ವೈದ್ಯರ ನಡೆ ಹಳ್ಳಿಯ ಕಡೆಃ ಗ್ರಾಮಸ್ಥರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ವೈದ್ಯರಿಂದ ತಪಾಸಣೆ

ಸಿಂದಗಿ, ಜೂ.7-ತಾಲೂಕಿನ ಕೊಕಟನೂರ ಗ್ರಾಮದಲ್ಲಿ ತಾಲೂಕಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಪ್ರಾಥಮಿಕ ಸಂಪರ್ಕ ಹೊಂದಿರುವಂತ, ಕೆಲವು ಗುಣಲಕ್ಷಣಗಳು ಕಂಡು ಬಂದ ಗ್ರಾಮದ ಗ್ರಾಮಸ್ಥರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ, ವೈದ್ಯರಿಂದ ತಪಾಸಣೆಗೊಳಪಡಿಸಲಾಯಿತು.
ಆರ್.ಬಿ.ಎಸ್.ಕೆ ಆಯುಷ್ ವೈದ್ಯಾಧಿಕಾರಿಗಳಾದ ಡಾ.ಪ್ರೀಯಾಂಕಾ ಕುಂಬಾರ ಅವರು ಗ್ರಾಮದ ಜನರಿಗೆ ಕೊರೋನಾ ನಿಯಂತ್ರಣದ ಕುರಿತು ಅರಿವು ಮೂಡಿಸಿ, ಕೋವಿಡ್ ಲಸಿಕೆ ಪಡೆಯಲು ಜನರಿಗೆ ಪ್ರೇರೆಪಿಸಿದರು.
ಈ ಸಂಧರ್ಭದಲ್ಲಿ ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿಗಳಾದ ಎಮ್.ಎಸ್.ಬಾಗೇವಾಡಿ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ಜಿ.ಜೆ.ಹೀರೆಮಠ, ತಾಲೂಕಾ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಶಿವಶೇಖರ ಪಾಟೀಲ್, ವೈಶಾಲಿ ಪಡತಾರೆ, ವಿರೇಶ ಹಿರೇಮಠ, ಆಶಾ ಕಾರ್ಯಕರ್ತೆಯರಾದ ಎಮ್.ಎಸ್.ಕೊರಬು, ಎಸ್.ಎಮ್.ನಾಯಕ, ಕೆ.ಐ.ರಾಠೋಡ, ಜಿ.ಎಸ್.ಮಣೂರ, ಎಸ್.ಬಿ.ಜವಳಗಿ, ಬಿ.ಎಸ್.ಮಣೂರ, ಎಸ್.ಎಚ್.ಕನ್ನೂರ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.