ವೈದ್ಯಕೀಯ ಸಾಮಗ್ರಿ ವಿತರಣೆ

ಗದಗ ಜೂ.10 :ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತಕ್ಕೆ ದಾನಿಗಳು ನೀಡಿದ ವಿವಿಧ ವೈದ್ಯಕೀಯ ಸಾಮಗ್ರಿಗಳನ್ನು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ವಿವಿಧ ಇಲಾಖೆಗಳಿಗೆ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ವಿತರಣೆ ಮಾಡಿದರು.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ ಕೊರೊನಾ ಸೋಂಕಿನ 2 ನೇ ಅಲೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಪ್ರಮುಖ ಇಲಾಖೆಗಳು ಅವಿರತ ಕಾರ್ಯನಿರ್ವಹಣೆಯಿಂದ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ. ಸೋಂಕು ನಿಯಂತ್ರಣದಲ್ಲಿ ಮುಂಚೂಣಿ ಕಾರ್ಯನಿರ್ವಹಿಸಿದ ಪ್ರಮುಖ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಸೋಂಕು ಸುರಕ್ಷತಾ ಸಾಧನ ಸಲಕರಣೆಗಳನ್ನು ಈಗಾಗಲೇ ವಿತರಿಸಲಾಗಿತ್ತು. ಇಂದು ಆರೋಗ್ಯ ಇಲಾಖೆ ಸೇರಿದಂತೆ ಪೆÇಲೀಸ ಇಲಾಖೆ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ, ಹೋಮ್ ಗಾರ್ಡ, ಕಂದಾಯ ಇಲಾಖೆಗಳಿಗೆ ವೈದ್ಯಕೀಯ ಸಾಮಗ್ರಿಗಳಾದ ಪಲ್ಸ್ ಆಕ್ಸಿಮೀಟರ್ ನೆಬ್ಲಾಯಿಜರ್, ಗ್ಲುಕೋಮೀಟರ್, ಆಮ್ಲಜನಕ ಸಾಂಧ್ರಕಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳ ಸರಿಯಾದ ಬಳಕೆ ಮಾಡುವ ಮೂಲಕ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸೋಂಕು ತಗಲುವಿಕೆಯಿಂದ ದೂರವಿರಬೇಕು. ಹಾಗೂ ಸೋಂಕು ತಗುಲಿದಲ್ಲಿ ಆದ್ಯತೆ ಅನುಸಾರ ಇಲಾಖೆ ಮುಖ್ಯಸ್ಥರು ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ತಿಳಿಸಿದರು.
ಆರೋಗ್ಯ ಇಲಾಖೆಗೆ 18 ಆಮ್ಲಜನಕ ಸಾಂಧ್ರಕ, 45 ಗ್ಲುಕೋಮೀಟರ್, 5 ನೆಬ್ಲಾಯಿಜರ್ ವಿತರಿಸಲಾಗಿದೆ. ಅದೇ ರೀತಿ ಪೆÇಲೀಸ ಇಲಾಖೆಗೆ 22, ಜಿಲ್ಲಾ ಪಂಚಾಯತ್‍ಗೆ 130, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 8, ಮುನ್ಸಿಪಾಲಿಟಿ 10, ಹೋಮ್ ಗಾರ್ಡ 1, ಕಂದಾಯ ಇಲಾಖೆ 20 ಹೀಗೆ ಒಟ್ಟು 191 ಪಲ್ಸ್ ಆಕ್ಸಿಮೀಟರ್‍ಗಳನ್ನು ಹಂಚಿಕೆ ಮಾಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭರತ್ ಎಸ್, ಡಿ.ಎಚ್.ಓ ಡಾ. ಸತೀಶ ಬಸರಿಗಿಡದ, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ತಾ.ಪಂ. ಇ.ಒ. ಡಾ. ಜಿನಗಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್.ನೀಲಗುಂದ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.