ವೈಭವದಿಂದ ಜರುಗಿದ ಭೊಗೇಶ್ವರ ರಥೋತ್ಸವ  

ಹರಪನಹಳ್ಳಿ.ಏ.೨ : ತಾಲೂಕಿನ ಜಂಗಮ ತುಂಬಿಗೆರೆ ಗ್ರಾಮದಲ್ಲಿ ನೂತನ ಭೊಗೇಶ್ವರ ರಥೋತ್ಸವ ವೈಭವದಿಂದ ಜರುಗಿತು.ರಥೋತ್ಸವಕ್ಕೂ ಮುನ್ನ ಭೊಗೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ,ಹೋಮಹವನ, ಡೊಳ್ಳು, ಭಜನೆ, ನಂದಿಕುಣಿತದೊAದಿಗೆ ಬೀದಿಯಲ್ಲಿ ಮೆರವಣಿಗೆ ಜರುಗಿತು.ನಂತರ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ನೂತನ ರಥೋತ್ಸವದ ಕಳಸಾರೋಹಣ ಕಾರ್ಯಕ್ರಮ.ದಿನಾಂಕ:30-3-2023 ರಾಮನವಮಿ ದಿವಸದಂದು ಆಂಜನೇಯಸ್ವಾಮಿ ಮತ್ತು ಬಸವೇಶ್ವರ ಸ್ವಾಮಿಗಳ ಉಚ್ಛಯ್ಯಗಳು ಜರುಗಿದವು.ಗ್ರಾಮದ ಹೊರಹೊಲಯದಲ್ಲಿರುವ ಐತಿಹಾಸಿಕ ಭೊಗೇಶ್ವರ ದೇವಸ್ಥಾನದಲ್ಲಿ ಭಕ್ತಸಮೂಹ ಪೂಜೆ ನೆರವೇರಿಸಿದರು.ಸಂಜೆ 5ಗಂಟೆಗೆ ನೂತನ ರಥೋತ್ಸವಕ್ಕೆ ಹಣ್ಣು,ಉತ್ತತ್ತಿ ಎಸೆದು,ತೆಂಗಿನ ಕಾಯಿ ಸಮರ್ಪಿಸಿ ಭಕ್ತಿ ಪರ್ವಮೆರೆದರು.ರಥೋತ್ಸವಕ್ಕೆ ನೆರೆಹೊರೆಯ ಗ್ರಾಮದ ಗಡಿಗುಡಾಳ್,ಶ್ರೀನಿವಾಸಪುರ,ಅಣಜಿಗೆರೆ,ರಾಮಘಟ್ಟ,ಉಚ್ಚಂಗಿದುರ್ಗ ಸೇರಿದಂತೆ ಭಕ್ತರು ಆಗಮಿಸಿ ದೈವ ಭಕ್ತಿಗೆ ಪಾತ್ರರಾದರು.ಗ್ರಾಮಪಂಚಾಯಿತಿ ಸದಸ್ಯ ಟಿ.ಶಿವಣ್ಣ ಅವರು ₹265000 ಕ್ಕೆ ಪಟ ಹರಾಜು ಪಡೆದರು.ಕೆ ಬಿ.ಅಜ್ಜನಗೌಡ ಅವರು ₹35000 ಕ್ಕೆ ಹೂವಿನ ಹಾರ ಹರಾಜು ಪಡೆದರು.ಜಂಗAತುAಬಿಗೆರೆ ಹಾಲಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಮುಖಂಡರಾದ ಪರುಶರಾಮಪ್ಪ, ಈ.ಹಾಲೇಶ್, ರಮೇಶ್,ಟಿ.ಎಂ.ರವೀAದ್ರ, ಅಜ್ಜನಗೌಡ್ರು,ದ್ಯಾಮನಗೌಡ,ಟಿ.ಶಿವಣ್ಣ,ಹನುಮAತಪ್ಪ,ಜ್ಯೋತಿಪರುಶರಾಮ್,ಜಯ್ಯಮ್ಮಹಿರೇಗೌಡ,ಮAಜಕ್ಕ ಕೊಟ್ರೇಶಪ್ಪ,ರುದ್ರೇಶ್,ಸೇರಿದಂತೆ ಭಾಗವಹಿಸಿದ್ದರು.