ವೈದ್ಯರ ನಿರ್ಲಕ್ಷ್ಯ ಮಹಿಳೆ ಸಾವು ಆರೋಪ

ಬೆಂಗಳೂರು,ಮೇ.೪- ತುಮಕೂರು ರಸ್ತೆಯ ನೆಲಮಂಗಲದ ಜಾಸ್ ಟೋಲ್ ಬಳಿ ಬೈಕ್ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೀಣ್ಯದ ಹೆಗ್ಗನಹಳ್ಳಿಯ ರುಕ್ಸಾನಾ (೨೩) ಮೃತಪಟ್ಟವರು. ಅಣ್ಣನ ಮಗನ ಜೊತೆಗೆ ತ್ಯಾಮಗೊಂಡ್ಲುಗೆ ಹೋಗಿ ಹೆಗ್ಗನಹಳ್ಳಿಗೆ ಡಿಯೋ ಸ್ಕೂಟರ್‌ನಲ್ಲಿ ನಿನ್ನೆ ಹಿಂತಿರುಗುವಾಗ ಜಾಸ್ ಟೋಲ್ ಬಳಿ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಗಂಭೀರ ಗಾಯಗೊಂಡಿದ್ದ ರುಕ್ಸಾನಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ರುಕ್ಸಾನಾ ಕ್ಷೇಮವಾಗಿದ್ದಾರೆಂದು ತಿಳಿಸಿ ಹಣ ಕಟ್ಟುವಂತೆ ಹೇಳಿದ್ದರು.
ಆದರೆ, ಹಣ ಕಟ್ಟಲು ಸಮಯ ಬೇಕು ಎಂದಾಗ ವೈದ್ಯರು ಚಿಕಿತ್ಸೆ ನೀಡದೆ ರುಕ್ಸಾನಾಳ ಸಾವಿಗೆ ಕಾರಣವಾಗಿದ್ದಾರೆಂದು ಮೃತಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನೆಲಮಂಗಲ ಸಂಚಾರ ಪೊಲೀಸರು
ಪ್ರಕರಣ ದಾಖಲಿಸಿ ಮುಂದಿನ
ತನಿಖೆಯನ್ನು ಕೈಗೊಂಡಿದ್ದಾರೆ.