ವೈಜ್ಞಾನಿಕ ಸಂಶೋಧನ ಪರಿಷತ್ ನಿಂದ ಸಮಾಜದ ಅಂಧಕಾರ ನಿರ್ಮೂಲನೆ.

ಬಳ್ಳಾರಿ ಏ 03 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಸಮಾಜದ ಅಂಧಕಾರ ಕಳೆದು ಮಾನವೀಯತೆ ಬೆಳೆವ ಕೆಲಸ ಮಾಡುತ್ತಿದೆ. ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್‍ನ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ ಆಭಿಪ್ರಾಯ ಪಟ್ಟರು.
ಸ್ಥಳಿಯ ಬಸವೇಶ್ವರ ನಗರದಲ್ಲಿ ಪವಾಡ ಬಯಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಮಾನವನ ನಂಬಿಕೆಯನ್ನೆ ಹಲವರು ಬಂಡವಾಳವನ್ನಾಗಿ ಮಾಡಿಕೊಂಡು ನಾನು ದೇವದೂತ, ನನಗೆ ಮೈಮೇಲೆ ದೇವರು ಬರುತ್ತಾನೆ. ನಿಮ್ಮ ಕೆಲಸವನ್ನು ಆಗುವಂತೆ ಮಾಡುತ್ತೇನೆಂದು ಬುರುಡೆ ಬಿಡುತ್ತಾ ದೇವರ ಹೆಸರಿನಲ್ಲಿ ಹಲವಾರು ಅನಾಚಾರಗಳನ್ನು ಮಾಡುವವರ ಹಿಂದಿನ ರಹಸ್ಯವನ್ನು ಜನತೆಗೆ ತಿಳಿ ಹೇಳಿ ಮೌಡ್ಯತೆಯನ್ನು ಹೊರತರುವ, ಸಮಾಜದ ಅಂಧಕಾರ ಕಳೆದು ಮಾನವೀಯತೆ ಬೆಳವ ಕೆಲಸ ವೈಜ್ಞಾನಿಕ ಪರಿಷತ್ ಮಾಡುತ್ತದೆ ಎಂದರು.
ಶಬರಿ ಮಲೈ ದೀಪದ ಹಿಂದಿನ ಸತ್ಯ, ಬಾಬಾನ ಆಪರೇಶಷನ್ ಗಳ ಹಿಂದಿನ ಸತ್ಯ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಡೋಂಗಿಗಳ ಹಿಂದಿನ ರಹಸ್ಯವನ್ನು ಬಯಲು ಮಾಡಲಾಗಿದೆ. ಸತತವಾಗಿ 30 ವರ್ಷಗಳಿಂದ ಪವಾಡ ಬಯಲು ಮಾಡುತ್ತಾ ಬಂದಿದ್ದು ಅದರ ಹಿಂದಿನ ಕಹಿಯು ಕಂಡಾಗಿದೆ ಎಂದರು.
ವೈಜ್ಞಾನಿಕ ಚಿಂತನೆಯನ್ನು ಮೂಡಿಸುವುದು ಪರಿಷತ್ತಿನ ಮೂಲ ಉದ್ದೇಶ. ಅದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ 160 ಮಂದಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಇಸ್ರೋ ಮಾಜಿ ಅಧ್ಯಕ್ಷ ಡಾ|| ಎಸ್. ಕಿರಣಕುಮಾರ್ , ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಮಾನ್ಯ ನಾಗಮೋಹನ್ ದಾಸ್ ಸಂಸ್ಥೆಗೆ ಗೌರವ ಮಾರ್ಗದರ್ಶಕರು, ಎಸ್.ಕೆ. ಉಮೇಶ್ ನಿವೃತ್ತ ಪೊಲೀಸ್ ಅಧೀಕ್ಷಕರು, ಲೋಕೇಶ್ವರ ನಿವೃತ್ತ ಪೊಲೀಸ್ ಉಪಾಯುಕ್ತರು ಗೌರವಾಧ್ಯಕ್ಷರು ಹೀಗೆ 27 ಪ್ರಮುಖರ ತಂಡದೊಂದಿಗೆ ಪರಿಷತ್ತನ್ನು ಸ್ಥಾಪಿಸಲಾಗಿದೆ” ಎಂದರು.
ಈಗ ಪರಿಷತ್ ಸಮಿತಿಗೆ 32 ಸಾವಿರ ಸದಸ್ಯರಿದ್ದಾರೆ. ಪರಿಷತ್ ಯೂ ಟ್ಯೂಬ್ ಚಾನಲ್ ಗೆ 1.70 ಕೋಟಿ ವೀಕ್ಷಕರಿದ್ದಾರೆ” ಎಂದ ಅವರು 2025ಕ್ಕೆ ಕಾಲ ಘಟಿಸುತ್ತದೆ ಎಂಬ ಪರಿಕಲ್ಟನೆಯಡಿ ಮೌಡ್ಯವನ್ನು ಕಿತ್ತೊಗೆಯುವ ಗುರಿಯೊಂದಿಗೆ ಪರಿಷತ್ತು ಕಾರ್ಯಚಾರಣಿಯನ್ನು ಆರಂಭಿಸಿದೆ.
ಜೂನ್ 1 ರೊಳಗೆ 1 ಲಕ್ಷ ಜನರ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. 100 ಪುಸ್ತಕಗಳನ್ನು ಪ್ರಕಟಿಸಲಾಗುವುದು. ಅಂದು ರೂ 2 ಕೋಟಿ ನಿಧಿಯನ್ನು ಸ್ಥಾಪಿಸುವ ಗುರಿ ಇದೆ” ಎಂದು ಹೇಳಿದರು.
ಆರ್.ಹೆಚ್., ಯಂ.ಚನ್ನಬಸವಸ್ವಾಮಿ ಪ್ರಸ್ತಾವಿಕ ಭಾಷಣದಲ್ಲಿ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು, ಸಭೆಯ ನಿರೂಪಣೆಯನ್ನು ವೀರಶೈವ ಮಹಾವಿದ್ಯಾಲಯದ ಭ್ರಮರಾಂಭ ಮತ್ತು ಹೇಮಾ ಬಿ. ಹೊಸೂರುಮಠ, ಸ್ವಾತಿ ಶಿಕ್ಷಕಿಯರು ಮಾಡಿದರು.