ವೈದ್ಯಕೀಯ ಸಂಘದಿಂದ ರಾಜ್ಯೋತ್ಸವ ಆಚರಣೆ

ಚಿಕ್ಕಬಳ್ಳಾಪುರ:ನ೩:ಭಾರತೀಯ ವೈದ್ಯಕೀಯ ಸಂಘ ಚಿಕ್ಕಬಳ್ಳಾಪುರ ಶಾಖೆ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು..
ಮುಖ್ಯ ಅತಿಥಿಗಳಾಗಿಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ ವಿ ಕೃಷ್ಣ ಕನ್ನಡದ ಕುರಿತು ನಾಡು-ನುಡಿಯ ಬಗ್ಗೆ ಅವರ ಜ್ಞಾನಭಂಡಾರವನ್ನು ಹಂಚಿಕೊಂಡರು, ಕನ್ನಡವನ್ನು ಉಳಿಸಿ ಬೆಳೆಸೋಣ ವೆಂಬ ಕರೆಯನ್ನು ನಮ್ಮೆಲ್ಲರಿಗೂ ಕೊಟ್ಟರು
.ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ ವಿ ಕೃಷ್ಣ ಹಾಗೂ ವೈದ್ಯಕೀಯ ಸಂಘ ಕರ್ನಾಟಕ ಶಾಖೆಯ ನೂತನ ಅಧ್ಯಕ್ಷರಾಗಿ , ಕರ್ನಾಟಕ ವೈದ್ಯಕೀಯ ಸಂಘದ ಸದಸ್ಯರಾಗಿ, ಆರ್ ಜಿ ಯು ಎಚ್ ಎಸ್ ನ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ,
ಡಾ.ಎಂ ವೆಂಕಟಾಚಲಪತಿ ರವರನ್ನು ಹಾಗೂ ಆರ್ ಜಿ ಯು ಎಚ್ ಎಸ್ ನ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಡಾ. ಮುರಳಿಕೃಷ್ಣ ಹಾಗೂ ಡಾ. ರವಿಕುಮಾರ್ ರವರನ್ನು ಸನ್ಮಾನಿಸಲಾಯಿತು.
ಹಿರಿಯ ವೈದ್ಯರು ಹಾಗೂ ಪೂರ್ವಿ ಅಧ್ಯಕ್ಷರು ಕರ್ನಾಟಕ ರಾಜ್ಯ ಶಾಖೆ ಡಾಕ್ಟರ್ ಕೆ ಪಿ ಶ್ರೀನಿವಾಸಮೂರ್ತಿ ಅವರು ಮಾತಾಡಿ ಕನ್ನಡದ ಅಭಿಮಾನವನ್ನು ವ್ಯಕ್ತಪಡಿಸಿದರು.
ನಮ್ಮ ಅಧ್ಯಕ್ಷರಾದ ಡಾಕ್ಟರ್ ಪ್ರಶಾಂತ್ ಎಸ್ ಮೂರ್ತಿ ರವರು ಮಾತಾಡಿ ಕನ್ನಡವನ್ನು ಬೆಳೆಸಿ ಉಳಿಸೋಣ ಹಾಗೂ ಸಂಘವನ್ನು ಇನ್ನೂ ಹೆಚ್ಚು ಹೆಚ್ಚು ಎತ್ತರಕ್ಕೆ ತರಲು ಪ್ರಯತ್ನಿಸೋಣ ಎಂಬ ಕರೆಯನ್ನು ಕೊಟ್ಟರು. ಸಂಘದ ಕಾರ್ಯದರ್ಶಿಗಳಾದ ಡಾಕ್ಟರ್ ಮಧುವನ ಹೆಚ್‌ಎಸ್ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದರೊಂದಿಗೆ ಎಲ್ಲ ವೈದ್ಯ ಮಿತ್ರರಿಗೆ ಸಿಎಂಇ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈಗಿರುವ ಕೊರನಾ ಮಹಾಮಾರಿಯ ಬಗ್ಗೆ ಡಾ.ಹಿರಣ್ಪಪ್ಪ ಹಾಗೂ ಡಾ.ಪ್ರಸನ್ನಕುಮಾರ್, ಶ್ವಾಸಕೋಶದ ತಜ್ಞರು ಇವರು ತಮ್ಮ ಅನುಭವವನ್ನು ಹಂಚಿಕೊಂಡರು.