
ಬೀದರ್ ಜು.6:ಸಾರ್ವಜನಿಕರಿಂದ ಹಾಗೂ ವಿವಿಧ ಸನ್ನಿವೇಶಗಳಲ್ಲಿ ವೈದ್ಯರನ್ನು ರಕ್ಷಿಸಲು ಕಠಿಣ ಕಾನೂನು ಜಾರಿಗೆ ತರಲಾಗುವುದು ಎಂದು ರಾಜ್ಯದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಅವರು ಜುಲೈ 1ರಂದು ಸಂಜೆ ಬೀದರ್‍ನ ಬ್ರಿಮ್ಸ್‍ನಲ್ಲಿ ವೈದ್ಯಕೀಯ ಸಂಘದಿಂದ (ಐಎಂಎ)ಬೀದರ್ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಯಾವುದೋ ಸಣ್ಣಪುಟ್ಟ ವಿಷಯಕ್ಕೆ ಸಂಬಂ„ಸಿದಂತೆ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿವೆ ಹೀಗಾಗಿ ಇದನ್ನು ತಡೆಗಟ್ಟಲು ಕಠಿಣ ಕಾನೂನು ಅಗತ್ಯವಾಗಿದೆ ಎಂದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಇದೇ ಶೈಕ್ಷಣಿಕ ವರ್ಷದಿಂದ ಬ್ರಿಮ್ಸ್ ವೈದ್ಯಕೀಯ ಕಾಲೇಜಿಗೆ ಪಿಜಿ ಸೀಟುಗಳನ್ನು ತರುವುದಾಗಿ ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಐಎಂಎ ಅಧ್ಯಕ್ಷ ಡಾ. ಮದನಾ ವೈಜಿನಾಥ ಹಾಗೂ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಪನಶೆಟ್ಟಿ ವಹಿಸಿದ್ದರು.
ಪ್ರತಿ ವರ್ಷ ಜಲೈ 1 ರಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಭಾರತ ರತ್ನ ಡಾ. ಬಿಸಿ ರಾಯ್ ಅವರು ಪ್ರಥಮ ಬಾರಿಗೆ 1962 ಚಾರಿಟೇಬಲ್ ಆಸ್ಪತ್ರೆ ಆರಂಭಿಸಿ ಸಮಾಜದಲ್ಲಿ ವೈದ್ಯರ ಮೌಲ್ಯಗಳನ್ನು ತೊರಿಸಿಕೊಟ್ಟರು ಅಂದಿನಿಂದ ಜುಲೈ 1ರಂದು ‘ವೈದ್ಯರ ದಿನಾಚರಣೆ’ ಆಚರಿಸಲಾಗುತ್ತದೆ ಎಂದು ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ವೈದ್ಯರನ್ನು ಸನ್ಮಾನಿಸಲಾಯಿತು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಸಮಾರಂಭದಲ್ಲಿ ಬಸವಕಲ್ಯಾಣದ ಸೀ ತe್ಞÉ ಡಾ. ಹೊಳಕುಂದೆ ಸುಶೀಲಾ, ಡಾ. ಭೂರಳೆ, ಭಾಲ್ಕಿಯ ಡಾ. ರಾಜೇಂದ್ರ ಜಾಧವ, ಔರಾದ್‍ನ ಡಾ. ಶೀಲವಂತ ಹಾಗೂ ಹುಮನಾಬಾದ್‍ನ ಡಾ. ವಿಜಯಕುಮಾರ ಚಿದ್ರೆ, ನಿವೃತ್ತ ಡಿಎಚ್‍ಓ ಡಾ. ದಾನಪ್ಪ, ಬೀದರ್‍ನ ವೈದ್ಯರಾದ ಡಾ. ಮಕ್ಸೂದ್ ಚಂದಾ, ಡಾ. ಓಂಕಾರ ಸ್ವಾಮಿ, ಡಾ. ರಾಜಶೇಖರ ಕುಲಕರ್ಣಿ, ಡಾ. ಸಿಎಸ್ ಮಾಲಿಪಾಟೀಲ್, ಮನ್ನಾಎಖ್ಖೇಳ್ಳಿಯ ಡಾ. ವೀರಪ್ಪ ಕೋರಿ ಸೇರಿದಂತೆ ಇನ್ನಿತರರು ಇದ್ದರು.