ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನಕ್ಕಾಗಿ ದೇಹದಾನ ಅಗತ್ಯ

ತುಮಕೂರು, ನ. ೨೦- ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಆವಿಷ್ಕಾರಗಳು ನಡೆಯುತ್ತಿದ್ದು, ವೈದ್ಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನಕ್ಕಾಗಿ ಮೃತದೇಹಗಳ ಅವಶ್ಯಕತೆ ಇದೆ. ದೇಹದಾನ ಎಂಬುದು ಒಂದು ಪಾವಿತ್ರ್ಯದ ಕೆಲಸ ದೇಹದಾನ ತಮ್ಮ ಜೀವಿತಾವಧಿಯಲ್ಲಿ ಮಾಡುವ ಕೊನೆಯ ದಾನ. ತಮ್ಮ ಮರಣಾ ನಂತರ ದೇಹವನ್ನು ನೆಲದಲ್ಲಿ ಹೂಳುವ ಅಥವಾ ಸುಡುವ ಕೃತ್ಯದ ಬದಲಾಗಿ ಮಾನವ ತನ್ನ ಜೀವಿತಾವಧಿ ಯುದ್ದಕ್ಕೂ ಪರೋಪಕಾರಿಯಾಗಿ ಬಾಳಿ ಹುಟ್ಟಿದ ಸಾರ್ಥಕತೆಯನ್ನು ಪರಿಪೂರ್ಣ ಮಾಡಲು ಮತ್ತೊಂದು ಸರಿಸಾಟಿಯಾಗದ ಕೆಲಸವನ್ನು ಬೆಂಗಳೂರಿನ ನಿವಾಸಿ ಎಸ್.ಎನ್.ಸರೋಜಮ್ಮನವರು (ಲೇಟ್.ರಾಮಾಚಾರಿ) ತಮ್ಮ ಮೃತದೇಹವನ್ನು ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶವಶ್ಛೇದ ಪ್ರಾಯೋಗಿಕ ಕಾರ್ಯಕ್ಕೆ ಬಳಸಲು ದೇಹದಾನ ಮಾಡಿದ್ದಾರೆ.
ಇವರು ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ನರ್ಸಿಂಗ್ ಪ್ರಾಂಶುಪಾಲರಾಗಿದ್ದು, ವೈದ್ಯಕೀಯ ರಂಗಕ್ಕೆ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಬೆಂಗಳೂರು ವಾಸಿಯಾಗಿದ್ದು ಮೂಲತಃ ತುಮಕೂರಿನ ಸಾಸಲು ಗ್ರಾಮದವರಾಗಿದ್ದಾರೆ. ಇವರು ಕವಲೇಶ್ ರವರ ತಾಯಿಯಾಗಿದ್ದಾರೆ. ಕಮಲೇಶ್‌ರವರು ರಾಜ್ಯದ ಅತ್ಯುನ್ನತ ವೃತ್ತಿಯಲ್ಲಿದ್ದು, ಹಲವಾರು ಸಚಿವರುಗಳ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸಿ ತಮ್ಮ ತಾಯಿಯ ದೇಹವನ್ನು ದಾನ ಮಾಡಲು ಸಹಕರಿಸಿದ್ದಾರೆ.
ಮೃತದೇಹವನ್ನು ಗೌರವದಿಂದ ಸ್ವೀಕರಿಸಿ ಇವರ ಆತ್ಮಕ್ಕೆ, ಮೃತರ ಕುಟುಂಬಕ್ಕೆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತಾ ದೇಹದಾನ ಕಾರ್ಯಕ್ಕೆ ಸಹಕರಿಸಿದ ಅವರ ಕುಟುಂಬಕ್ಕೆ ಹಾಗೂ ಮೃತರ ಆತ್ಮಶಾಂತಿಗಾಗಿ ಭಗವಂತನ ಕೃಪೆ ಕೋರಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಪ್ರಾಂಶುಪಾಲರು ವಿವಿಧ ವಿಭಾಗದ ಮುಖ್ಯಸ್ಥರು ಧನ್ಯವಾದ ತಿಳಿಸಿದ್ದಾರೆ.