ವೈಯಕ್ತಿಕ ಟೀಕೆ ಟಿಪ್ಪಣಿ ಬಿಡಿ, ಅಭಿವೃದ್ಧಿ ಕಡೆ ಗಮನಕೊಡಿ ಈಶ್ವರ ಖಂಡ್ರೆಗೆ ಮನವಿ : ಡಿ.ಕೆ. ಸಿದ್ರಾಮ

ಭಾಲ್ಕಿ :ಜು.16: ಬೀದರ ಜಿಲ್ಲೆಯ ಸಂಸದ,ಕೇಂದ್ರ ಸಚಿವ ಭಗವಂತ ಖೂಬಾ ಅವರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡುತ್ತ ಕಾಲ ಹರಣ ಮಾಡುತ್ತಿರುವ
ಶಾಸಕ ಈಶ್ವರ ಖಂಡ್ರೆ ಯವರು ಅದನ್ನು ಬಿಟ್ಟು ಅಭಿವೃದ್ಧಿ ಕಡೆ ಗಮನ ಹರಿಸುವುದು ಸೂಕ್ತ ಎಂದು ನಾನು ಅಭಿಪ್ರಾಯ ಪಡುತ್ತೆನೆ.
ವಿನಾಕಾರಣ ಲೂಟಿ ಭ್ರಷ್ಟಾಚಾರ ಎಂಬ ಪದಗಳನ್ನು ಬಳಸಿಕೊಂಡು ವೈಯಕ್ತಿಕ ಚಾರಿತ್ರ್ಯವದೆ ಮಾಡುವುದರಲ್ಲಿ ಯಾವುದೇ ಅರ್ಥಗಳಿಲ್ಲ ಕೇಂದ್ರ ಸಚಿವ ಭಗವಂತ ಖುಬಾ ಅವರು ಇಂದು ಇಡಿ ಜಿಲ್ಲೆಯಾಧ್ಯಂತ ಜನರ ಮನಸ್ಸನ್ನು ಗೆದ್ದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದು ಎಲ್ಲರಿಗೂ ಗೋತ್ತಿರುವಂತಹ ಸಂಗತಿ ಇಂತಹ
ಸಂದರ್ಭದಲ್ಲಿ ವಿನಾಕಾರಣ ವೈಯಕ್ತಿಕ ಟೀಕೆಗಳನ್ನು ಮಾಡುತ್ತ ಸೂರ್ಯನ ಮೇಲೆ ಉಗುಳುವ ಕೇಲಸ ತಾಲೂಕಿನ ಶಾಸಕ ಈಶ್ವರ ಖಂಡ್ರೆಯವರು ಮಾಡುತ್ತಿದ್ದಾರೆ ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೆನೆ.
ಈಶ್ವರ ಖಂಡ್ರೆ ಯವರು ಮಾಡಿರುವಂತಹ ಕಾರಂಜಾ ಯೋಜನೆ ಭಾಲ್ಕಿಯಲ್ಲಿ ನಡೆಸಿರುವಂತಹ ಮನೆ ಅವ್ಯವಹಾರ ಒಬ್ಬಿಬ್ಬರಿಗೆ ಗುತ್ತಿಗೆದಾರಿಕೆ ನೀಡುವುದರ ಮೂಲಕ ನಡೆಸಿರುವಂತಹ ಅವ್ಯವಹಾರಗಳು ಈಗಾಗಲೇ ಬೀದರ ಜಿಲ್ಲೆಯ ಜನತೆಗೆ ತಿಳಿದಿರುವ ಸಂಗತಿ ಈ ಎಲ್ಲ ವಿಷಯಗಳ ನಿಟ್ಟಿನಲ್ಲಿ ಅವರು ತಮ್ಮ ಸ್ವಂತಕ್ಕೆ ಆತ್ಮವಲೋಕನ ಮಾಡಿಕೊಂಡರೆ ಒಳ್ಳೆಯದು, ವಿನಾಕಾರಣ ಯಾವುದೊ ಸಣ್ಣ ಪುಟ್ಟ ವಿಷಯಗಳನ್ನು ಇಟ್ಟಿಕೊಂಡು ಕೇಂದ್ರ ಸಚಿವರ ವಿರುದ್ಧ ಟೀಕೆ ತಿಪ್ಪಣಿ ಮಾಡುವುದನ್ನು ದಯವಿಟ್ಟು ಮಾನ್ಯ ಈಶ್ವರ ಖಂಡ್ರೆಯವರುನಿಲ್ಲಿಸಬೇಕು ಎಂದು ಡಿ ಕೆ ಸಿದ್ರಾಮ ಮನವಿ ಮಾಡಿಕೊಂಡಿದ್ದಾರೆ.