ವೈದ್ಯ ಡಾ. ಆನಂದ ಅಂಬಲಿಯವರಿಗೆ ಅಂತರ್‍ರಾಷ್ಟ್ರೀಯ ಪ್ರಶಸ್ತಿ

ವಿಜಯಪುರ, ಎ.20-ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಪ್ರಾಧ್ಯಾಪಕ, ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಜೆರಿಯಾಟ್ರಿಕ್ ಕ್ಲಿನಿಕ್ ವೈದ್ಯ ಡಾ. ಆನಂದ ಅಂಬಲಿಯವರಿಗೆ ಇಂಗ್ಲೆಂಡ್‍ನ ಎಡಿನ್‍ಬರ್ಗ್ “ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಫ್ ಎಡಿನ್ಬರ್ಗ್” ಅಂತರ್‍ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಇಂಗ್ಲೆಂಡ್ ಎಡಿನ್‍ಬರ್ಗ್‍ನಲ್ಲಿ 1691 ರಲ್ಲಿ ಸ್ಥಾಪಿಸಲಾಯಿತು. ಈ ವಿವಿಯು ವಿಶ್ವದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ವೈದ್ಯಕೀಯ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ಪ್ರಪಂಚದಾದ್ಯಂತದ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ವೈದ್ಯರನ್ನು ಗುರುತಿಸಿ, ಫೆಲೋಶಿಪ್ ಪ್ರಶಸ್ತಿಯನ್ನು ನೀಡುತ್ತಿದೆ.
ವಿಜಯಪುರ ಜಿಲ್ಲೆಯ ಇಂಡಿಯನ್ ಕಾಲೇಜ್ ಆಫ್ ಫಿಸಿಶಿಯನ್ ಮೊದಲ ಪ್ರಶಸ್ತಿಯನ್ನು ಡಾ.ಅರುಣ ಇನಾಮದಾರ ಅವರು ಪಡೆದರೆ, ಬಿ.ಎಲ್.ಡಿ.ಇ ಡಿಮ್ಡ್ ವಿವಿ ಜಿರಿಯಾಟ್ರಿಕ್ ವೈದ್ಯ ಡಾ.ಅಂಬಲಿಯವರು ಎರಡನೇಯವರಾಗಿರುವುದು ವಿಶೇಷವಾಗಿ ಎಂದು ಡಾ.ಅರವಿಂದ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಜಿರಿಯಾಟ್ರಿಕ್ ಕ್ಲಿನಿಕ್ ಪ್ರತಿ ಬುಧವಾರ ಬೆ.9 ರಿಂದ ಸಂ.5 ರವರೆಗೆ ಕಳೆದ 13 ವರ್ಷಗಳಿಂದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಆರೋಗ್ಯ ಸಂಬಂಧಿತ, ಬುದ್ಧಿಮಾಂದ್ಯತೆ ಮತ್ತು ರೋಗನಿರೋಧಕ ಚಿಕಿತ್ಸೆಗಳಂತಹ ವಿಶೇಷ ಸೇವೆಗಳನ್ನು ಒದಗಿಸುತ್ತಾ ಬಂದಿದೆ. ಇದರೊಂದಿಗೆ ಆರೋಗ್ಯ ಜಾಗೃತಿ ಮಾತುಕತೆ, ಆರೋಗ್ಯ ತಪಾಸಣೆ ಶಿಬಿರಗಳು ಮತ್ತು ಸಮುದಾಯ ಸೇವೆಗಳಂತಹ ವಿವಿಧ ಚಟುವಟಿಕೆಗಳನ್ನು ಗುರುತಿಸಿ, ಎಡಿನ್‍ಬರ್ಗ್ ವಿಶ್ವವಿದ್ಯಾಲಯವು ಡಾ.ಅಂಬಲಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ.ಆನಂದ ಅಂಬಲಿಯವರ ಸಾಧನೆಗೆ ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್, ಉಪಕುಲಪತಿ ಡಾ.ಎಂ.ಎಸ್.ಬಿರಾದಾರ, ಸಮಉಪಕುಲಪತಿ ಡಾ.ಆರ್.ಎಸ್.ಮುಧೋಳ, ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ್ ಹೊನ್ನುಟಗಿ, ಡಾ. ಅರುಣ್ ಇನಾಮದಾರ ಅವರು ಸೇರಿದಂತೆ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ