ವೈದ್ಯರುಗಳಿಗೆ ಗರ್ಭನಿರೋಧಕ ಇಂಪ್ಲಾಂಟ್ ಸಾಧನ ಕುರಿತು ತರಬೇತಿ ಕಾರ್ಯಗಾರ

ಬೀದರ:ನ.29:ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (FPAI) ಬೀದರ ಶಾಖೆಯ ವತಿಯಿಂದ ಶಾಖೆಯ ತರಬೇತಿ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರುಗಳಿಗಾಗಿ “ಗರ್ಭನಿರೋಧಕ ಇಂಪ್ಲಾಂಟ್ ಸಾಧನ ಕುರಿತು ತರಬೇತಿ ಕಾರ್ಯಗಾರ” ಹಮ್ಮಿಕೊಳ್ಳಲಾಯಿತು.

FPAI ಸಂಸ್ಥೆಯ ರಾಷ್ಟೀಯ ಅಧ್ಯಕ್ಷರು, ಧಾರವಾಡನ SDM College of Medical Sciences & Hospital ನ ಪ್ರಾಂಶುಪಾಲರು ಹಾಗೂ ಭಾರತ ಸರ್ಕಾರದ ಗರ್ಭನಿರೋಧಕ ಇಂಪ್ಲಾಂಟ್ ತರಬೇತುದಾರರಾದ ಡಾ. ರತ್ನಮಾಲಾ ಎಮ್. ದೇಸಾಯಿ ಇವರು “ಗರ್ಭನಿರೋಧಕ ಇಂಪ್ಲಾಂಟ್” ಬಗ್ಗೆ ಬೀದರ ಜಿಲ್ಲೆಯ ಸ್ತ್ರೀರೋಗ ತಜ್ಞರುಗಳಿಗೆ ಒಂದು ದಿನದ ತರಬೇತಿ ನೀಡಿದರು. ಈ ಕಾರ್ಯಗಾರದಲ್ಲಿ “ಇಂಪ್ಲಾಂಟ್” ಕುಟುಂಬ ಯೋಜನಾ ಸಾಧನ ಕುರಿತು ಮಾಹಿತಿ ನೀಡಿ, ಅದನ್ನು ಅಳವಡಿಸುವ ಕುರಿತು, ಆಪ್ತಸಮಾಲೋಚನೆ, ತಾಂತ್ರಿಕ ಅವಶ್ಯಕತೆ, ಅದರ ಸಾಧಕ- ಬಾಧಕಗಳ ಬಗ್ಗೆ ವಿವರವಾದ ತರಬೇತಿಯನ್ನು ನೀಡಿ, ಪ್ರಾಯೋಗಿಕವಾಗಿ 9 ಜನ ಫಲಾನುಭವಿಗಳಿಗೆ ಈ ಇಂಪ್ಲಾಂಟ್ ಅಳವಡಿಸಿ ಸೂಕ್ತ ತರಬೇತಿ ನೀಡಿದರು.

FPAI ಕೇಂದ್ರ ಕಛೇರಿ ಮುಂಬೈನ ಗೌರವ ಖಜಾಂಚಿಗಳು ಹಾಗೂ ಬೀದರನ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ಆರತಿ ರಘು ಇವರು ಗರ್ಭನಿರೋಧಕ ಇಂಪ್ಲಾಂಟ್ ಹೊಸ ವಿಧಾನವಾಗಿದ್ದು, ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು ಹಾಗೂ ವೈದ್ಯರುಗಳು ಸೂಕ್ತ ರೀತಿಯಲ್ಲಿ ಸಮುದಾಯದಲ್ಲಿ ಮಾಹಿತಿಯನ್ನು ನೀಡಬೇಕೆಂದು ಕರೆ ನೀಡಿದರು.

FPAI ಕೇಂದ್ರ ಕಛೇರಿ ಮುಂಬೈನ ವೈದ್ಯಕೀಯ ಅಧಿಕಾರಿಯಾದ ಡಾ. ಪಲ್ಲವಿ ಇವರು ಬೀದರನಲ್ಲಿ ಈ ಇಂಪ್ಲಾಂಟ್ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ತುಂಬಾ ಸಂತೋಷವಾಗಿದೆ. ಹಾಗೂ ಈ ಕಾರ್ಯಗಾರದಲ್ಲಿ ಹೆಚ್ಚಿನ ವೈದ್ಯರುಗಳು ಭಾಗವಹಿಸಿ, ತರಬೇತಿ ಪಡೆದಿರುವುದು ಹೆಮ್ಮೆಯಾಗಿದೆ. ಈ ಸೇವೆಯನ್ನು ವೈದ್ಯರುಗಳು ಹೆಚ್ಚಿನ ಜನರಿಗೆ ಒದಗಿಸಿದಲ್ಲಿ ಈ ಕಾರ್ಯಗಾರ ಯಶಸ್ವಿಯಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

FPAI ಬೀದರ ಶಾಖೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀಲ್ ಇವರು FPAI ಸಂಸ್ಥೆಯ ಕುಟುಂಬ ಯೋಜನೆಯ ಕಾರ್ಯಚಟುವಟಿಕೆಗಳು, ಕುಟುಂಬ ಯೋಜನೆಯ ಹೊಸ ವಿಧಾನಗಳ ಅಳವಡಿಕೆಯ ಬಗ್ಗೆ ಸಂಸ್ಥೆಯು ಮುಂಚುಣಿಯಲ್ಲಿದೆ ಎಂದು ತಿಳಿಸಿದರು. ಭಾರತ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ತರಬೇತಿದಾರರಿಗೆ ತರಬೇತಿಯನ್ನು ನೀಡಿ, ಇಂದು ಬೀದರನ ವೈದ್ಯರಿಗೆ ಈ ತರಬೇತಿ ಕಾರ್ಯಗಾರ ಹಮ್ಮಿಕೊಂಡಿದ್ದು ಮತ್ತು ನಮ್ಮ ರಾಷ್ಟ್ರೀಯ ಅಧ್ಯಕ್ಷರು ಬೀದರಗೆ ಈ ಕಾರಣಕ್ಕಾಗಿ ಬಂದಿದಕ್ಕೆ ಹೆಮ್ಮೆಯನ್ನು ವ್ಯಕ್ತಪಡಿಸಿದರು.

FPAI ಬೀದರ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ತಿಳಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.

ಈ ಗರ್ಭನಿರೋಧಕ ಇಂಪ್ಲಾಂಟ್ ತರಬೇತಿ ಕಾರ್ಯಗಾರದಲ್ಲ್ಲಿ ಬೀದರÀ, ಭಾಲ್ಕಿ, ಬಸವಕಲ್ಯಾಣ, ತಾ.ಚಿಂಚೋಳಿಯ ಸ್ತ್ರೀರೋಗ ತಜ್ಞರುಗಳಾದ ಡಾ. ವಿಜಯಶ್ರೀ ಬಶೆಟ್ಟಿ, ಡಾ. ಎ.ಸಿ. ಲಲಿತಮ್ಮ, ಡಾ. ಜ್ಯೋತಿ ನಿಂಬೂರ, ಡಾ. ಶಾರದಾ ಗುದುಗೆ, ಡಾ. ಸುಮನ್ ಭಾಲ್ಕೆಕರ್, ಡಾ. ಶಿಲ್ಪಾ ಬುಳ್ಳಾ, ಡಾ. ಜ್ಯೋತ್ಸ್ನಾ ಪಿ. ಹಣಮಶೆಟ್ಟಿ, ಡಾ. ಸುಪಿಯಾ ಸುಲೆಗಾಂವಕರ್, ಡಾ. ರಾಮೇಶ್ವರಿ, ಡಾ. ಶೈಲಜಾ ತಳವಾಡೆ, ಡಾ. ಮಧುಮತಿ ನೈಕ್, ಡಾ. ದೀಪಾ ಹೊಳಕುಂದೆ, ಡಾ. ಶಿವಗೀತಾ ಇವರುಗಳು ಭಾಗವಹಿಸಿ, ತರಬೇತಿ ಪಡೆದುಕೊಂಡು ತರಬೇತಿ ಕಾರ್ಯಗಾರ ಯಶಸ್ವಿಗೊಳಿಸಿದರು.