
ಭಾಲ್ಕಿ: ಆ.26:ಪಟ್ಟಣದ ವಿವಿಧ ಓಣಿಗಳಲ್ಲಿ, ಶುಕ್ರವಾರ ಪ್ರತಿಷ್ಠಿತ ಮನೆಯವರು ವೈಭವದಿಂದ ವರಮಹಾಲಕ್ಷ್ಮೀ ಪೂಜೆ ನರೆವೇರಿಸಿದರು. ಖಂಡ್ರೆಗಲ್ಲಿ, ಮಾಶೆಟ್ಟೆ ಗಲ್ಲಿ, ಗೋರ್ಟೆಗಲ್ಲಿ, ತೀನದುಕಾನ ಗಲ್ಲಿ, ಉಪನ್ಯಾಸಕರ ಬಡವಾಣೆ, ಗುರು ಕಾಲೋನಿ ಸೇರಿದಂತೆ ಪಟ್ಟಣದ ವಿವಿಧ ಓಣಿಗಳಲ್ಲಿ ಮಹಾಲಕ್ಷ್ಮೀಯನ್ನು ಸ್ಥಾಪಿಸಿ, ವರಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ವರಮಹಾಲಕ್ಷ್ಮಿಯ ಮೂರ್ತಿಗಳಿಗೆ ಅಲಂಕರಿಸಿ, ಎಲ್ಲಾ ನೆಂಟರಿಷ್ಟರು, ಗೆಳೆಯರನ್ನು ಕರೆದು ಪೂಜೆ ಸಲ್ಲಿಸಿ, ಅವರಿಗೆ ಅರಸಿಣ, ಕುಂಕುಮ ಹಚ್ಚಿ, ಕಾಣಿಕೆ ರೂಪದಲ್ಲಿ ಎಲೆ, ಅಡಕೆ, ಉಡಿ ತುಂಬಿ ಕಳುಸಿಕೊಡುತ್ತಿರು ದೃಶ್ಯ ಸವೇಸಾಮಾನ್ಯವಾಗಿತ್ತು.
ವರಮಹಾಲಕ್ಷ್ಮೀ ಪೂಜೆ ನೆರವೇರಿಸುವುದರಿಂದ ಮನೆಯಲ್ಲಿ ಲಕ್ಷ್ಮೀವಾಸ ವಿದ್ದು, ಯಾವತ್ತೂ ಹಣದ ಕೊರತೆಯಾಗದು ಯನ್ನುವ ಪ್ರತೀತಿ ಇರುವುದರಿಂದ, ಸಾಕಷ್ಟು ಕುಟುಂಬಗಳು ವರ ಮಹಾಲಕ್ಷ್ಮೀ ಪೂಜೆ ಕಾರ್ಯಕ್ರಮ ನಡೆಸಿರುವುದು ಕಂಡು ಬಂತು.