ಮುದ್ದೇಬಿಹಾಳ:ಜು.2: ವೈದ್ಯೋ ನಾರಾಯಣೋ ಹರಿಃ ಎಂದು ಹೇಳಿದರೂ ಕೂಡ, ಅದು ನಾವು ರೋಗಿಗಳ ಸೇವೆಯಲ್ಲಿಯೇ ದೇವರನ್ನು ಕಾಣುವೆವು. ಎಂದು ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ: ಅನೀಲ ಕುಮಾರ ಶೇಗುಣಸಿ ಅವರು ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್ ಮತ್ತು ಲೀಲಾಬಾಯಿ ಸೋಗಮಲ್ ಒಸವಾಲ ಮೆಮೋರಿಯಲ್ ಲಯನ್ಸ್ ಪ್ರಾಥಮಿಕ ಶಾಲೆ ಮತ್ತು ಲಯನ್ಸ್ ಪಬ್ಲಿಕ್ ಸ್ಕೂಲ್ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀರಿಸಿ ಮಾತನಾಡಿದರು.
ಆಡಳಿತಾಧಿಕಾರಿ ಲಯನ್ ದೀಪಾ ದೇಸಾಯಿ ಅವರು ಪ್ರಾಸ್ಥಾವಿಕವಾಗಿ ಮಾತನಾಡಿ ಭಾರತದಲ್ಲಿ ವೈದ್ಯಕೀಯ ರಂಗದಲ್ಲಿ ನಿಶ್ವಾರ್ಥ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೋಬ್ಬ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದೆ ಹಾಗಾಗಿವೈದ್ಯಕೀಯ ಭಾತೃತ್ವದ ಧಣಿವರಿಯದ ಪ್ರಯತ್ನಗಳು ಸಮರ್ಪಣೆ ಮತ್ತು ಜೀವಗಳನ್ನು ಉಳಿಸಲು ಆರೋಗ್ಯವನ್ನು ಉತ್ತೇಜಿಸಲು ಮತ್ತು ಅಗತ್ಯವಿರುವ ವ್ಯಕ್ತಿಗಳಿಗೆ ವೈದ್ಯಕಿಯ ಆರೋಗ್ಯ ಆರೈಕೆ ಮಾಡಲು ನ್ಯಾಯಯುತ ಬದ್ಧತೆಗಾಗಿ ಕೃತಜ್ಞನತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಇದೇ ಮತತ್ವದ ವೇದಿಕೆಯಾಗಿ ಈ ದಿನಾಚರಣೆ ಸಾರ್ಥಕ ಸೇವೆ ಉದ್ದೇಶವೇ ರಾಷ್ಟ್ರೀಯ ವೈದ್ಯ ದಿನಾಚರಣೆ ಯ ಮಹತ್ವದ ಅರ್ಥವಾಗಿದೆ ಎಂದರು.
ರಾವ್ ಸಾಹೇಬ ದೇಸಾಯಿ ಮಾತನಾಡಿ ಲಯನ್ಸ್ ಕ್ಲಬ್ ಪ್ರಸಕ್ತ ವರ್ಷದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಗಳನ್ನು ಮಾಡಿದ್ದು ಅದರ ಶ್ರೇಯಸ್ಸು ಎಲ್ಲ ಸದಸ್ಯರಿಗೆ ಸಲ್ಲುವದು ಎಂದರು.ಡಾ: ದಲಿಚಂದ ಒಸವಾಲ್ ಹಾಗೂ ಡಾ: ಅನಿಲಕುಮಾರ ಶೇಗುಣಸಿ ಅವರನ್ನು ಎಲ್ಲಾ ಸದಸ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮ ನಿರೂಪಣೆ ಮತ್ತು ಗಣ್ಯರ ಪರಿಚಯ ವನ್ನೂ ಲಯನ್ ಮಲ್ಲಿಕಾರ್ಜುನ ಬಿದರಕುಂದಿ ಮಾಡಿದರು. ವಂದನಾರ್ಪಣೆ ವೆಂಕನಗೌಡ ಪಾಟೀಲ್ ಮಾಡಿದರು. ವೇದಿಕೆ ಮೇಲೆ ಲಯನ್ ರಾವ್ ಸಾಹೇಬ ಮತ್ತು ದೀಪಾ ದೇಸಾಯಿ, ಸಂಗೀತಾ ಅನೆಪ್ಪನವರ್ ಗಣ್ಯರೊಂದಿಗೆ ಇದ್ದರು. ಕಾರ್ಯಕ್ರಮದಲ್ಲಿ ಲಯನ್ ಶರಣಯ್ಯ ಹಿರೇಮಠ್, ಮಹೇಂದ್ರ , ಸುಶೀಲಾ ಒಸವಾಲ್, ಸಂಜೀವ, ರಜನಿ ಒಸವಾಲ್, ಸೋಮಶೇಖರ ಅನೆಪ್ಪನವರ, ಸಂಜಯ ಒಸ ವಾಲ್, ಹಾಗೂ ಶಾಲೆಯ ಗುರುಮಾತೆಯರು ಮತ್ತು ಮಕ್ಕಳು ಇತರ ಸದಸ್ಯರು ಭಾಗಹಿಸಿದ್ದರು.