ವೈದ್ಯರು ದೇವರ ಸಮಾನ : ಪಾಟೀಲ

ಇಂಡಿ: ಆ.1:ತಮ್ಮ ತೊಂದರೆಗಳನ್ನು ಲೆಕ್ಕಿಸದೇ ಇನ್ನೊಬ್ಬರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ವೈದ್ಯರು ದೇವರ ಸಮಾನ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಅವರು ಪಟ್ಟಣದ ಖಾಸಗಿ ಶಸ್ತ್ರ ಚಿಕಿತ್ಸಾ ದವಾಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಿವಕುಮಾರ ಬಿಸನಾಳ ಮಾತನಾಡಿ ಕೊರೊನಾ ಕಾಲಘಟ್ಟದಲ್ಲಿ ಇಂಡಿ ಸರಕಾರಿ ಆಸ್ಪತ್ರೆಯ ವೈಧ್ಯರ ಸೇವೆ ಶ್ಲಾಘನೀಯ, ಮನುಕುಲ ಮೆಚ್ಚುವ ಕೆಲಸ ಎಂದರು.

ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ|| ರಾಜೇಶ ಕೋಳೆಕರ,ಸರಕಾರಿ ಆಸ್ಪತ್ರೆಯ ಡಾ|| ಪ್ರೀತಿ ಕೋಳೆಕರ, ಡಾ|| ಅಮೀತ ಕೋಳೇಕರ, ಡಾ|| ವಿಪುಲ್ ಕೋಳೆಕರ, ಡಾ|| ಪವನ ಕೋಳೆಕರ, ಡಾ|| ತೇಜಸ್ವಿನಿ ಕೋಳೆಕರ, ಡಾ|| ಅನೀಲ ವಾಲಿ,ಡಾ|| ಸುರಪುರ,ಜೆ.ಡಿ.ಎಸ್ ಮುಖಂಡ ಬಿ.ಡಿ.ಪಾಟೀಲ, ಶ್ರೀಧರ ದೇಶಪಾಂಡೆ, ಅವಿನಾಶ ಬಗಲಿ, ಸತೀಶ ಕಂಬಾರ, ಸಂದೀಪ ಬಿರಾದಾರ, ಸುನೀಲ ಮದರಖಂಡಿ, ಸಂತೋಷ ಕುಡಿಗನೂರ, ಹರೀಶ ಧನಾಶ್ರೀ, ಫಯಾಜ ತುರ್ಕಿ, ಶ್ರೀಕಾಂತ ಚವ್ಹಾಣ, ವಿಠೋಬಾ ಶಿವೂರ, ವಿನಯ ಸರನಾಡಗೌಡ, ಸುನೀಲ ಪೂಜಾರಿ ಮತ್ತಿತರಿದ್ದರು.