ವೈದ್ಯಕೀಯ ಕ್ಷೇತ್ರಕ್ಕೆ ಕೃತಕ ಬುದ್ಧಿವಂತಿಕೆ ಅಗತ್ಯ: ಡಾ. ಆರ್.ಬಿ ಪಚೋರಿ

ಕಲಬುರಗಿ,ನ.10- ವೈದ್ಯಕೀಯ ಕ್ಷೇತ್ರದ ತಪಾಸಣೆ ಮತ್ತು ಚಿಕಿತ್ಸಾ ವಿಭಾಗದಲ್ಲಿ ಕೃತಕ ಬುದ್ಧಿವಂತಿಕೆ ಎಐ ಕೊಡುಗೆ ಅತ್ಯಂತ ಮಹತ್ವದ್ದು ಪ್ರಸ್ತುತ ಪೆಂಡಾಮಿಕ್ ಕೋವಿಡ್-19 ಸಂದರ್ಭದಲ್ಲಿ ಕೃತಕ ಬುದ್ಧಿವಂತಿಕೆ ಎಐ ಅನ್ನು ಹಲವು ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತಿದೆ ಐಐಟಿ ಇಂದೋರ ಡಾ. ಆರ್.ಬಿ ಪಚೋರಿ ಹೇಳಿದ್ದರು.
ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜಿನಲ್ಲಿ ಐದು ದಿನಗಳ ಕೃತಕ ಬುದ್ಧಿವಂತಿಕೆ ಎಐ ಕುರಿತು ಆನ್‍ಲೈನ್ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಕೃತಕ ಬುದ್ದಿವಂತಿಕೆಯ ಮಾಹತ್ವದ ಕುರಿತು ವಿವರಿಸಿದರು.
ವೈರಸ್‍ನ ಡ್ರಗ್ಸ್ ಸಂಶೋಧನೆ ಮತ್ತು ಲಸಿಕೆಯ ಅಭಿವೃದ್ಧಿಯಲ್ಲಿ ಹಾಗೆ ಆರೋಗ್ಯ ಕೇಂದ್ರಗಳಲ್ಲಿ ಸೇವೆಗಳು & ಸಂಪನ್ಮೂಲಗಳ ನಿರ್ವಹಣೆಯಲ್ಲಿ ಮತ್ತು ಸಾರ್ವಜನಿಕ ನೀತಿ ನಿರ್ಧಾರಗಳನ್ನು ಬೆಂಬಲಿಸಲು ಕೃತಕ ಬುದ್ಧಿವಂತಿಕೆ ಎಐ ಉಪಯೋಗವಾಗಿದೆ ಮತ್ತು ಬುದ್ಧಿವಂತಿಕೆ ವ್ಯವಸ್ಥೆಯನ್ನು ಉಪಯೋಗಿಸಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ವಿವಿಧ ಕ್ಷೇತ್ರಗಳಾದ ಸೈಕಾಲೋಜಿ, ಜೀವಶಾಸ್ತ್ರ, ಆರೋಗ್ಯ ಮತ್ತು ಇಂಜನಿಯರಿಂಗ್ ವಿಭಾಗಗಳಲ್ಲಿ ಉಪಯೋಗಿಸಲಾಗುತ್ತಿದೆ ಎಂದರು.
ಕೃತಕ ಬುದ್ಧಿವಂತಿಕೆ ಮತ್ತು ಅದರ ಉಪಯೋಗಗಳು ಕುರಿತು ಐದು ದಿನಗಳ ಕಾಲ ನಡೆಯಲ್ಲಿರುವ ಆನ್‍ಲೈನ್ ಕಾರ್ಯಗಾರದ ಸದುಪಯೋಗ ಪಡಿಸಿಕೊಂಡು ಉನ್ನತ ಮಟ್ಟದ ಸಂಶೋಧನೆ ಪೂರಕವಾಗಿ ಶ್ರಮಿಸಬೇಕೆಂದು ಎಚ್.ಕೆ.ಇ.ಎಸ್. ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಬಿಲಗುಂದಿ ಸಲಹೆ ನೀಡಿದ್ದರು.
ದೇಶದ ವಿವಿಧ ರಾಜ್ಯಗಳಿಂದ ಸುಮಾರು 150 ತಾಂತ್ರಿಕ ಶಿಕ್ಷಕರು ಸಂಶೋಧಕರು ಭಾಗಿಯಾಗಿದ್ದಾರೆ ಮತ್ತು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ಐಐಟಿ/ಎನ್‍ಐಟಿ ವಿಭಿನ್ನ ವಿಶ್ವವಿದ್ಯಾಲಯದ ಇಂಜನಿಯರಿಂಗ್ ಕಾಲೇಜುಗಳಿಂದ ಕೃತಕ ಬುದ್ಧಿವಂತಿಕೆ ಎಐ ಕ್ಷೇತ್ರದಲ್ಲಿ ನುರಿತ ಸಂಪನ್ಮೂಲ ತಜ್ಞರು ತಮ್ಮ ಸಂಶೋಧನೆ ಮತ್ತು ಅದರ ಉಪಯುಕ್ತತೆ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಎಐಸಿಟಿಇ ಎಐಸಿಟಿಎ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿಯು ದೇಶದಾದ್ಯಂತ ಇಂಜನಿಯರಿಂಗ್ ಕಾಲೇಜಿನ ಶಿಕ್ಷಕರಿಗೆ, ಸಂಶೋಧಕರಿಗೆ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಉನ್ನತಮಟ್ಟದ ಹಾಗೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನದ ತಿಳುವಳಿಕೆ ನೀಡುವ ಗುರಿ ಹೊಂದಿದೆ. ಇದರಡಿಯಲ್ಲಿ ಇಂಜನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗಕ್ಕೆ ಅನುಮತಿ ದೊರೆತಿದ್ದು ಐದು ದಿನಗಳ ಆನ್‍ಲೈನ್ ಉಪನ್ಯಾಸ ಮಾಲಿಕೆಗೆ ಸೋಮವಾರ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಸ್. ಹೆಬ್ಬಾಳ ಸ್ವಾಗತಿಸಿ ಕೃತಕ ಬುದ್ಧಿವಂತಿಕೆ ಎಐ ಪ್ರಪಂಚದ ಶಕ್ತಿಮತ, ತಂತ್ರಜ್ಞಾನ, ಪ್ರಭುತ್ವ ರಾಷ್ಟ್ರವಾಗಬೇಕಾದರೆ ಕೃತಕ ಬುದ್ಧಿವಂತಿಕೆ ಎಐ ಕ್ಷೇತ್ರದಲ್ಲಿ ಮುಂದುವರೆದರೆ ಸಾದ್ಯ ಎಂದು ಹೇಳಿದ್ದರು. ವಿಭಾಗದ ಮುಖ್ಯಸ್ಥರಾದ ಡಾ. ರಾಜು ಯಾನಮಶೆಟ್ಟಿ ಅವರು ಮಾತಿನಾಡಿದ್ದರು, ಸಂಚಾಲಕರಾದ ಡಾ. ನಾಗೇಂದ್ರ ಎಚ್. ಕೃತಕ ಬುದ್ಧಿವಂತಿಕೆ ಎಐ ಮತ್ತು ಅದರ ಉಪಯೋಗಗಳ ಕುರಿತು ಸಮಗ್ರ ಮಾಹಿತಿ ನೀಡಿದ್ದರು. ಡಾ. ಶ್ರೀಧರ ಕೆ. ನಿರೂಪಿಸಿದರು ಮತ್ತು ಪ್ರೊ. ರಾಜಕುಮಾರ ಬೈನೋರು ವಂದಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಚಾರ್ಯ ಡಾ. ಎಸ್.ಎಸ್. ಕಲಶೆಟ್ಟಿ ಡೀನ್ ಅಕಾಡೆಮಿಕ್ ಡಾ. ಎಸ್.ಆರ್. ಪಾಟೀಲ, ಡಾ. ಬಾಬುರಾವ ಶೇರಿಕರ್, ವಿಭಾಗದ ಉಪನ್ಯಾಸಕರುಗಳು ಮತ್ತು ಸಂಶೋಧಕರು ಮೈನೋದ್ದಿನ್, ಶ್ವೇತಾ ನಾಶಿಕರ್ ಉಪಸ್ಥಿತರಿದ್ದರು.