ವೈದ್ಯಕೀಯ ಸಲಕರಣೆ ಬೆಲೆ ೫ ಪಟ್ಟು ಹೆಚ್ಚಳ : ಕ್ರಮಕ್ಕೆ ಒತ್ತಾಯ

ರಾಯಚೂರು.ಏ.೨೮-ಪಾಲ್ಸ್ ಆಕ್ಸಿಮೀಟರ್ ಇನ್ಫೇರ್ಡ್ ಥರ್ಮಾಮೀಟರ್ ಆಮ್ಲಜನಕ ನಿಯಂತ್ರಕರು ವೈದ್ಯಕೀಯ ಸಲಕರಣೆಗಳ ವಿತರಕರು ಬೆಲೆಗಳನ್ನು ೪ ರಿಂದ ೫ ಪಟ್ಟು ವಿಧಿಸಿತ್ತಿದ್ದು ಇಂತವರ ವಿರುದ್ಧ ಕೂಡಲೇ ತುರ್ತು ಕ್ರಮ ವಹಿಸಬೇಕೆಂದು ಖಾಜಾ ಅಸ್ಲಾಂ ಹಮೀದ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಜಿಲ್ಲಾಡಳಿತ ಕೊರೋನಾ ೨ ನೇ ಅಲೆ ವೇಗವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ನಗರೀಕರ ಆರೋಗ್ಯ ಹಿತದೃಷ್ಟಿಯಿಂದ ಅಗತ್ಯ ವೈದ್ಯಕೀಯ ಸಲಕರಣೆಗಳ ಸಂಗ್ರಹದ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಆಮ್ಲಜನಕ ನಿಯಂತ್ರಕರು ಸಲಕರಣೆಗಳ ಸಂಗ್ರಹಕರು ನಿಗದಿತ ಮೂಲ ಬೆಲೆಗಿಂತ ೫ ಪಟ್ಟು ಹೆಚ್ಚಿನ ದರದಲ್ಲಿ ವಿತರಿಸುತ್ತಿರುವುದು ಆತಂಕ ಕಾರಿ. ಇದು ಕಾನೂನು ಬಾಹೀರ ಚಟುವಟಿಕೆಯಾಗಿದ್ದು ಕೂಡಲೇ ಜಿಲ್ಲಾಡಳಿತ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ.ಎಸ್. ಅಮೀರ್, ನಹೀಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.