ವೈದ್ಯಕೀಯ ಸೌಲಭ್ಯ ವಿಸ್ತರಣೆಗೆ ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ

ಬಳ್ಳಾರಿ, ಮೇ.20: ಎಸ್.ಯು.ಸಿ.ಐ (ಸಿ) ಜಿಲ್ಲಾ ಸಮಿತಿಯಿಂದ ಬಳ್ಳಾರಿ ಜಿಲ್ಲೆಯ ಕೋವಿಡ್-19 ಪರಿಸ್ಥತಿ ನಿರ್ವಹಣೆಗೆ ಆಗ್ರಹಿಸಿ ಆನ್ ಲೈನ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಚಳುವಳಿಯಲ್ಲಿ ಜಿಲ್ಲಾ ಅಧಿಕಾರಿಗಳಿಗೆ ಮನವಿ ಪತ್ರವನ್ನು ಮಾಸ್ ಇ-ಮೇಲ್ ಹಾಗೂ ಬೇಡಿಕೆಗಳ ಫಲಕ ಇಡಿದು ಫೋಟೋ ತೆಗೆದು ಎಲ್ಲಾ ಸೋಷಿಯಲ್ ಮೀಡಿಯಾ(ವಾಟ್ಸಾಪ್, ಫೇಸ್ಬುಕ್, ಇನ್ಷ್ಟಾಗ್ರಾಮ್… ಇತ್ಯಾದಿ)ದಲ್ಲಿ ಶೇರ್ ಮಾಡುವುದರ ಮೂಲಕ ವಿದ್ಯಾರ್ಥಿ-ಯುವಜನರು, ಮಹಿಳೆಯರು ರೈತ-ಕಾರ್ಮಿಕರು, ವೃದ್ದರು ಭಾಗವಹಿಸಿದ್ದರು.
ಬೇಡಿಕೆಗಳು:
ಬಳ್ಳಾರಿ ನಗರ ಹಾಗೂ ತಾಲ್ಲೂಕುಗಳಲ್ಲಿ ಅಗತ್ಯವಿರುವಷ್ಪು ಆಕ್ಸಿಜನ್ ಬೆಡ್, ಐಸಿಯು ವಾರ್ಡ್, ವೆಂಟಿಲೇಟರ್ ಬೆಡ್‍ಗಳನ್ನು ಹೆಚ್ಚಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಿ. ಸಭಾಂಗಣ, ಕಲ್ಯಾಣ ಮಂಟಪಗಳನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು, ಪಿ.ಹೆಚ್.ಸಿ(ಪ್ರಾಥಮಿಕ ಆರೋಗ್ಯ ಕೇಂದ್ರ), ಸಿ.ಹೆಚ್.ಸಿ(ಸಮುದಾಯ ಆರೋಗ್ಯ ಕೇಂದ್ರ) ಮಟ್ಟದಲ್ಲೂ ಆಕ್ಸಿಜನ್ ಬೆಡ್‍ಗಳನ್ನು ಆರಂಭಿಸಿ. ಇದಕ್ಕೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡಿ, ಮೂಲ ಸೌಕರ್ಯ ಒದಗಿಸಬೇಕು, ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯ ಫಲಿತಾಂಶವನ್ನು ಒಂದೇ ದಿನದಲ್ಲಿ ನೀಡುವಂತೆ ಕ್ರಮ ಕೈಗೊಳ್ಳಬೇಕು,
ಎಲ್ಲರಿಗೂ ಉಚಿತ ಲಸಿಕೆ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಹಾಗೂ ಕೋವಿಡ್ ರೋಗಿಗಳನ್ನು ಸಾಗಿಸಲು ಅಗತ್ಯವಿರುವಷ್ಟು ಆಂಬ್ಯುಲೆನ್ಸ್‍ಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಎಸ್.ಯು.ಸಿ.ಐ ಜಿಲ್ಲಾ ಸಮಿತಿ ಸದಸ್ಯರಾದ ಡಾ.ಎನ್.ಪ್ರಮೋದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.