ವೈದ್ಯಕೀಯ ವಿದ್ಯಾರ್ಥಿಗಳಿಂದ ಕೊರೋನಾ ಪೀಡಿತರಿಗೆ ಅದ್ವೀತಿಯ ಸೇವೆ

ದಾವಣಗೆರೆ.ಜೂ.೧೧; ಕೊರೋನಾ ಎರಡನೇ ಅಲೆಯಲ್ಲಿ ಎಸ್. ಎಸ್. ಹೈಟೆಕ್ ಕಾಲೇಜಿನ ಅಂತಿಮ ವರ್ಷದ 130 ವೈದ್ಯಕೀಯ ವಿದ್ಯಾರ್ಥಿಗಳು ಕರ್ನಾಟಕದಾದ್ಯಂತ ಹೋಂ ಐಸೋಲೇಶನ್ನಲ್ಲಿರುವ ಕೋವಿಡ್-19 ರೋಗಿಗಳಿಗೆ ಮೇ ತಿಂಗಳ ಮೊದಲನೇ ವಾರದಿಂದ ಉಚಿತ ಟೆಲಿಕನ್ಸಲ್ಟೇಶನ್ ಸೇವೆಯನ್ನು ಒದಗಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳು, ಮಾಸ್ಟರ್ ಟ್ರೇರ‍್ಸ್ ಹಾಗೂ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಇದುವರೆಗೂ 35000ಕ್ಕೊ ಅಧಿಕ ಕೋವಿಡ್ ಪಾಸಿಟಿವ್ ರೋಗಿಗಳನ್ನು ದೂರವಾಣಿಯ ಮುಖಾಂತರ ಸಂಪರ್ಕಿಸಿ ಮಾನಸಿಕ ಸ್ಥೈರ್ಯ ಹಾಗೂ ದೈಹಿಕ ರೋಗಕ್ಕೆ ಸೂಕ್ತ ಚಿಕೆತ್ಸೆ-ಸಲಹೆಗಳನ್ನು ನೀಡಿ, ಈ ಮಹಾಮಾರಿ ರೋಗದಿಂದ ಗುಣಮುಖರಾಗಿ ಹೋರಬರಲು ನಿರಂತರವಾಗಿ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳ ಈ ಅವಿರತ ಪರಿಶ್ರಮದಿಂದಾಗಿ ಎಸ್. ಎಸ್. ಹೈಟೆಕ್ ಕಾಲೇಜು ಕರ್ನಾಟಕ ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳ ಸೇವೆಯ ರ‍್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 5 ಸ್ಥಾನದಲ್ಲಿ ಮುಂದುವರೆಯುತ್ತಾ, ಪ್ರಸ್ತುತ ಎರಡುವಾರಗಳಿಂದ ರಾಜ್ಯದಲ್ಲಯೇ ಎರಡನೇ ಸ್ಥಾನ ಗಳಿಸುವಲ್ಲಿ ಸಫಲವಾಗಿದೆ.
ಈ ಅಭೂತಪೂರ್ವ ಸಾಧನೆಯನ್ನು ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ, ವೈದ್ಯವೃಂದದವರಿಗೆ, ಮಾಸ್ಟರ್ ಟ್ರೇನರ್ಸ್ ಗಳಾದ ಡಾ.ಬಸವರಾಜಪ್ಪ. ಎಂ, ಡಾ. ಲತಾ.ಜಿ. ಎಸ್, ಡಾ.ಮಂಜುನಾಥ. ಜೆ, ಡಾ.ಹರೀಶ್ ಕುಮಾರ್. ವಿ. ಎಸ್, ಡಾ. ಮೃತ್ಯುಂಜಯ. ಎನ್ ಇವರುಗಳಿಗೆ ಕಾಲೇಜ್‌ನ ಛೇರ‍್ಮನ್‌ರಾದ  ಎಸ್. ಎಸ್. ಮಲ್ಲಿಕಾರ್ಜುನರವರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ವೈದ್ಯಕೀಯ ಅಧೀಕ್ಷಕರು ಶ್ಲಾಘಿಸಿ ಅಭಿನಂದಿಸಿದ್ದಾರೆ.