ವೈದ್ಯಕೀಯ ವಿಜ್ಞಾನ ಮಾಸಿಕ ನಿಯತಕಾಲಿಕೆ ಅಸೋಸಿಯೇಟ್ ಎಡಿಟರ್ ಹುದ್ದೆಗೆಡಾ. ಇನಾಮದಾರ ಆಯ್ಕೆ

ವಿಜಯಪುರ, ಜೂ. 02: ಜಗತ್ತಿನ ಖ್ಯಾತ ಬ್ರಿಟಿಷ ವೈದ್ಯಕೀಯ ಪ್ರಕಾಶನ ಸಂಸ್ಥೆಯ ಬಿ ಎಂ ಜೆ ಕೇಸ ರಿಪೆÇೀರ್ಟ ವೈದ್ಯಕೀಯ ವಿಜ್ಞಾನ ಮಾಸಿಕ ನಿಯತಕಾಲಿಕೆಯ ಅಸೋಸಿಯೇಟದ ಎಡಿಟರ್ ಅಗಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ ಆಯ್ಕೆ ಆಗಿದ್ದಾರೆ.
ಈ ಮೂಲಕ ವಿಶ್ವದ ಪ್ರತಿಷ್ಠಿತ ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಆಯ್ಜೆಯಾದ ಭಾರತದ ಮೊದಲ ಚರ್ಮರೋಗ ತಜ್ಞ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಜೂನ್ 01, 2024 ರಿಂದ ಅವರು ನಿಯತಕಾಲಿಕೆಯ ಅಸೋಸಿಯೇಟ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಚರ್ಮರೋಗ ವೈದ್ಯಕೀಯ ಕ್ಷೇತ್ರದಲ್ಲಿ ಅವರದೇ ಆದ ಕೊಡುಗೆ ನೀಡುತ್ತಿರುವ ಡಾ. ಅರುಣ ಚಂ. ಇನಾಮದಾರ ಅವರಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಾಧಿಪತಿ ಎಂ. ಬಿ. ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.