ವೈದ್ಯೆ ಜೊತೆ ಅಸಭ್ಯ ವರ್ತನೆ: ಕ್ಲೀನರ್‌ನ ಬಂಧನ 

ಉಳ್ಳಾಲ, ನ.1೧- ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬಸ್ ಕ್ಲೀನರ್ ಒಬ್ಬನನ್ನು ಉಳ್ಳಾಲ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. 

ಬಂಧಿತ ಬಸ್‌ ಕ್ಲೀನರ್‌ನನ್ನು ಬಜ್ಪೆ ಕೆಂಜೂರು ನಿವಾಸಿ, ಬಸ್ ಕ್ಲೀನರ್ ಮುಹಮ್ಮದ್ ಇಮ್ರಾನ್(26) ಎಂದು ಗುರುತಿಸಲಾಗಿದೆ. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯದಲ್ಲಿರುವ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ‌ರು. ಬಸ್ ಗುರುವಾರ ಮುಂಜಾನೆ ಉಳ್ಳಾಲ ಠಾಣಾ ವ್ಯಾಪ್ತಿಗೆ ತಲುಪಿದಾಗ ಬಸ್ ಕ್ಲೀನರ್ ಮುಹಮ್ಮದ್ ಇಮ್ರಾನ್ ತಾನು ಧರಿಸಿದ್ದ ಪ್ಯಾಂಟ್ ನ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವೈದ್ಯೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.