ವೈದ್ಯ ಶಿವರಾಜ್‌ಗೌಡ ಅವರಿಗೆ ಕರುನಾಡ ಸಾಧಕರತ್ನ ಪ್ರಶಸ್ತಿ ಪ್ರದಾನ

ಡಾ.ಶಿವರಾಜಗೌಡ ಅವರಿಗೆ ಕರುನಾಡ ಸಾಧಕರತ್ನ ಪ್ರಶಸ್ತಿಯನ್ನು ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಘಟಕ ಅಧ್ಯಕ್ಷ ಹುಲಿಯೂರು ದುರ್ಗ ಲಕ್ಷ್ಮೀನಾರಾಯಣ ಅವರು ನೀಡಿ ಗೌರವಿಸಿದರು. ಕವಿಯತ್ರಿ ಉನಿಷಾ, ಕೆ.ಎಸ್.ಅಕ್ರಂಪಾಷ, ಸಾಹಿತಿ ಮುನಿಸಂಜೀವಪ್ಪ, ಪಯಾಜ್‌ಅಹಮದ್‌ಖಾನ್, ಜಾನಪದ ಗಾಯಕಸಿಕಲ್ ನರಸಿಂಹಪ್ಪ, ಗುರುಕುಲಾ ಪ್ರತಿಷ್ಠಾನ ಬೆಂಗಳೂರು ಜಿಲ್ಲಾಧ್ಯಕ್ಷ ಎಚ್.ಎಸ್.ಭಾರತಿ ಇದ್ದಾರೆ.

ಬೆಂಗಳೂರು: ಶಾಂತಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವರಾಜ್‌ಗೌಡ ಅವರು ಗ್ರಾಮೀಣ ಪ್ರದೇಶದ ಕುಗ್ರಾಮಗಳಿಗೆ ತೆರಳಿ ತಿಂಗಳಿಗೊಮ್ಮೆ ವಿವಿಧ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ, ಔಷಧಿ ನೀಡುವ ಮೂಲಕ ಸಾವಿರಾರು ಬಡಜನರ ಆರೋಗ್ಯ ಸೇವೆ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಕಲೆ, ಶಿಕ್ಷಣ, ಕ್ರೀಡೆ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ ಎಂದು ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯಘಟಕ ಅಧ್ಯಕ್ಷ ಹುಲಿಯೂರು ದುರ್ಗ ಲಕ್ಷ್ಮೀನಾರಾಯಣ ಪ್ರಶಂಸೆ ವ್ಯಕ್ತಪಡಿಸಿದರು.
ಮಾಗಡಿ ರಸ್ತೆಯ ಬಿಇಎಲ್ ಒಂದನೇ ಹಂತದಲ್ಲಿ ಕರುನಾಡು ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಡಾ.ಶಿವರಾಜ್‌ಗೌಡ ಅವರಿಗೆ ನೀಡಿದ ಕರುನಾಡ ಸಾಧಕರತ್ನ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಇವರು ಹಣ ಮಾಡುವ ಪ್ರವೃತ್ತಿ ಬೆಳಸಿಕೊಳ್ಳದೆ ತಾವು ಸಂಪಾದಿಸಿದ ಶೇ.೫ಂರಷ್ಟು ಹಣವನ್ನು ಕಡುಬಡವರ ಸೇವೆಗೆ ಮುಡುಪಿಟ್ಟು ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯ ಎಂದರು.
ಕರುನಾಡು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಯಾಜ್‌ಅಹಮದ್‌ಖಾನ್ ಮಾತನಾಡಿ ಶಿವರಾಜ್‌ಗೌಡ ಅವರು ಹಣ ಮಾಡುವ ಪ್ರವೃತ್ತಿ ಬಿಟ್ಟು, ಹೃದಯವಂತಿಕೆ, ಸಾಂಸ್ಕೃತಿಕ ರಾಯಬಾರಿಯಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಇವರಂತೆ ಇತರರು ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮ ಜೀವನ ಸಾರ್ಥಕಗೊಳಿಸಿಕೊಂಡು ಮಾನವೀಯತೆ ಕಂಡು ಕೊಳ್ಳಬೇಕಾಗಿದೆ ಎಂದರು.
ಲಯನ್ಸ್ ಕ್ಲಬ್ ಬೆಂಗಳೂರು ಅಧ್ಯಕ್ಷ ಟಿ.ರವಿನಾಯ್ಡು, ಕರುನಾಡ ಪರಿಷತ್ತುಪುರಾನ ಕಾರ್ಯದರ್ಶಿ ಕೆ.ಎಸ್.ಅಕ್ರಂಪಾಷ, ಸಾಹಿತಿ ಮುನಿಸಂಜೀವಪ್ಪ, ಜಾನಪದ ಗಾಯಕ ಸಿಕಲ್ ನರಸಿಂಹಪ್ಪ, ಗುರುಕುಲಾ ಪ್ರತಿಷ್ಠಾನ ಬೆಂಗಳೂರು ಜಿಲ್ಲಾಧ್ಯಕ್ಷ ಎಚ್.ಎಸ್.ಭಾರತಿ, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷೆ, ಕವಿಯತ್ರಿ ಉನಿಷಾ ಮಾತನಾಡಿದರು.