಂಡಾಗ ಜಾಹ್ನವಿ ಕಪೂರ್ ಅವರಿಗೆ ಕೇವಲ ೧೦ ವರ್ಷಗಳು. ಆ ಫೋಟೋಗಳು ಅವರಿಗೆ ತುಂಬಾ ಅಹಿತಕರ ಭಾವನೆಯನ್ನು ತಂದಿಕೊಟ್ಟಂತೆ. ಸಹಪಾಠಿಗಳ ಮುಂದೆ ಅವರನ್ನು ಜನಪ್ರಿಯವಾಗಿಸುವ ಬದಲು ಮುಜುಗರಕ್ಕೀಡಾಗುವಂತೆ ಮಾಡಿತ್ತು. ಜೊತೆಗೆ ಈ ಫೋಟೋಗಳು ಅವರ ಗೆಳತಿಯರು ಮತ್ತು ಶಿಕ್ಷಕರು ಜಾಹ್ನವಿ ಅವರನ್ನು ಪರಕೀಯರಂತೆ ಕಾಣುವಂತೆ ಮಾಡಿತ್ತು ಎಂದು ಹಳೆಯ ದಿನಗಳ ಕಹಿ ಘಟನೆಗಳನ್ನು ಹಂಚಿಕೊಂಡರು.