ವೈದ್ಯ ವೃತ್ತಿ ಜೊತೆಗೆ ಸಂಘ ಕಟ್ಟಿ ಸಮಾಜಸೇವೆ ಸಚಿವ ಡಾ. ಪಾಟೀಲ್ ಮೆಚ್ಚುಗೆ

ಸೇಡಂ,ಜು,02: ಖಾಸಗಿ ವೈದ್ಯರು ಪ್ರತ್ಯೇಕವಾಗಿ ತಮ್ಮ ವೈದ್ಯವೃತ್ತಿಯನ್ನು ಆರಂಭಿಸುತ್ತಿದ್ದರು, ಆದರೆ ಇಂದಿನ ದಿನಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರು ಸಂಘಟಿಸಿ ಸಮಾಜ ಸೇವೆಗೆ ತೊಡಗುತ್ತಿರುವುದು ಸಂತಸ ತಂದಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು

ಪಟ್ಟಣದ ಸ್ಟಾಫ್ ರಿಕ್ರಿಯೇಷನ್ ಕ್ಲಬ್, ವಾಸವದತ್ತಾ ಸಿಮೆಂಟ್, ಎಲ್ ಎನ್ ನಗರದಲ್ಲಿ ಸೇಡಂ ಪ್ರೈವೇಟ್ ಡಾಕ್ಟರ್ಸ್ ಹೆಲ್ಪರ್ ಟ್ರಸ್ಟ್ ಹಾಗೂ ಕೆಮಿಸ್ಟ್ ಅಂಡ್ ಡ್ರಜಿಸ್ಟ್ ಅಸೋಸಿಯೇಷನ್, ಸೇಡಮ್
ಮತ್ತು ಲ್ಯಾಬೋರೇಟರಿ ಅಸೋಸಿಯೇಷನ್,ಸಹಯೋಗದಲ್ಲಿ ಡಾಕ್ಟರ್ಸ್ ಡೇ ಸೆಲೆಬ್ರೇಶನ್ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಕರೋನಾ ಸಂದರ್ಭದಲ್ಲಿ ಸರ್ಕಾರಿ ವೈದ್ಯರ ಜೊತೆಗೂಡಿ ಖಾಸಗಿ ವೈದ್ಯರು ಕೈಜೋಡಿಸಿ ಕರೋನ ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.ಈ ವೇಳೆಯಲ್ಲಿ ವೇದಿಕೆ ಮೇಲೆ ಡಾ.ಅನುರೂಪ್,ಡಾ. ಶ್ರೀಮತಿ ಭಾಗ್ಯಶ್ರೀ ಎಸ್ ಪಾಟೀಲ್,ವೆಂಕಟಪತಿ ರಾಜು,ತಾಲೂಕಾ ಟಿ ಹೆಚ್ ಓ ಡಾ.ರಾಕೇಶ ಕಾಂಬಳೆ ಡಾ.ಗೀತಾ ಪಾಟೀಲ್,
ಡಾ.ವೇಣುಗೋಪಾಲ ರೆಡ್ಡಿ,ಡಾ. ದೇಶಪಾಂಡೆ, ಖಾಸಗಿ ವೈದ್ಯರ ಸಂಘದ ಅಧ್ಯಕ್ಷ ರಾಜಕುಮಾರ್ ಎಮ್ ಬಿರಾದರ್, ಇದ್ದರು, ಡಾ.ರಾಜಕುಮಾರ್ ಬಿರಾದರ್ ಸ್ವಾಗತ ಭಾಷಣ ಮಾಡಿದರೆ ಪ್ರಾಸ್ತಾವಿಕ ಮಾತು ಡಾ ಸದಾನಂದ ಬೂದಿ ಮಾತನಾಡಿದರೆ,ಡಾ. ಉದಯಕುಮಾರ ಶಹಾ ನಿರೂಪಣೆ ಮಾಡಿದರು. ಈ ವೇಳೆಯಲ್ಲಿ ಡಾ. ಓಂ ಪ್ರಕಾಶಪಾಟೀಲ್, ಡಾ. ನಾಗನಾಥ್,ಡಾ. ಶ್ರೀನಿವಾಸ್, ಡಾ. ಶ್ರೀನಿವಾಸ್ ಮೊಕದಂ, ಡಾ.ಸಂತೋಷಕುಮಾರ ಚವ್ಹಾಣ ಡಾ.ಪ್ರವೀಣ ಜೋಶಿ,ಡಾ.ವಿನೋದ್ ಸಂಗಾವಿ, ಡಾ.ಜಗನ್ನಾಥ್ ಗುಡ್ಡದ ಸೇರದಂತೆ ಮಹಿಳಾ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.