ವೈಯಕ್ತಿಕ ಟೀಕೆ ಮಾಡುವುದು ಸರಿಯಲ

ಕಲಬುರಗಿ,ಜು.30- ಕಾಂಗ್ರೆಸ್ಸಿನ ವಕ್ತಾರರಾದ ಶರಣು ಮೋತಕಪಳ್ಳಿ ಯವರು, ಬಿಜೆಪಿಯ ಹಿರಿಯ ನಾಯಕ ರಾಮಚಂದ್ರ ಜಾಧವ್ ರವರ, ಮೇಲೆ ವ್ಯಕ್ತಿಗತವಾಗಿ ಟೀಕೆ ಮಾಡಿದ್ದು ಸರಿಯಿಲ್ಲ, ಅವರು ಮತ್ತು ಅವರ ಕುಟುಂಬ, ರೇವಣಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಎಷ್ಟು ಶ್ರಮಿಸಿದ್ದಾರೆ ಎಂಬೂವುದ ಕ್ಷೇತ್ರದ ಜನತೆಗೆ ಗೊತ್ತು,
ಜನರÀ ಆಶಿರ್ವಾದದಿಂದ ಎರಡು ಸಲ ಶಾಸಕರಾಗಿ ಸಂಸದರಾಗಿ,ಡಾ ಉಮೇಶ್ ಜಾಧವ್ ರವರನ್ನು, ಆರಿಸಿ ಕಳೂಹಿಸಿದ್ದು, ಅವರ ಕುಟುಂಬದ ಕುಡಿ ಡಾ. ಅವಿನಾಶ್ ಉಮೇಶ್ ಜಾಧವ್ ರವರನ್ನು, ಚಿಂಚೋಳಿ ಶಾಸಕನಾಗಿ ಆಯ್ಕೆಮಾಡಿದ್ದಾರೆ. ವಿರೋಧ ಪಕ್ಷದ ವಕ್ತಾರರು, ಟೀಕೆ ಮಾಡುವಾಗ ಎಚ್ಚರವಿರಲಿ ರೇವಣಸಿದ್ಧೇಶ್ವರ ದೇವಸ್ಥಾನದ ಅಭಿವೃದ್ಧಿ ಯಾವ ರೀತಿ ಆಗಿದೆ ಎಂದು ಬಂದು ನೋಡಲಿ.
ರಾಮಚಂದ್ರ ಜಾಧವ್ ಬಿಜೆಪಿ ಪಕ್ಷಕ್ಕೆ ಶಕ್ತಿ ಆಗಿದ್ದಾರೆ, ಅವರ ವಿರುದ್ಧ ವೈಯಕ್ತಿಕ ಟೀಕೆ ಸರಿಯಲ್ಲ,ಅವರ ಕುಟುಂಬ ಈಗಲೂ ಬಡವರ ಪರ ಕೆಲಸ ಮಾಡುತ್ತಿದೆ, ಶಾಸಕ ಸಂಸದರು ಚಿಂಚೋಳಿ ಕ್ಷೇತ್ರ ಮತ್ತು ಕಲಬುರಗಿ ಸಂಸದೀಯ ಕ್ಷೇತ್ರದಲ್ಲಿ ಮಾಡಿದ ಕೆಲಸ ಚುನಾವಣೆ ಸಂದರ್ಭದಲ್ಲಿ ತೋರಿಸುತ್ತವೆ, ಮುಂದೆ ಆದರೂ ತಿದ್ದಿಕೊಳ್ಳಿ ಒಂದು ವೇಳೆ ಹೀಗೆಯೇ ಮುಂದುವರೆದರೆ, ಪಕ್ಷದ ಕಾರ್ಯಕರ್ತರು ಯಾವುದಕ್ಕೂ ಹೆದರಿದೆ ಹೊರಾಟ ಮಾಡಬೇಕಾತ್ತದೆ ಎಂದು ಬಿಜೆಪಿ ಪಕ್ಷದ ತಾಲೂಕ ವಕ್ತರದ ಶ್ರೀಮಂತ ಬಿ ಕಟ್ಟಿಮನಿ ಅವರು ಎಚ್ಚರಿಸಿದ್ದಾರೆ.