ವೈದ್ಯನ ಮೇಲೆ ಹಲ್ಲೆಗೆ ಯತ್ನ :ಆರೋಪಿ ಬಂಧನಕ್ಕೆ ತಹಸೀಲ್ದಾರ್ ಸೂಚನೆ

ದೇವದುರ್ಗ.ಏ.೨೮.ಅಸ್ಪತ್ರೆಯಲ್ಲಿ ಗುಂಡ ವರ್ತನೆ ತೋರಿ ವೈದ್ಯಾಧಿಕಾರಿಗಳಿಗ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಡಾ.ನಾಗರಾಜ ತಾಳಿಕೋಟೆ ಅವರು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದಾರೆ.
ಪಟ್ಟಣದ ಜಾಲಹಳ್ಳಿ ಮುಖ್ಯರಸ್ತೆಯಲ್ಲಿರುವ ಎಸ್ ಬಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ನಾಗರಾಜ ತಾಳಿಕೋಟೆ ಅವರಿಗೆ ರವಿ ಎನ್ನುವ ವ್ಯಕ್ತಿ ಆಸ್ಪತ್ರೆಗೆ ಬಂದು ಗುಂಡ ವರ್ತನೆ ತೋರಿ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎಂದು ದೂರು ದಾಖಲಿಸಲು ಪೊಲೀಸ್ ಠಾಣೆಗೆ ಮನವಿ ಮಾಡಿದ್ದು ವಿಷಯ ತಿಳಿದ ತಹಸೀಲ್ದಾರ್ ಮಧುರಾಜ ಯಾಳಗಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲು ಸೂಚನೆ ನೀಡಿದರು.