‘ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಚಾಲನೆ ಗ್ರಾಮದ ಜನರಿರುವ ಕಡೆ ಸಂಚರಿಸಿ ಆರೋಗ್ಯ ವಿಚಾರಣೆ

ಆಳಂದ:ಜೂ.8:ವೈದ್ಯರ ನಡೆ ಹಳ್ಳಿಕಡೆ ಎಂಬ ವಿನೂತ ಕಾರ್ಯಕ್ರಮಕ್ಕೆ ಸರಕಾರ ಸೂಚನೆ ನೀಡಿರವುದರಿಂದ ಆಳಂದ ತಾಲೂಕಿನ ಯಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಉಸ್ಮಾನ ತಡಕಲ ನೇತೃತ್ವದಲ್ಲಿ ಸರಕಾರದ ಆದೇಶದಂತೆ ಸಿಬ್ಬಂದಿಯೊಂದಿಗೆ ಯಳಸಂಗಿ ಗ್ರಾಮದಲ್ಲಿ ಸಂಚರಿಸಿ ಸಾರ್ವಜನಿಕರ ಆರೋಗ್ಯ ವಿಚಾರಣೆ ಮಾಡಿದರು ನಂತರ ಮಾತನಾಡಿದ ಅವರು ಕೊರೊನಾ ದಿಂದ ಜನರ ಜೀವ ತಿರಾ ಸಂಕಷ್ಟಕ್ಕೆ ಒಳಗಾಗಿದ್ದು ಸೊಂಕಿನಿಂದಾಗಿ ಸಾವಿರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೂಡಾ ಕೊರೊನಾ ಅಬ್ಬರ ಹೆಚ್ಚಾಗಿದ್ದು ಇದರ ನಿಯಂತ್ರಣಕ್ಕಾಗಿ ಸರಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ಈನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಸಂಚರಿಸಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅದಕ್ಕಾಗಿ ವೈದ್ಯರ ನಡೆ ಹಳ್ಳಿಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ಇರುವ ಕಡೆ ಆರೋಗ್ಯ ಸೇವೆ ಸಿಗಲಿದೆ. ಬಿಪಿ ಶುಗರ ಕೊರನಾ ತಪಾಸಣೆ ಇನ್ನಿತರ ಕಾಯಿಲೆ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗವುದು ಸಾರ್ವಜಿಕರು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕೈಜೊಡಿಸಬೇಕು ಮತ್ತು ಈ ಒಂದು ಆರೋಗ್ಯ ಸೇವೆಯ ಅನಕೂಲ ಪಡೆಕೊಳ್ಳಬೇಕು ತಿಳಿಸಿದ್ದಾರೆ. ಈ ಸಮಯದಲ್ಲಿ ಆರೋಗ್ಯ ಸಿಬ್ಬಂದಿಗಳಾದ ರೂಪಾ ರೋಹಿಣಿ ಇಬ್ರಾಹಿಂ ಸಚೀನ ಮಲ್ಲಿಕಾರ್ಜುನ ಮಹಾರುದ್ರ ಹಾಗೂ ಆಶಾ ಕಾರ್ಯಕರ್ತರು ಇದ್ದರು.