ವೈದ್ಯರ ನಡೆ ಹಳ್ಳಿ ಕಡೆ ಜಾಥಾ

ಬಾಗಲಕೋಟೆ,ಜೂ.4 : ತಾಲೂಕಿನ ಬೆನಕಟ್ಪಿ ಗ್ರಾಮದಲ್ಲಿ ಕೊರೋನ ಜನಜಾಗೃತಿ ಮುಂಜಾಗ್ರತಾ ಕಾರ್ಯಕ್ರಮ ವೈದ್ಯರು ನಡೆ ಹಳ್ಳಿಯ ಕಡೆಗೆ ಜಾತಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷ ವೇಮರಡ್ಡಿ ಪಿ ಯಡಹಳ್ಳಿ ಉದ್ಘಾಟಿಸಿ ಬ್ಲಾಕ್ ಫಂಗಸ್ ಕರಪತ್ರ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಹಿರಿಯ ವೈದ್ಯಧಿಕಾರಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಬೇಟಿ ನೀಡಿ ಕೆಮ್ಮು ನೆಗಡಿ ಜ್ವರ ಉಸಿರಾಟ ತೊಂದರೆ ಇದ್ದವರ ಮಾಹಿತಿ ಸಂಗ್ರಹಿಸಿ ಗಂಟಲು ದ್ರವ ಪರೀಕ್ಷೆಗೆ ಚಿಕಿತ್ಸೆಗೆ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರುಗೆ ಹೋಗಲು ಹೇಳಿದರು.
ಕೊರೊನಾ ಮುಂಜಾಗ್ರತಾ ಕ್ರಮವಾಗಿಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು. ಸಾಮಾಜಿಕ ಅಂತರ ಪಾಲಿಸುವುದು. ಸ್ಯಾನಿಟರ್ ಬಳಸಿ ಕೈಗಳನ್ನು ತೊಳೆಯುವದು. ಸಾರ್ವಜನಿಕರಿಗೆ ಮತ್ತು ವಿಶೇಷವಾಗಿ ವಿಕಲಚೇತನರಿಗೆ ಹಿರಿಯ ನಾಗರಿಕರಿಗೆ ಲಸಿಕೆ ಹಾಕಿಸಿಕೊಳ್ಳಲು ಕೊರೊನಾ ವಾರಿಯರ್ಸಗಳಿಗೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎ ಎನ್ ಚಿತ್ತವಾಡಗಿಯವರು ಮಾಹಿತಿ ನೀಡಿದರು.
ಗ್ರಾಮದಲ್ಲಿ ಸಾರ್ವಜನಿಕರಿಗೆ ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ.ಅಕ್ಕ ಪಕ್ಕದಲ್ಲಿ.ಸ್ವಚ್ಛವಾಗಿ ಇಡಲು ಗ್ರಾಮಸ್ಥರಿಗೆ ಅರಿವು ಮೂಡಿಸಿ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಎಸ್. ಎಚ್. ಕಾಳಗಿಯವರು ಮಾತನಾಡಿದರು. ವೈದ್ಯರ ನಡೆ ಹಳ್ಳಿಯ ಕಡೆಗೆ ಎಂಬ ಜಾಥಾ ಕಾರ್ಯಕ್ರಮದಲ್ಲಿ ಅರೋಗ್ಯ ನಿರಕ್ಷಣಾ ಅಧಿಕಾರ ಎಸ್. ಎಸ್. ಅಂಗಡಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಜಿ. ಆರ್. ತಳವಾರ, ಎಂ. ಎಲ್. ಪಿ. ಲಕ್ಷ್ಮೀ ಮೇಟಿ. ಗ್ರಾ ಪಂ ಕಾರ್ಯದರ್ಶಿ ಆರ್. ಎಲ್. ದೊಡಮನಿ, ಗ್ರಾಲೆಕ್ಕಾಧಿಕಾರಿ ರಫೀಕ್ ಮೊಮೀನ್, ಅಂಗನವಾಡಿ ಕಾರ್ಯಕರ್ತೆಯರಾದ ಲಲಿತಾ ಹಡಪದ, ಸಂಗಮ್ಮ ಹೂಗಾರ, ಶಕುಂತಲಾ ಬಡಿಗೇರ, ಶೀಲಾ ನಾಯಕರ ಹಾಗೂ ಆಶಾ ಕಾರ್ಯಕರ್ತೆಯರಾದ ತಾಯವ್ವ ಮಾದರ. ಅವಕ್ಕ ಗೊರವರ, ಸುನಂದಾ ನಿಂಗಾಪುರ, ಗ್ರಾಮ ಪಂಚಾಯತ ಸಿಬ್ಬಂದಿಗಳಾದ ಮಾಹಾಂತೇಶ ರಾಮದುರ್ಗ, ಬಾಲು ಆಲೂರ ಇನ್ನುಳಿದವರು ಜಾಥಾ ಕಾರ್ಯಕ್ರಮಲ್ಲಿ ಭಾಗವಹಿಸಿದ್ದರು.