ವೈಭವದ ರಾಘವೇಂದ್ರ ಸ್ವಾಮಿ ವರ್ಧಂತಿ ಮಹೋತ್ಸವ

ಹಿರಿಯೂರು ನಗರದ ಚಿಕ್ಕಪೇಟೆ ಬಳಿ ಇರುವ ಶ್ರೀ ರಾಘವೇಂದ್ರ ಸ್ವಾಮಿ ದೇವಾಲಯದಲ್ಲಿ  ಗುರುರಾಯರ ವರ್ಧಂತಿ ಮಹೋತ್ಸವ ದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವು ಅತ್ಯಂತ ವೈಭವದಿಂದ ನಡೆಯಿತು.  ಇದರ ಅಂಗವಾಗಿ  ರಾಯರಿಗೆ ಅಭಿಷೇಕ ಅರ್ಚನೆ ಹೂವಿನ ಅಲಂಕಾರ ತೊಟ್ಟಿಲು ಪೂಜೆ ಉಯ್ಯಾಲೋತ್ಸವ ನವಗ್ರಹ ಪೂಜೆ ಹಾಗೂ  ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಅರ್ಚಕರಾದ ಹೆಚ್ ವಿ ಮಂಜುನಾಥ್  ಆಚಾರ್ಯ ಮತ್ತು ಮಕ್ಕಳು ಹಾಗೂ ಬೃಂದಾವನ ಮಿತ್ರಕೂಟದ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು  ನಗರದ ಅನೇಕ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುರಾಯರ ಕೃಪೆಗೆ ಪಾತ್ರರಾದರು.