ವೈಭವದಿಂದ ಸಂಪನ್ನಗೊಂಡಶ್ರೀ ಶ್ರೀ 1008 ಶ್ರೀ ವಿದ್ಯಾತಪೆÇೀನಿಧಿ ತೀರ್ಥರ ಆರಾಧನಾ ಮಹೋತ್ಸವ

ಕಲಬುರಗಿ:ಜೂ.7:ಶ್ರೀವಿದ್ಯಾತಪೆÇೀನಿಧಿ ತೀರ್ಥರು ಜ್ಞಾನ, ಭಕ್ತಿ, ವೈರಾಗ್ಯ, ಆನಂದ ಅರ್ಥಾತ್ ಮೋಕ್ಷ ಈ ಎಲ್ಲಾ ಅಂಶಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದು ತಮ್ಮ 21 ವರ್ಷದ ಆಶ್ರಮದ ದಿನಗಳಲ್ಲಿ ಪಾಲಿಸಿದ ಮಹನೀಯರು ಎಂದು ವೇದಮೂರ್ತಿ ಶ್ರೀ ಆಕಾಶರಾಜಾಚಾರ್ಯರು, ಶ್ರೀ ಶ್ರೀ 1008 ಶ್ರೀ ವಿದ್ಯಾ ತಪೆÇೀನಿಧಿ ತೀರ್ಥ ಶ್ರೀಪಾದಂಗಳವರು ಉತ್ತರಾರಾಧನೆ ನಿಮಿತ್ಯ ಪ್ರವಚನ ನೀಡಿದರು.
ಸುರಪುರ ತಾಲೂಕಿನ ಹುಣಸಿಹೊಳೆ ಗ್ರಾಮದ ವೃಂದಾವನದಲ್ಲಿ ನೆಲೆಸಿರುವ ಶ್ರೀಪಾದಂಗಳವರು ವೈರಾಗ್ಯ ಶಿರೋಮಣಿಗಳಾಗಿದ್ದರು ಬಂದ ಭಕ್ತರಿಗೆ ಮಂದಹಾಸದಿಂದ ಅವರ ಕಷ್ಟಗಳನ್ನು ಕಳೆಯುವುದಕ್ಕಾಗಿ ಅನನ್ಯ ಭಕ್ತಿಯಿಂದ ಶ್ರೀ ವಿಠ್ಠಲಕೃಷ್ಣ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದರು. ಹುಣಸಿಹೊಳೆಯ ಗ್ರಾಮದ ಜನರು ತಮಗೆ ಹಾಗೂ ಜಾನುವಾರುಗಳಿಗೆ ಕಷ್ಟ ರೋಗ ರುಜಿನಗಳ ನಿವಾರಣೆಗಾಗಿ ಮೂಲವೃಂದಾವನದ ಪ್ರದಕ್ಷಿಣೆ ಮಾಡಿ ಕಷ್ಟ ಪರಿಹರಿಸಿಕೊಳ್ಳುತ್ತಿದ್ದರು, ಅದು ಈಗಲೂ ಕೂಡ ಕಾಣಬಹುದು ಇವರ ವೃಂದಾವನಕ್ಕೆ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ ತಮ್ಮ ತಮ್ಮ ಇಷ್ಟಾರ್ಥ ಹೊಂದಿದವರು ಅನೇಕರು. ಅಭಿನವ ರಾಯರು ಎಂಬ ಹೆಸರಿಗೆ ಪಾತ್ರರಾಗಿದ್ದಾರೆಂದು ಶ್ರೀಪಾದಂಗಳವರ ಮಹಿಮೆಯನ್ನು ಕೊಂಡಾಡಿದರು.

ವೇದ ಬ್ರಹ್ಮಶ್ರೀ ಪಾರ್ಥಸಾರಥಿ ಗುರುಗಳ ವೈದಿಕ ವೃಂದದಿಂದ ಶ್ರೀ ಶುಕ್ಲಯಜುರ್ವೇದದ ಜಟಾಪಾರಾಯಣ, ವೇದಮೂರ್ತಿಗಳಾದ ಶ್ರೀವಿಷ್ಣುಪ್ರಕಾಶ್ ಜೋಶಿ, ದಿಲೀಪಾಚಾರ್ಯ ಕಮಲಾಪುರ ಅವರಿಂದ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ವೇದಘೋಷ, ಶ್ರೀ ಮನೋಹರ ಮಾಡಿಗೇರಿ ವೈದಿಕರಾದ ರಾಜು ಜೋಷಿ, ವಿನುತ ಜೋಶಿ ಅವರಿಂದ ಬೆಳಿಗ್ಗೆ ಪುರುಷ ಸೂಕ್ತದೊಂದಿಗೆ ಮೂಲ ವೃಂದಾವನದ ಶುದ್ಧೋದಕ ಸ್ನಾನ, ಅಲಂಕಾರ, ಪೂಜೆ, ಮಂಗಳಾರತಿ ನೈವೇದ್ಯ, ಶ್ರೀ ವಿದ್ಯಾ ಕಣ್ವವಿರಾಜ ತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ನೆರವೇರಿತು. ವಿವಿಧ ಸಾಂಸ್ಕøತಿಕ ಮತ್ತು ಸಂಗೀತ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಸಂಜೆ ಶ್ರೀಮತಿ ಶಾಂತ ದೇಶಪಾಂಡೆ ಅವರಿಂದ ದಾಸವಾಣಿ ಕಾರ್ಯಕ್ರಮ ಜರಗಿತು.

ಶ್ರೀಪಾದರ ಪೂರ್ವಾಶ್ರಮದ ಪುತ್ರರಾದ ಔದುಂಬರಭಟ್ ಜೋಶಿ, ಟ್ರಸ್ಟನ ಅಧ್ಯಕ್ಷರಾದ ಶ್ರೀ ಮನೋಹರ್ ಮಾಡಗೇರಿ, ದಿವಾನರಾದ ಸುರೇಶ್ ಕುಲಕರ್ಣಿ, ಭೀಮಾಚಾರ್ಯ ಜೋಶಿ ವನದುರ್ಗ, ರಾಜು ಜೋಶಿ, ಶ್ರೀಮಧುಸೂಧನಾಚಾರ್ಯ ಜೋಶಿ, ವಿನುತ ಏಸ್ ಜೋಶಿ, ರಘುನಾಥ್ ಜೋಶಿ, ಶ್ರೀ ರಾಘವೇಂದ್ರ ಆಲಗೂರು, ಪಿ ಬಿ ಹಂಗರಗಿ, ಪಾಪಣ್ಣಾಚಾರ್ಯ ರಂಗಂಪೇಟೆ, ಕಿಶನರಾವ್ ದೇಸಾಯಿ, ಗುರುರಾಜ್ ಜೋಶಿ, ರಾಮಣ್ಣ ಸೂಗೂರು, ಭೀಮಣ್ಣ ನಾಡಿಗೇರ, ಮಂಜುನಾಥ್ ಹಾಗೂ ಶ್ರೀಮಠದ ಸಿಬ್ಬಂದಿಗಳಾದ ಅನಂತ್, ಲಕ್ಷ್ಮಣ್, ಸಂತೋಷ್, ಶ್ರೀ ಸಂಸ್ಥಾನದ ಶಿಷ್ಯವರ್ಗ ಭಕ್ತರೆಲ್ಲರು ಭಾಗವಹಿಸಿದ್ದರು.