ವೈಭವದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ


ಸವಣೂರು,ಜ.4: ತಾಲೂಕಿನ ಚವಢಾಳ ಗ್ರಾಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜಾ ಕಾರ್ಯಕ್ರಮವು ಅತ್ಯಂತ ವೈಭವಪೂರ್ಣವಾಗಿ ನೆರವೇರಿತು.
ಗುರು ಸ್ವಾಮಿಗಳಾದ ಕಲ್ಲಪ್ಪ ಕಂಠಿ ಸ್ವಾಮಿಗಳವರ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಗೆ ರುದ್ರಾಭಿಷೇಕ, ಗಣ ಹೋಮ, ಪುಷ್ಪಾರ್ಚನೆ ಮಹಾ ಮಂಗಳಾರತಿ ಸೇರಿದಂತೆ ಇತ್ಯಾಧಿ ಧಾರ್ಮಿಕ ಕೈಂಕರ್ಯಗಳು ವಿದ್ಯುಕ್ತವಾಗಿ ನೆರವೇರಿದವು ಮಹಾಪೂಜೆಗೂ ಮುನ್ನ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಸಕಲ ವಾದ್ಯ ವೈಭವದೊಂದಿಗೆ ತಾಯಂದಿರ ಕುಂಭಮೇಳದೊಂದಿಗೆ ಹೊರಟ ಅಯ್ಯಪ್ಪ ಸ್ವಾಮಿಯ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಂಗವಾಗಿ ಅಯ್ಯಪ ಸ್ವಾಮಿಯ ಸನ್ನಿಧಾನದಲ್ಲಿ ಸಂಪನ್ನಗೊಂಡಿತು. ಬಳಿಕÀ ಅನ್ನ ಸಂತರ್ಪಣೆ ನಡೆಯಿತು, ಅನ್ನ ಪ್ರಸಾದ ಸೇವಿಸಿದ ಭಕ್ತರು ಪುನೀತಭಾವದಿಂದ ಮೆರೆದರು.
ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾದ ಮೌನೇಶ ಬಡಿಗೇರ, ಪರಶುರಾಮ ಮಲ್ಹಾರಿ, ಹೆಗ್ಗಪ್ಪ ಸೂರಣಗಿ, ನಿಜಗುಣಿ ಕರಿಗಾರ, ಸಂತೋಷ, ಮಾಲತೇಶ ಸ್ವಾಮಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.