ವೈದ್ಯಕೀಯ ಕೋರ್ಸ್‌ಗಳ ಶುಲ್ಕ ದುಬಾರಿ

ಬೆಂಗಳೂರು, ನ. ೧೫- ಕೊರೋನಾ ಸೋಂಕಿನ ನಡುವೆಯೂ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಈ ಬಾರಿ ಶುಲ್ಕ ದುಬಾರಿಯಾಗಲಿದೆ.

ಪ್ರಸಕ್ತ ಸಾಲಿನಲ್ಲಿ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಶೇಕಡಾ ೧೫ ರಷ್ಟು ಹೆಚ್ಚಾಗುವ ಎಲ್ಲಾ ಸಾದ್ಯತೆ ನಿಚ್ಚಳವಾಗಿದೆ.

ಶುಲ್ಕ ಹೆಚ್ಚಳ ಸಂಬಂಧ ಈಗಾಗಲೇ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು ಶೀಘ್ರದಲ್ಲೇ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

೨೦೨೦-೨೧ ಸಾಲಿಗೆ ಪ್ರವೇಶ ಶುಲ್ಕ ಖಾಸಗೀ ಕಾಲೇಜುಗಳಲ್ಲಿ ೧.೧೧ ಲಕ್ಷ ರೂಪಾಯಿ ಇದ್ದ ಶುಲ್ಕ ಶೇ.೧೫ ರ ಹೆಚ್ಚಳದಿಂದಾಗಿ ಸರ್ಕಾರಿ ಕೋಟಾ ಶುಲ್ಕ ೧.೨೮ ಲಕ್ಷಕ್ಕೆ ಹೆಚ್ಚಳವಾಗಲಿದೆ.

ಹಾಗು ಖಾಸಗೀ ಕಾಲೇಜುಗಳ ಹಾಲಿ ಶುಲ್ಕ ೭.೮೫ ಲಕ್ಷ ರೂಪಾಯಿ ಯಿಂದ ೯.೮೧ ಲಕ್ಷ ರೂಪಾಯಿ ಗೆ ಹೆಚ್ಚಳವಾಗಲಿದೆ.
ದಂತ ವೈದ್ಯಕೀಯ ಕಾಲೇಜುಗಳಲ್ಲಿ ೭೨ ಸಾವಿರ ಇರುವ ಸರ್ಕಾರಿ ಕೋಟಾದ ಶುಲ್ಕ ೮೩ ಸಾವಿರ ರೂಪಾಯಿ ಗೆ ಹಾಗು ೫.೩೨ ಲಕ್ಷ ಇರುವ ಖಾಸಗೀ ಆಡಳಿತ ಮಂಡಳಿ ಶುಲ್ಕ ೬.೬೬ ಲಕ್ಷಕ್ಕೆ ಹೆಚ್ಚಾಗುವ ಎಲ್ಲಾ ಸಾದ್ಯತೆಗಳಿವೆ.