ವೈದ್ಯರ ನಿರ್ಲಕ್ಷ್ಯ:ವೃದ್ಧೆಸಾವು ಆರೋಪ

ರಾಯಚೂರು.ಏ.೧೮.ತಾಲೂಕಿನ ಜೆಗರ್ಕಲ್ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ ದಿಂದ ಒಬ್ಬ ಅಜ್ಜಿ ಮೃತಪಟ್ಟಿದ್ದಾರೆ .
ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಜಿಲ್ಲಾ ಸಮಿತಿ ಹಾಗೂ ರಾಜ್ಯಾಅಧ್ಯಕ್ಷರಾದ ಬಿ.ನರಸಪ್ಪ ದಂಡೋರ ಅವರ ಆದೇಶದ ಮೇರೆಗೆ ಜೆಗರ್ಕಲ್ ಗ್ರಾಮದ ಆಸ್ಪತ್ರೆಗೆ ಭೇಟಿ ಕೊಟ್ಟು ಅಜ್ಜಿ ಸಾವಿಗೆ ಕಾರಣರಾದ ವೈದ್ಯಕೀಯ ಸಿಬ್ಬಂದಿ ಯನ್ನು ಅಮಾನತುಗೊಳಿಸಬೇಕೆಂದು ಜಿಲ್ಲಾ ಮತ್ತು ತಾಲೂಕು ವೈದ್ಯಕೀಯ ಅಧಿಕಾರಿಗಳಿಗೆ ಸಂಬಂಧಪಟ್ಟ ಗ್ರಾಮೀಣ ಪೋಲಿಸ್ ಠಾಣೆಯ ಅಧಿಕಾರಿಗೆ ಒತ್ತಾಯಿಸಿದರು.
ಅಧಿಕಾರಿಗಳು ವೈದ್ಯಕೀಯ ಸಿಬ್ಬಂದಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆಂದು ಭರವಸೆಯನ್ನು ಕೊಟ್ಟಿದ್ದಾರೆ ಇಲ್ಲದಿದ್ದರೆ ನಮ್ಮ ಹೋರಾಟ ತೀವ್ರ ಮಟ್ಟಕ್ಕೆ ಕೊಂಡೊಯ್ಯತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯುವ ಸೇನೆ ಜಿಲ್ಲಾಧ್ಯಕ್ಷರಾದ ರಂಜಿತ ದಂಡೋರ ತಾಲೂಕ ಅಧ್ಯಕ್ಷರಾದ ದುಳ್ಳಯ್ಯ ಗುಂಜಹಳ್ಳಿ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಮುಖಂಡರು ಉಪಸ್ಥಿತರಿದ್ದರು.