ವೈದ್ಯೆ ಲಿಖಿತಾ ಜೊತೆ ನಟ ಪವನ್ ಶೌರ್ಯ ನಿಶ್ಚಿತಾರ್ಥ

ಗೂಳಿಹಟ್ಟಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟ ಪವನ್ ಶೌರ್ಯ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ವೈದ್ಯ ಲಿಖಿತಾ ಅವರೊಂದಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಮಾರ್ಚ್ 23 ಮತ್ತು 24ರಂದು ಜೆಪಿ ನಗರದಲ್ಲಿ ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿದೆ.

ಫಿಸಿಥೆರಪಿ ಮತ್ತು ಮೂಳೆ ತಜ್ಞರಾಗಿರುವ ಡಾ. ಲಿಖಿತಾ ಅವರೊಂದಿಗೆ ನಟ ಪವನ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎರಡು ಕುಟುಂಬಗಳ ಆಪ್ತರು ಕೆಲವೇ ಕೆಲವು ಸ್ನೇಹಿತರು ಭಾಗವಹಿಸಿದ್ದರು.

ಮಣಿಪಾಲ್ ಮತ್ತು ನಾರಾಯಣ ಹೃದಯಾಲಯದಲ್ಲಿ ಲಿಖಿತಾ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಪುಟ್ಟೇನಹಳ್ಳಿಯಲ್ಲಿರುವ ಎಲಾನ್ ಕಲ್ಯಾಣಮಂಟಪದಲ್ಲಿ ನಡೆಯಲಿದೆ.

ಉಡುಂಬ,ಗೂಳಿಹಟ್ಟಿ ಸೇರಿದಂತೆ ಹಲವು ಚಿತ್ರಗಳಲ್ಲಿ ಪವನ್ ಶೌರ್ಯ ನಟಿಸಿದ್ದಾರೆ‌.ಸದ್ಯ ಜನನ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಕೊತೆ 786 ಚಿತ್ರದಲ್ಲಿ ನಟಿಸುತ್ತಿದ್ದಾರೆ