ವೈದ್ಯ ವಿದ್ಯಾರ್ಥಿಗಳಿಗೆ ಬಾಲಾಜಿ ಸಹಕಾರ ಸಂಘದಿಂದ ಸನ್ಮಾನ

ಭಾಲ್ಕಿ : ಜ.13: ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ನೀಟ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಸರಕಾರಿ ಕೋಠಾದಡಿ ಮೇಡಿಕಲ್ ಸೀಟ್‍ಗೆ ಅರ್ಹರಾದ ವಿದ್ಯಾರ್ಥಿಗಳಿಗೆ ಬಾಲಾಜಿ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪಟ್ಟಣದ ಸುಭಾಷ ಚೌಕನ ಬಾಲಾಜಿ ನಗರದ ಬಡಾವಣೆಯ ಬಾಲಾಜಿ ಸಹಕಾರ ಸಂಘ ಪ್ರತೀ ವರ್ಷ ಬಡಾವಣೆಯ ಮಕ್ಕಳು ವಿವಿಧ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಪ್ರತಿಭಾವಂತರಿಗೆ ಸತ್ಕರಿಸುವ ಪರಿಪಾಠವಿದೆ.
ಈ ವರ್ಷ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ನೀಟ್ ಪರೀಕ್ಷೆಯಲ್ಲಿ ಪಾಸಾಗಿ ಸರಕಾರಿ ವೈದ್ಯಕೀಯ ಸೀಟು ಪಡೆದ ವಿಶ್ವಲಿಂಗ ಪ್ರಭು ಡಿಗ್ಗೆ ಇ.ಎಸ್.ಐ.ಮೆಡಿಕಲ್ ಕಾಲೇಜು ಕಲಬುರ್ಗಿ, ಪ್ರಥ್ವಿರಾಜ ಉಮಾಕಾಂತ ಡಿಗ್ಗೆ ಜಿಮ್ಸ್ ಮೆಡಿಕಲ್ ಕಾಲೇಜು ಕಲಬುರ್ಗಿ, ಜಾನವಿ ಕೃಷ್ಣಾಜಿ ಮಾನೆ, ಜಿಮ್ಸ್ ಮೆಡಿಕಲ್ ಕಾಲೇಜು ಕಲಬುರ್ಗಿ, ಹಾಗೂ ವೈಷ್ಣವಿ ಪ್ರಕಾಶ ಬಿರಾದಾರ, ಎಮ್.ವ್ಹಿ.ಜೆ. ಮೆಡಿಕಲ್ ಕಾಲೇಜು ಬೆಂಗಳೂರು ಇವರುಗಳನ್ನು ಸಂಘದ ವತಿಯಿಂದ ಸಂಘದ ಅಧ್ಯಕ್ಷ ಕಾಶಿನಾಥ ಭೂರೆ ಹಾಗೂ ಗೌರವ ಅಧ್ಯಕ್ಷ ಸೋಮನಾಥ ಮೂಲಗೆ ನೇತೃತ್ವದಲ್ಲಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಬಡಾವಣೆಯ ಕೌನ್ಸಿಲ್ಲರ್ ಪಾಂಡುರಂಗ ಕನಸೆ, ಹಿರಿಯ ಪತ್ರಕರ್ತ ಗಣಪತಿ ಬೋಚರೆ, ನಿವೃತ್ತ ಕಂದಾಯ ಅಧಿಕಾರಿ ವಿಥಲರಾವ ಸಾಳುಂಕೆ, ನಾಗರಾಜ ಮಡ್ಡೇರ್, ಪ್ರಾಚಾರ್ಯ ಅಂಕುಶ ಢೋಲೆ, ಸದ್ಗುರು ಶಾಲೆಯ ಸಂಸ್ಥಾಪಕ ಸೋಮನಾಥ ಮುದ್ದಾ, ಏಷಿಯನ್ ಪೇಂಟ್ಸ್ ಮಾಲೀಕ ಪಾಂಡುರಂಗ ಪಾಟೀಲ, ಸಂತೋಷ ಮಾನಕಾರಿ, ಬಾಜಿರಾವ ಮೇತ್ರೆ, ಸುಭಾಷ ಶೆಟಕಾರ, ಮಧುಕರ ಮಾಟೆ, ರವಿ ಭಾತಂಬ್ರೆ, ಕಸಾಪದ ಮಹಿಳಾ ಪ್ರತಿನಿಧಿ ಚಂದ್ರಕಲಾ ಡಿಗ್ಗೆ ಸೇರಿದಂತೆ ಬಾಲಾಜಿ ಸಹಕಾರ ಸಂಘದ ಪದಾಧಿಕಾರಿಗಳು ಸದಶ್ಯರು ಇದ್ದರು.