ವೈದ್ಯರ ಬಿಳಿ ಕೋಟ್ ರೋಗಿಯ ವಿಶ್ವಾಸ ನಂಬಿಕೆಯ ಪ್ರತೀಕ: ಗೋಪಾಲ್ ಹೊಸೂರು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜು 24 : ಗಾಂಧಿ ಟೋಪಿ ಸತ್ಯದ ಪ್ರತೀಕವಾಗಿದೆ ಹಾಗೆ ವೈದ್ಯರ ಬಿಳಿ ಕೋಟ್ ರೋಗಿಯ ನಂಬಿಕೆ, ವಿಶ್ವಾಸವನ್ನು ಉಳಿಸುವಂತದ್ದಾಗಿರಬೇಕು ಎಂದು ಗೋಪಾಲ್ ಹೊಸೂರು ಹೇಳಿದರು.
ಅವರು ಇಂದು ಸಂಜೆ
ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ ಐಎಂಎ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಳ್ಳಾರಿ ನನಗೆ ಎಂದೂ ಆತ್ಮೀಯವಾದುದು ಏಕೆಂದರೆ ನನ್ನ ಸಹ ಧರ್ಮಿಣಿ ಹೊಸಪೇಟೆಯವರು. ಅಲ್ಲದೆ ನಾನು ಇಲ್ಲಿ ಎಸ್ಪಿಯಾಗಿ ಸಲ್ಲಿಸಿದ ಸೇವೆ ಎಂದರು.

ಬಿ.ಕೆ.ಶ್ರೀನಿವಾಸ ಮೂರ್ತಿ ಅವರ ಸೇವೆಯನ್ನು ಸ್ಮರಿಸಿದ ಹೊಸೂರು ಅವರು, ಬಿ.ಸಿ.ರಾಯ್ ಅವರು ವ್ಯಕ್ತಿತ್ವದ ಬಗ್ಗೆ ತಿಳಿಸಿದರು. ವೈದ್ಯಕೀಯ ವಿಜ್ಞಾನ ಬಗ್ಗೆ
ಜೀವನ ಶೈಲಿಯೇ ಮುಕಜ್ಯ ಎಂದು ಮೂರು ಸಾವಿರ ವರ್ಷಗಳ ಹಿಂದೆಯೇ ಚರಕ, ಶುಶ್ರುತ ಅವರ ಹೇಳಿದ್ದರು.

ವೈದ್ಯರು ರೋಗಿಗಳಿಗೆ ಏನೆಲ್ಲ ಓದಿ ಔಷಧಿಕೊಡುವುದರ ಜೊತೆಗೆ ಅವರ ಜೊತೆ ಹೇಗೆ ನಡೆದು ಕೊಂಡರೆ ರೋಗ ನಿವಾರಣೆಗೆ ಸಹಕಾರಿ ಆಗಬಲ್ಲದು ಎಂಬುದನ್ನು ತಮ್ಮ ಜೀವನದ ಅನುಭವಗಳೊಂದಿಗೆ ವಿವರಿಸಿದರು.

ನಾನು ವೀರಪ್ಪನ್ನ ತಂಡದ ಬಂದೂಕಿನ ಬುಲೆಟ್ ನಿಂದ ಗಾಯಗೊಂಡು ಇಂದಿಗೂ ಜೀವಂತವಾಗಿರಲು ವೈದ್ಯರೇ ಕಾರಣ ಅದಕ್ಕಾಗಿ ನಾನು ವೈದ್ಯರನ್ನು ದೇವರು ಎಂದು ಭಾವಿಸಿರುವೆ ಎಂದರು.

ನನಗೆ ನನ್ನ ಸೇವೆ ಗಾಯಮಾಡಿದ್ದರೆ ನಿಮ್ಮ ಸೇವೆಯಿಂದ ಅದನ್ನು ನಿವಾರಣೆ ಮಾಡಿದ್ದು ಇದುವೇ ಈ ಸಮಾರಂಭದ ವಿಶೇಷ ಎಂದರು.

ನೈರುತ್ಯ ರೈಲ್ವೆ ವಲಯದ
ಉಪ ಆರ್ಥಿಕ ಸಲಹೆಗಾರ, ಐರನ್ ಮ್ಯಾನ್ ಅನ್ ಆಫ್ ಇಂಡಿಯಾ ಎಂದು ಕರೆಸಿಕೊಂಡಿರುವ
ಶ್ರೇಯಸ್ ಜಿ.ಹೊಸೂರು ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ. ಬಳ್ಳಾರಿಯಲ್ಲಿ ಮೂರು ವರ್ಷಗಳ ಕಾಲ ನಾನು ಬಾಲ್ಯದ ದಿನಗಳನ್ನು ಕಳೆದಿದ್ದೆ. ನನ್ನ ಕ್ರೀಡಾ ಸಾಧನೆಗೆ ಪರೋಕ್ಷವಾಗಿ ವೈದ್ಯರ ಸಹಕಾರವಾಗಿದೆ. ಕೋವಿಡ್ ಸಂದರ್ಭದಲ್ಲಿ ವೈದ್ಯರ ಸಹಕಾರ ಎಲ್ಲರೂ ಮರೆಯಲಾಗದಂತಹುದು ಎಂದರು. ವೈದ್ಯಕೀಯ ಇಂದು ಎಲ್ಲಾ ಹಂತದಲ್ಲಿ ವಿಶೇಷತೆ ಬಂದಿದೆ. ಆದರೆ ಆರೋಗ್ಯ ವ್ಯವಸ್ಥೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಸಿಲುಕಿದೆ ಈ ಬಗ್ಗೆ ಅನೇಕ ಆಕ್ಷೇಪಗಳ ಬಗ್ಗೆ ತಿಳಿಸಿ ಅದರ ಜೊತೆ ವೈದ್ಯರ ಜವಾಬ್ದಾರಿಯೂ ಹೆಚ್ಚಿದೆಂದರು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಬಿ.ಕೆ.ಸುಂದರ್ ಅಧ್ಯಕ್ಷತೆವಹಿಸಿ,
ಕೋವಿಡ್ ಕಾರಣದಿಂದ ಕೆಲ ವರ್ಷ ವೈದ್ಯರ ದಿನಾಚರಣೆ ನಡೆಸಿರಲಿಲ್ಲ. ಈ ವರ್ಷ ಮಾಡುತ್ತಿದೆ. ನಮ್ಮ ನಗರ ಸ್ವಚ್ಚತೆಗೆ ನಮ್ಮ ಸಂಘದಿಂದ ನಡೆಸಿದ ಪ್ರಯತ್ನ, ಜೊತೆಗೆ ಕೋವಿಡ್ ಸಮಯದಲ್ಲಿ ನಮ್ಮ ವೈದ್ಯರ ಸೇವೆಯನ್ನು ಸಮಾಜ ಶ್ಲಾಘಿಸಿದೆಂದರು.

ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ತಿಪ್ಪಾರೆಡ್ಡಿ, ಡಾ.ಬಾಲಬಾಸ್ಕರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜನಾರ್ಧನ, ಡಿಟಿಓ ಡಾ. ಇಂದ್ರಾಣಿ, ಡಾ.ಅನಿಲ್ ರಾಜೋಳಿ, ಹಿರಿಯ ಲೆಕ್ಕ ಪರಿಶೋಧಕ ಷಾಕಲ್ ಚಂದ್ ಬಾಗ್ರೇಚ, ಹಿರಿಯ ವಕೀಲರಾದ ಉಡೇದ ಬಸವರಾಜ್, ರಂಗನಟ,ಪತ್ರಿಕಾ ಛಾಯಾಗ್ರಹಕ ಹಂದ್ಯಾಳ ಪುರುಷೋತ್ತಮ, ವಿ ಕೇರ್ ಸಂಸ್ಥೆಯ ಅಧ್ಯಕ್ಷ ಮನ್ಸೂರು.
ಯುವ ಸಾಧಕರಾಗಿ ಈ ವರ್ಷದ 10 ನೇ ತರಗತಿಯ ( ಐಸಿಎಸ್ ಸಿ) ಪರೀಕ್ಷೆಯಲ್ಲಿ ದೇಶಕ್ಕೆ 3 ಸ್ಥಾನ ಪಡೆದ ಅನುಷ್ಕ ಬಿ.ಕರಣಂ, ನೀಟ್ ಪಿಜಿ ಪರೀಕ್ಷೆಯಲ್ಲಿ ದೇಶದಲ್ಲಿ 14 ನೇ ರ‌್ಯಾಂಕ್ ಪಡೆದ ಡಾ.ಅದಿತ್ ಹುಂಡೈ ಮತ್ತು ವಿಮ್ಸ್ ನಲ್ಲಿ ಎಂಬಿಬಿಎಸ್ ನಲ್ಲಿ ಮೊದಲ ರ‌್ಯಾಂಕ್ ಪಡೆದ ಡಾ. ಪ್ರಜ್ವನ್ ಗುಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯದರ್ಶಿ ನಿತೇಶ್ ಕಠಾರಿಯ, ಉಪಾಧ್ಯಕ್ಷೆ
ಡಾ.ರೇಣುಕಾ ಮಂಜುನಾಥ
ಕಾರ್ಯದರ್ಶಿ ಚಂದ್ರಶೇಖರ್ ಪಾಟೀಲ್ , ಖಜಾಂಚಿ ಭರತ್ ಮಹಿಪಾಲ್ , ಕಾರ್ಯಕ್ರಮದ ಸಂಯೋಜಕ ಡಾ.ಅರವಿಂದ ಪಾಟೀಲ್, ಕಾರ್ನಾಟಕ ವೈದ್ಯರ ಸಾಮಾಜಿಕ ಯೋಜನೆಗಳ ರಾಜ್ಯ ಅಧ್ಯಕ್ಷ ಡಾ.ಯೋಗಾನಂದರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ಡಾ.ಜಯಶ್ರೀ ನೇತೃತ್ವದ ತಂಡ ಪ್ರಾರ್ಥನೆ ನೆರವೇರಿಸಿತು.
ಐಎಂಎ ನಗರದಲ್ಲಿ ನಿವೇಶನ ನೀಡುವುದಾಗಿ ಸುಳ್ಳು ಭರವಶೆಗಳನ್ನು ಕೊಡುತ್ತಾ ಬಂದಿದ್ದ ಸ್ಥಳೀಯ ರಾಜಕಾರಣಿಗಳನ್ನು ಈ ಬಾರಿ ಕಾರ್ಯಕ್ರಮದಿಂದ ದೂರ ಇಡಲಾಗಿತ್ತು.

ಆದರೆ ಐಎಂಎ ಗೆ ವಯಕ್ತಿಕವಾಗಿ ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ನಿವೇಶನೀಡಿರುವುದನ್ನು ಸಮಾರಂಭದಲ್ಲಿ ಶ್ಲಾಘಿಸಲಾಯಿತು.

ಸಮಾರಂಭದಲ್ಲಿ ವೈಧಯಕೀಯ ದಿನಾಚರಣೆ ಅಂಗವಾಗಿ ಸಂಘ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ವೈದ್ಯರು ಮತ್ತು ಕುಟುಂಬದ ಸದಸ್ಯರಿಂದ ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.