ವೈಮನಸ್ಸು ಮರೆತು ಶಿಕ್ಷಕರ ಅಭಿವೃದ್ಧಿಗೆ ಶ್ರಮಿಸಿರಿ : ಗಂದಗೆ

ಬೀದರ:ಡಿ.18: ನೂತನವಾಗಿ ಪ್ರಾಥಮಿಕ ಶಾಲಾ ಬೀದರ ತಾಲೂಕಾ ಶಿಕ್ಷಕರ ಚುನಾವಣೆಯಲ್ಲಿ ಚುನಾಯಿತರಾದ ಪ್ರತಿನಿಧಿಗಳು ಪರಸ್ಪರ ವೈಮನಸ್ಸು ಹಾಗೂ ದ್ವೇಷವನ್ನು ತೊರೆದು ಶಿಕ್ಷಕರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ನುಡಿದರು.

ನಗರದ ಶರಣಬಸವೇಶ್ವರ ಅಭ್ಯಾಸಾರ್ಥ ಪ್ರೌಢ ಶಾಲೆಯಲ್ಲಿ ನೂತನ ಚುನಾಯಿತ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಚುನಾಯಿತ ಶಿಕ್ಷಕರು ತಮ್ಮ ತಂಡದೊಂದಿಗೆ ಸಹಕಾರ ಮನೋಭಾವನೆಯಿಂದ ದುಡಿಯಬೇಕು. ರಾಜ್ಯದಲ್ಲಿಯೇ ಶಿಕ್ಷಕರ ಸಂಘಕ್ಕೆ ಬೀದರ ಜಿಲ್ಲೆ ಶಿಸ್ತಿನಿಂದ ಹೆಸರುವಾಸಿಯಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ನಿರಂತರ ಸ್ಪಂದನೆ ನೀಡಬೇಕು. ಅಡ್ಡಗಾಲು ಹಾಕುವವರು ಎಲ್ಲಾ ರಂಗದಲ್ಲಿಯೂ ಇರುತ್ತಾರೆ. ಆದರೆ ಅದನ್ನು ಮೆಟ್ಟಿನಿಂತು ಸೇವೆ ಸಲ್ಲಿಸಿದಾಗ ಮಾತ್ರ ಹೆಸರು ಬೆಳೆಯುತ್ತದೆ. ಎಲ್ಲರಲ್ಲಿಯೂ ಒಗ್ಗಟ್ಟು ಇರಬೇಕು. ಹೀಗಾದಾಗ ಮಾತ್ರ ಯಾವುದೇ ಕೆಲಸಗಳನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.

ರಾಜ್ಯಾಧ್ಯಕ್ಷರಾದ ಸಿ.ಷಡಕ್ಷರಿಯವರು ನಮಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಜಾತಿಭೇದವಿಲ್ಲದೆ ಎಲ್ಲರೂ ಒಂದಾಗಿ ದುಡಿಯಬೇಕು. ಜೀವನದಲ್ಲಿ ಅವಕಾಶಗಳು ಪದೇ ಪದೇ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.

ನೂತನವಾಗಿ ಚುನಾಯಿತರಾದ ಮನೋಹರ ಕಾಶಿ, ಪ್ರಭುಲಿಂಗ ತೂಗಾವೆ, ಶಿವರಾಜ ಕಪಲಾಪುರೆ, ರಾಜುಸಾಗರ, ಬಾಬುಕುಮಾರ, ಮಹಮ್ಮದ್ ಇಸುಫ್, ಮಹೇಶ, ಸುರೇಶ ಟಾಳೆ, ಅಬ್ದುಲ್ ಸತ್ತಾರ್, ಡೇವಿಡ್, ನರಸಪ್ಪಾ, ಹೈದರಲಿ, ಧರ್ಮಪ್ರಕಾಶ, ಅಶ್ರಫ್ ಅಲಿ, ಮನೋಹರ ಬಾಬಶೆಟ್ಟಿ, ಕಾಶಿನಾಥ, ಸುಮತಿ, ಸಂಪತಿ, ಬೀನಾ ಕಾವಳೆ, ಬುದ್ಧಾದೇವಿ, ರಾಜಮ್ಮಾ, ಸಂಧ್ಯಾರಾಣಿ, ಆಫಿಪ್ ಸಲ್ಮಾ, ಸಂಪತ್‍ಕುಮಾರಿ ಈ ಪ್ರತಿನಿಧಿಗಳನ್ನು ವೇದಿಕೆ ಮೇಲೆ ಸನ್ಮಾನಿಸಲಾಯಿತು. ಜೊತೆಗೆ ಪ್ರಮಾಣ ಪತ್ರ ನೀಡಲಾಯಿತು. ರಾಜಮ್ಮ ಸಹಶಿಕ್ಷಕಿ ಪ್ರಾರ್ಥನಾಗೀತೆ ಹಾಡಿದರು.

ವೇದಿಕೆ ಮೇಲೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಉಪಾಧ್ಯಕ್ಷ ಪ್ರಭುಲಿಂಗ ತೂಗಾವೆ, ಖಜಾಂಚಿ ಅಶೋಕರೆಡ್ಡಿ, ತಾಲೂಕಾ ಚುನಾವಣಾಧಿಕಾರಿ ಬಾಬುರಾವ ದಾನಿ, ಮಾಜಿ ಅಧ್ಯಕ್ಷರಾದ ಶಿವರಾಜ ಕಪಲಾಪೂರೆ, ಸಹಾಯಕ ಚುನಾವಣಾಧಿಕಾರಿ ವೈಜಿನಾಥ ಪಾಟೀಲ, ಪಂಚಾಕ್ಷರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.