ವೈಟ್‌ಫೀಲ್ಡ್‌ನಲ್ಲಿ ಪೊಲೀಸರಿಗೆ ಕೋವಿಡ್ ಕೇರ್ ಸೆಂಟರ್

ಕೆ.ಆರ್.ಪುರ,ಮೇ.೧- ತೀವ್ರವಾಗಿ ಹರಡುತ್ತಿರುವ ಕೋವಿಡ್ ಮಹಾಮಾರಿ ಮಧ್ಯೆ ಸತತ ೨೪ ಗಂಟೆಗಳ ಕಾಲ ದುಡಿಯುತ್ತಿರುವ ಪೊಲೀಸರ ಜೀವ ರಕ್ಷಣೆಗೆ ವೈಟ್‌ಫೀಲ್ಡ್‌ನಲ್ಲಿ ಪೊಲೀಸರಿಗಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಉದ್ಘಾಟಿಸಿದರು.
ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಕೋವಿಡ್ ೧೯ ಎರಡನೇ ಅಲೆ ಬಂದಮೇಲೆ ಪೊಲೀಸರಿಗೂ ಹರಡುತ್ತಿದೆ. ಆದರೆ ವ್ಯಾಕ್ಸಿನ್ ಹಾಕಿಕೊಂಡಿರುವ ಕಾರಣ ಹೆಚ್ಚು ಪರಿಣಾಮ ಬೀರುತ್ತಿಲ್ಲ ಮತ್ತು ವ್ಯಾಕ್ಸಿನ್ ಹಾಕಿಕೊಂಡಿರವವರಿಗೆ ಅಷ್ಟು ಪರಿಣಾಮಕಾರಿಯಾಗಿಲ್ಲ. ಸೋಂಕಿತ ಪೊಲೀಸರು ಶೇ. ೯೦ ರಷ್ಟು ಮನೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಾರೆ. ಆದರೆ ಎಲ್ಲಾ ಮನೆಗಳಲ್ಲಿ ಓಂ ಐಸೋಲೇಶನ್ ವ್ಯವಸ್ಥೆ ಇಲ್ಲ. ಈ ಕಾರಣಕ್ಕಾಗಿ ಕಾಡುಗೋಡಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಕೇರ್ ಸೆಂಟರ್ ನಿರ್ಮಾಣಕ್ಕೆ ವೈಟ್ ಫೀಲ್ಡ್ ರೈಸಿಂಗ್ ಮತ್ತು ಬಯೋಕಾನ್ ಸಂಸ್ಥೆ ಸಹಕಾರ ನೀಡಿದ್ದು ಸುಸಜ್ಜಿತವಾಗಿದೆ ಎಂದು ನುಡಿದರು.
ಇದರಲ್ಲಿ ಎನ್‌ಜಿಒಗಳ ಪಾತ್ರ ಮಹತ್ವದ್ದಾಗಿದ್ದು, ಮಾಸ್ಕ್ ,ಸ್ಯಾನಿಟೈಸರ್, ಪಿಪಿಇ ಕಿಟ್, ಉತ್ತಮ ಗುಣಮಟ್ಟದ ಬೆಡ್, ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ ಹಾಗೂ ಸ್ಮೈಲ್ ಕಂಪನಿ ಕ್ಯಾಟರಿಂಗ್ ವ್ಯವಸ್ಥೆ ಪ್ರತಿದಿನ ಹೆಲ್ತ್ ಚೆಕಪ್ ಇರುತ್ತದೆ, ಇದು ಮನೆಗಿಂತ ಉತ್ತಮವಾಗಿದೆ ಎಂದು ತಿಳಿಸಿದರು.
ಇದೇ ರೀತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಬೇರೆ ಕಡೆ ಮಾಡಬೇಕು ಅಂದುಕೊಡಿದ್ದೇವೆ,
ಪೊಲೀಸರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುವುದು ತಡ ಆಗುತ್ತೆ, ಆದ್ದರಿಂದ ಇಂತಹ ಕೋವಿಡ್ ಕೇರ್ ಸೆಂಟರ್ ಅವಶ್ಯಕತೆ ಇದೆ. ಈಗಾಗಲೇ ೬೦೦ ಸಿಬ್ಬಂದಿಗಳು ಮನೆಯಲ್ಲೇ ಹೋಮ್ ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು. ಬೇರೆ ಇಲಾಖೆಗೆ ಹೋಲಿಸಿದರೆ ನಮ್ಮ ಪೊಲೀಸ್ ಸಿಬ್ಬಂದಿಗಳಲ್ಲಿ ಸಾವಿನ ಸಂಖ್ಯೆ ಕಡಿಮೆ. ೧,೦೫೦ ಸಿಬ್ಬಂದಿಗಳಿಗೆ ಸೋಂಕು ತಗುಲಿದ್ದು ಐಸಿಯುನಲ್ಲಿ ಕೇವಲ ಮೂರು ಕೇಸ್‌ಗಳಿವೆ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಹೆಚ್ಚುವರಿ ಆಯುಕ್ತರಾದ ಮುರುಗನ್, ವೈಟ್ ಫೀಲ್ಡ್ ಡಿಸಿಪಿ ದೇವರಾಜ್,ಸಂಚಾರಿ ವಿಭಾಗದ ರವಿಕಾಂತೆಗೌಡ,ಎಸಿಪಿ ಮನೋಜ್ ಕುಮಾರ್, ಡಾ.ಕಾಂತರಾಜು,ಕಾಡುಗೋಡಿ ಠಾಣಾಧಿಕಾರಿ ಮಂಜುನಾಥ್ ಇದ್ದರು.