ವೈದ್ಯಕೀಯ ಕ್ಷೇತ್ರದಲ್ಲಿ  ದಾದಿಯರದು ಬಹುಮುಖ್ಯ ಪಾತ್ರ

ಸಂಜೆವಾಣಿ ವಾರ್ತೆ

ಚಿತ್ರದುರ್ಗ ಮೇ. 20 : ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಲ್ಲಿ ದಾದಿಯರದು ಬಹುಮುಖ್ಯ ಪಾತ್ರವಿದೆ. ಕಾಯಿಲೆಯಿಂದ ಬಳಲುವ ಇನ್ನೊಬ್ಬರ ಸೇವೆ ಮಾಡುವ ಅವಕಾಶ ನರ್ಸ್ಗಳಿಗೆ ಮಾತ್ರ ಸಿಗುತ್ತದೆ ಎಂದು ಡಾ. ಬಸವಕುಮಾರ ಸ್ವಾಮಿಗಳು ಹೇಳಿದರು.ನಗರದ ಎಸ್.ಜೆ.ಎಂ. ನರ್ಸಿಂಗ್ ಕಾಲೇಜು ವತಿಯಿಂದ ಬಿಚ್ಚುಗತ್ತಿ ಭರಮಣ್ಣನಾಯಕ ಸಭಾಂಗಣದಲ್ಲಿ  ನಡೆದ ಅಂತಾರಾಷ್ಟಿçÃಯ ಶುಶ್ರೂಷಕರ ದಿನಾಚರಣೆ ಹಾಗು ಪ್ರಥಮವರ್ಷದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಪುಷ್ಪವೃಷ್ಟಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ರೋಗಿ ಮತ್ತು ವೈದ್ಯರ ನಡುವೆ ಸೇತುವೆಯಾಗಿ ಕೆಲಸ ಮಾಡುವವರು ದಾದಿಯರು. ಕಲಿತ ವಿದ್ಯೆಯನ್ನು ಸಂತೋಷದಿAದ ಸೇವೆ ಮಾಡುವ ಮೂಲಕ ಆನಂದಿಸಬೇಕು. ಸರ್ವಸಂಗ ಪರಿತ್ಯಾಗಿ ಮಾಡಲಾರದ ಸೇವೆಯನ್ನು ದಾದಿಯರು ಮಾಡುತ್ತಾರೆ ನರ್ಸಿಂಗ್ ಶಿಕ್ಷಣ ಸೇವೆಯನ್ನು ಕಲಿಸುತ್ತದೆ. ನೈಟಿಂಗೆಲ್, ಮದರ್ ಥೆರೆಸಾ ದೊಡ್ಡವರಾದದ್ದು ಅವರ ಮಾಡಿದ ಸೇವೆಯಿಂದ. ಮನುಷ್ಯನನ್ನು ಮನುಷ್ಯನನ್ನಾಗಿ ಪ್ರೀತಿಸಬೇಕು. ಆಯುಷ್ಯ ಚಿಕ್ಕದು ಆದರೆ ಸೇವೆ ಮುಖ್ಯವಾದದ್ದು. ಅಧ್ಯಯನ ಮುಗಿದ ಮೇಲೆ ಆಸ್ಪತ್ರೆಗಳಿಗೆ ಹೋಗುತ್ತೀರಿ. ಅಲ್ಲಿನ ಸೇವೆ ಪ್ರಾಮಾಣಿಕವಾಗಿರಲಿ. ಉತ್ತಮ ಸೇವೆಯಿಂದ ಆ ಕ್ಷೇತ್ರದಲ್ಲಿ ಬೆಳೆಯಲು ಅವಕಾಶಗಳಿರುತ್ತವೆ. ನೀವು ಇಲ್ಲಿ ಪಡೆದಿರುವ ಜ್ಞಾನ ಮತ್ತು ನಿಮ್ಮಲ್ಲಿರುವ ಪ್ರತಿಭೆಯನ್ನು ವ್ಯಯ ಮಾಡದೆ ಒಳ್ಳೆಯ ಸಾಧನೆಗೆ ಬಳಸಿಕೊಳ್ಳಿರಿ ಎಂದು ತಿಳಿಸಿದರು.