ವೈದ್ಯಕೀಯ ಉಪಕರಣ ಹಸ್ತಾಂತರ

ಮೈಸೂರು,ಮೇ 27-ಕೋವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣಗಳಾದ 7 ಆಮ್ಲಜನಕ ಸಾಂದ್ರಕ, ಹೋಮ್ ಐಸೋಲೇಷನ್ ಕಿಟ್ಸ್, ವಾಲ್ ಮೌಂಟೆಡ್ ಆಕ್ಸಿಜನ್ ಫೆÇ್ಲೀರ್ ಮೀಟರ್ಸ್ ಅನ್ನು ವಿವಿಧ ಸಂಸ್ಥೆಗಳವರು ನಗರಪಾಲಿಕೆಗೆ ಹಸ್ತಾಂತರಿಸಿದರು.
ಇಂದು ನಗರಪಾಲಿಕೆಯ ಮುಂಭಾಗ ಆಯುಕ್ತೆ ಶಿಲ್ಪಾನಾಗ್ ಅವರಿಗೆ ಬಕಾರ್ಡಿ ಸಂಸ್ಥೆಯವರು 5, ಶೆಟ್ಟಿ ಮೆಕಾನಿಕಲ್ ಪ್ರೈವೇಟ್ ಲಿಮಿಟೆಡ್ ನವರು 2 ಆಮ್ಲಜನಕ ಸಾಂದ್ರಕವನ್ನು, ವಾಕ್ ಮೇಟ್ ಸಂಸ್ಥೆಯವರು 4 ಸಾವಿರ ಹೋಮ್ ಐಸೋಲೇಷನ್ ಕಿಟ್ಸ್ ಅನ್ನು, ಕೇನ್ಸ್ ಟೆಕ್ನಾಲಜಿಸ್ ಅವರು 100 ವಾಲ್ ಮೌಂಟೆಡ್ ಆಕ್ಸಿಜನ್ ಫೆÇ್ಲೀರ್ ಮೀಟರ್ಸ್ ಅನ್ನು ನೀಡಿದರು. ಈ ಸಂದರ್ಭದಲ್ಲಿ ನಗರಪಾಲಿಕೆಯ ಎಡಿಸಿ ಶಶಿಕುಮಾರ್, ಎಇಇ ಮತ್ಯುಂಜಯ, ಕೆ.ಆರ್.ಆಸ್ಪತ್ರೆಯ ಡಾ.ಎಚ್.ಎನ್.ದಿನೇಶ್, ಸ್ಮೃತಿ, ಜಯರಾಮ್, ಅಗಸ್ಟಿನ್, ಕಿರಣ್ ಇತರರು ಉಪಸ್ಥಿತರಿದ್ದರು.