ವೈದ್ಯರು ಇಲ್ಲದ ಚಂಡರಕಿ ಆರೋಗ್ಯ ಕೇಂದ್ರ?

ಗುರುಮಠಕಲ್ :ನ.11: ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲದ ಆರೋಗ್ಯ ಕೇಂದ್ರದಲ್ಲಿ ಔಷಧಿ ದೊರಕಬೇಕಾದ ಸ್ಥಳದಲ್ಲಿ ಅಲ್ಕೋಹಾಲ್ ಬಾಟಲ್‍ಗಳು ದೊರಕುವ ಸ್ಥಳವಾಗಿದೆ.
ಗ್ರಾಮದ ಜನರಿಗೆ ಆರೋಗ್ಯಕ್ಕೆ ನೆರವಾಗಬೇಕಿದ್ದ ಆಸ್ಪತ್ರೆ ಪುಡಾರಿಗಳಿಗೆ ಆಶ್ರಯವಾಗಿದೆ.

ಹೌದು, ಇದೆಲ್ಲವು ಗುರುಮಠಕಲ್ ತಾಲೂಕಿನ ಚಂಡರಿಕಿ ಗ್ರಾಮದಲ್ಲಿರುವ ಆರೋಗ್ಯ ಮತ್ತು ಕ್ಷೇಮ ಸೌಖ್ಯ ಕೇಂದ್ರದ ಪರಿಸ್ಥಿತಿ ಇದಾಗಿದೆ. ಒಟ್ಟು ಅಂದಾಜು 6000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಆರೋಗ್ಯ ನೈರ್ಮಲ್ಯ ಕಾಪಾಡಲು ನಿರ್ಮಾಣಗೊಂಡಿದೆ.
ಗ್ರಾಮದ ಜನರಿಗೆ ಅನುಕೂಲವಾಗುತ್ತದೆ ಎಂಬ ಹೊಸ ಕಟ್ಟಡ ನಿರ್ಮಾಣವಾಗಿದೆ. ವೈದ್ಯರು ನಿಯೋಜನೆಗೊಂಡು ಆರೋಗ್ಯ ಕೇಂದ್ರವನ್ನು ತೆರೆದು ಜನರಿಗೆ ಚಿಕಿತ್ಸೆ ನೀಡಬೇಕು, ಆರೋಗ್ಯ ಕೇಂದ್ರದಲ್ಲಿ ಯಾರು ವೈದ್ಯರು ಬಾರದಿರುವುದರಿಂದ ಸ್ಥಳೀಯ ಜನರಿಗೆ ಚಿಕಿತ್ಸೆದಿಂದ ವಂಚಿತರಾಗಿದ್ದಾರೆ.

ಸಂಜೆ ಹೊತ್ತಿನಲ್ಲಿ ಕುಡುಕರ ಹಾವಳಿ ಜಾಸ್ತಿಯಾಗಿರುವುದುಂಟು. ಇದಕ್ಕಾಗಿ ಇಲ್ಲಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯರನ್ನು ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.


ಆಸ್ಪತ್ರೆಯಲ್ಲಿ ಪುಡಾರಿಗಳು ಬಾಟಲ್‍ಗಳು ಬೀಸಾಕದಂತೆ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳಬೇಕು ಮತ್ತು ನಿಯೋಜನೆಗೊಂಡಿರುವ ಆರೋಗ್ಯ ವೈದ್ಯರು ಹಾಗೂ ಸಿಬ್ಬಂದಿಗಳು ಸರಿಯಾಗಿ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚಿಸಬೇಕು. ಇಲ್ಲದಿದ್ದರೆ ಆಸ್ಪತ್ರೆಯನ್ನು ತೆರೆದು ಲಾಭವಿಲ್ಲ.

  - ಮಲ್ಲಪ್ಪ ನಾಟಿಕೇರಿ ಗ್ರಾಮಸ್ಥ

ನಾವು ಬಡವರು. ಕೂಲಿ ಕೆಲಸ ಮಾಡಿ ಬದುಕುವ ಜನ ನಾವು. ಪಟ್ಟಣಕ್ಕೆ ಹೋಗಿ ಚಿಕಿತ್ಸೆ ಮಾಡಿಕೊಳ್ಳುವಷ್ಟು ಹಣ ನಮ್ಮಲ್ಲಿ ಇಲ್ಲ. ಇಲ್ಲಿಯೇ ಆಸ್ಪತ್ರೆ ಚಾಲು ಆದರೆ ನಮ್ಮಂತಹ ಬಡ ಜನರಿಗೆ ಆರೋಗ್ಯ ಕೇಂದ್ರ ವರದಾನವಾಗುತ್ತದೆ. ಬೇಗ ಸರಿಯಾಗಿ ವೈದ್ಯರನ್ನು ಕಲ್ಪಿಸಿಬೇಕು.

   - ರಮೇಶ, ಗ್ರಾಮಸ್ಥ.