ವೈಭವದಿಂದ ಜರುಗಿದ ಶ್ರೀ ಕಲ್ಲೇಶ್ವರ ಸ್ವಾಮಿಯ ರಥೋತ್ಸವ 

ಜಗಳೂರು.ಏ.೧೨; :ತಾಲೂಕಿನ ಕಲ್ಲೇದೇವರಪುರದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿಯ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ  ನೆರವೇರಿತು.ಕಲ್ಲೇಶ್ವರ ಸ್ವಾಮಿಯ ರಥೋತ್ಸವಕ್ಕೆ ನಾನಾ ಬಣ್ಣಗಳ ಬಾವುಟ ಹಾಗೂ ನಾನಾ ಬಗೆಯ ಹೂಗಳಿಂದ ಶೃಂಗಾರಗೊಳಿಸಲಾಯಿತು ಹರಕೆ ಹೊತ್ತ ಭಕ್ತರು ನಾನಾ ಹೂಗಳನ್ನು ಬೃಹತ್ ಹಾರಗಳನ್ನು ವಾದ್ಯಗಳ ಮೂಲಕ ಮೆರವಣೆಗೆಯಲ್ಲಿ ತಂದು ಸ್ವಾಮಿಯ ರಥಕ್ಕೆ ಅರ್ಪಿಸುವುದು ವಿಶೇಷವಾಗಿತ್ತು .ನಂತರ ಸಾಯಂಕಲ ಮುಕ್ಕಿಬಾವುಟ ಹಾರಾಜು ಪ್ರಕ್ರಿಯೆ ನಡೆಯಿತ್ತು ಜಗಳೂರು ತಾಲ್ಲೂಕಿನ ಹನುಮಂತಪುರ ಗ್ರಾಮದ ಶರಣಪ್ಪ 1.ಲಕ್ಷದ 1ಸಾವಿರದ ಒಂದು ರೂಪಾಯಿಗೆ ಮುಕ್ಕಿ ಬಾವುಟ ತಮ್ಮದಾಗಿಸಿಕೊಂಡರು. ಮೂಲಸ್ಧನದಿಂದ ಪಾದಗಟ್ಟಿವರೆಗೆ.ನಂದಿಕೋಲು,ಕುಣೆತ ಹಾಗೂ ನಾನಾ ಜನಪದ ವಾದ್ಯಗಳೊಂದಿಗೆ, ಭಕ್ತರು ರಥವನ್ನು ಎಳೆದರುಇದೇ ಸಂದರ್ಭದಲ್ಲಿ ಜಗಳೂರು ತಾಲೂಕು ದಂಡಾಧಿಕಾರಿ  ಸಂತೋಷ್ ಕುಮಾರ್. ಜಿ ಹಾಗೂ ಮಾಜಿ ಶಾಸಕರಾದ ಎಚ್.ಪಿ ರಾಜೇಶ್.ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ. ಕಾಂಗ್ರೆಸ್ ಮುಖಂಡರಾದ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ. ಬಿಜೆಪಿ ಪಕ್ಷದ ಮುಖಂಡರು ನಿವೃತ ಡಿವೈಎಸ್ಪಿ ಕಲ್ಲೇಶಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗ್ರಾಮಸ್ಥರು ಸೇರಿದಂತೆ ರಾಜಕೀಯ ಮುಖಂಡರು ರಥೋತ್ಸವಕ್ಕೆ  ಭಾಗವಹಿಸಿ ಶ್ರೀ ಕಲ್ಲೇಶ್ವರ ಸ್ವಾಮಿಯ ದರ್ಶನ ಪಡೆದರು “ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಸುತ್ತ ಮುತ್ತಲ ಗ್ರಾಮ ದಿಂದ ಜನರು ಬಂದು.ರಥಕ್ಕೆ ತೆಂಗಿನ ಕಾಯಿ.ಬಾಳೆಹಣ್ಣು ಸೂರಬೆಲ್ಲ.ಹೂವಿನ ಹಾರಗಳನ್ನು ದೇವರಿಗೆ ಭಕ್ತಿ ಸಮರ್ಪಿಸಿದರು ಮತ್ತು ವೀರಗಾಸೆ.ಜಾನಪದ ವಾದ್ಯಗಳೊಂದಿಗೆ ದೇವರನ್ನು ಪಲ್ಲಕ್ಕಿ ಯಲ್ಲಿ ಕರೆತರಲಾಗುವುದು .ಭಕ್ತದಿಗಳು ಶ್ರದ್ಧಾ ಭಕ್ತಿಯಿಂದ ಸ್ವಾಮಿಯನ್ನು ನೆನೆದು ಬಾಳೆಹಣ್ಣು.ಸೂರಬೆಲ.ಮೆಣಸು. ರಥೋತ್ಸವದ ಗಾಲಿಗೆ ಹಣ್ಣು ಕಾಯಿ ಹೊಡೆಯುವುದರ ಮೂಲಕ ಶ್ರೀ ಕಲ್ಲೇಶ್ವರ ಸ್ವಾಮಿ ಭಕ್ತಿ ಕೃಪೆಗೆ ಪಾತ್ರರಾದರು