ವೈಜ್ಞಾನಿಕ ಮಾರ್ಗಗಳ ಬಳಸಿಕೊಂಡು ಪರಿಸರ ಉಳಿಸುವುದು ಉತ್ತಮ 

ಚಿತ್ರದುರ್ಗ. ಜು.೨೫; ಸರ್ಕಾರಿ ವಿಜ್ಞಾನದ ಕಾಲೇಜಿನ ಮುಂಭಾಗದಲ್ಲಿರುವ ಅರಳಿಮರದ ಸುತ್ತ ಸೀರೆ ಸುತ್ತಿ, ದಾರ ಸುತ್ತಿ, ಜನರು ತಮ್ಮ ಬೇಡಿಕೆಗಳಿಗಾಗಿ ಬೆಳೆಗ್ಗೆ ಸಾಕಷ್ಟು ಬಾರಿ ಅರಳಿಮರ ಸುತ್ತಿ ಹೋಗಿದ್ದಾರೆ. ಅವರ ಆಸೆಗಳು ನೆರೆವೇರಿದವೋ ಇಲ್ಲವೋ ತಿಳಿಯದಾಗಿದೆ?. ಆದರೆ ಆರೋಗ್ಯವಂತು ಸುದಾರಿಸಿರುತ್ತದೆ, ಜನರು ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಬಾಗದಲ್ಲಿ ಬಂದು, ಸಾಕಷ್ಟು ಆಧ್ಯಾತ್ಮಿಕತೆ ಮತ್ತು ಮೂಢನಂಬಿಕೆಗಳ ಪ್ರಯೋಗಗಳನ್ನ ಅರಳಿ ಮರದ ಮೇಲೆ ಮಾಡಿಕೊಂಡು ಹೋಗುತ್ತಿದ್ದಾರೆ. ಅಲ್ಲಿ ಕುಳಿತುಕೊಂಡು ವಿಜ್ಞಾನ ಪುಸ್ತಕ ಓದೋ ವಿದ್ಯಾರ್ಥಿಗಳಿಗೆ ಇದು ಆಶ್ಚರ್ಯವನ್ನ ಉಂಟುಮಾಡುತ್ತಿದೆ. ಜನರಲ್ಲಿ ಆಧ್ಯಾತ್ಮಿಕತೆ ಮತ್ತು ಮೂಢನಂಬಿಕೆಗಳು ಒಟ್ಟಿಗೆ ಕೆಲಸ ಮಾಡುತ್ತಿವೆ. ಜನರಲ್ಲಿ ವೈಜ್ಞಾನಿಕ ಮನೋಬಾವನೆಗಳನ್ನ ಎತ್ತರಿಸುವ ಕೆಲಸವಾಗಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಹಾಗೂ ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ನ ಗೌರವಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಜನರಲ್ಲಿ ಆಧ್ಯಾತ್ಮಿಕತೆ ಮತ್ತು ಮೂಢನಂಬಿಕೆಯ ಬಗ್ಗೆ ಇರುವ ವ್ಯತ್ಯಾಸವನ್ನ ತಿಳಿಸಿಕೊಡಬೇಕಾಗಿದೆ. ಜನರು ಪೂಜೆ ಪುನಸ್ಕಾರಕ್ಕಾಗಿ ಸಕಷ್ಟು ಹಣ ಕಳೆದುಕೊಳ್ಳುತ್ತಿದ್ದಾರೆ, ಮದ್ಯವರ್ತಿಯ ಶೋಷಣೆಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ, ಅವರೇ ಸ್ವ ಇಚ್ಚೆಯಿಂದ ಮರಗಳಿಗೆ ಸೀರೆ ಉಡಿಸಿಹೋಗಿದ್ದರೆ ಉತ್ತಮ, ಅವರ ಮನಸ್ಸಿನ ಸ್ಥಿತಿಯ ಬಳಲಿದೆ ಎಂದು ಪರಿಚಯವಾಗುತ್ತದೆ. ನೊಂದವರಿಗೆ ಈ ಅರಳಿ ಮರ, ಕಟ್ಟೆ ಆಶ್ರಯ ನೀಡಿದೆ ಎಂದರೆ ಆಶ್ಚಂiÀiðವಾಗದು. ಅರಳಿ ಮರ ಮತ್ತು ಬೇವಿನಮರ ಇವುಗಳನ್ನು ಆಧ್ಯಾತ್ಮಿಕತೆ ಮತ್ತು ಮೂಢನಂಬಿಕೆಗಳ ಜೊತೆ ಬೆರೆಸಲಾಗಿದೆ. ಜನರ ಎಲ್ಲಾ ಸಂಕಷ್ಟಗಳಿಗೂ ಸಹ, ಅರಳಿ ಮರದ ಪೂಜೆ, ಸುತ್ತುವಿಕೆ, ಮುಂತಾದವುಗಳ ಮುಖಾಂತರ, ತಮ್ಮೆಲ್ಲಾ ಸಂಕಷ್ಟಗಳನ್ನ ನಿವಾರಣೆ ಮಾಡಿಕೊಳ್ಳಬಹುದು ಎಂದು ನಂಬಿದ್ದಾರೆ, ಇದು ಅಸಾದ್ಯ. ಇಲ್ಲಿ ಮೂಡನಂಬಿಕೆ ಮತ್ತು ಆಧ್ಯಾತ್ಮಿಕತೆ ಎರಡು ಒಟ್ಟಿಗೆ ಕೆಲಸಮಾಡುತ್ತಿವೆ. ಅರಳಿಮರ ಸುತ್ತುವುದರಿಂದ ಜನರ ಆರೋಗ್ಯ ಸುಧಾರಿಸುತ್ತದೆ ಎಂಬುದು ಸತ್ಯ. ಇದು ವಿಜ್ಞಾನ ಸಹ ಪುಷ್ಟಿಕರಿಸುತ್ತದೆ. ಈಗ ಅದೇ ವೃಕ್ಷಕ್ಕೆ ಬೇರೆ ಬೇರೆ ಬಣ್ಣದ ದಾರಗಳನ್ನು ಕಟ್ಟಿ, ಸೀರೆ ಉಡಿಸಿ, ತಮ್ಮ ಆಸೆ ಆಕಾಂಕ್ಷೆಗಳನ್ನು ನೆರವೇರಿಸಿಕೊಳ್ಳಬಹುದು ಎಂಬುದನ್ನ ಮೂಢನಂಬಿಕೆ ಎನಿಸುತ್ತದೆ. ಹಿಂದೆ ಆಧ್ಯಾತ್ಮಿಕತೆ ಮತ್ತು ಮೂಢನಂಬಿಕೆಗಳ ಹೆಸರಲ್ಲಿ ಮರಗಳ ರಕ್ಷಣೆ ಮಾಡಲಾಗುತ್ತಿತ್ತು. ಇಲ್ಲದಿದ್ದರೆ ಜನರು ಮರವನ್ನು ಕಡಿದು ಹಾಕುತ್ತಿದ್ದರು ಎನ್ನುತ್ತಾರೆ. ಅದೇ ಮರದ ಮುಖಾಂತರ ಮನುಷ್ಯ ವ್ಯಾವಹಾರಿಕ ಕೈಚಳಕವನ್ನು ತೋರಿಸಿ, ಪೂಜೆ ಪುನಸ್ಕಾರ ನೆಪಗಳನ್ನು ಹೇಳಿ, ಜನರಿಗೆ ತಮ್ಮ ಆಸೆಗಳನ್ನು ನೆರವೇರಿಸಿಕೊಳ್ಳುವ ಏರ್ಪಾಡು ಮಾಡುತ್ತಿದ್ದಾನೆ. ವಿಜ್ಞಾನಕ್ಕೆ ಇದೆಲ್ಲವೂ ಅಚ್ಚರಿಯಾಗಿದೆ. ಜನರನ್ನು ಆಧ್ಯಾತ್ಮಿಕವಾಗಿ ಬದಲಾಯಿಸಿ, ಮೂಢನಂಬಿಕೆಯಿAದ ಅವರನ್ನ ಹೊರುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.ಯಾವುದಾದರ ಪೂಜೆ ಪುನಸ್ಕಾರದ ಹಿಂದೆ, ದುರುದ್ದೇಶ ಇದ್ದರೆ, ಖಂಡಿತ ಅದು ಮೂಡನಂಬಿಕೆ, ಎಂಬುದನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಶತ್ರುವಿನ ನಾಶ, ಶತ್ರುವಿನ ನಿವಾರಣೆಗೋಸ್ಕರ ಅರಳಿಮರಕ್ಕೆ ಕಪುö್ಪ ದಾರವನ್ನು ಕಟ್ಟುವುದು, ಅದರ ಬುಡದ ಮಣ್ಣನ್ನು ತಂದು ಮನೆಯಲ್ಲಿಟ್ಟು ಪೂಜಿಸಿ, ನಂತರ ಮತ್ತೆ ತೆಗೆದುಕೊಂಡು ಹೋಗಿ, ಆ ಮಣ್ಣಿನಲ್ಲಿ ಆ ದಾರವನ್ನು ಹೂತುಹಾಕಿದರೇ ಶತ್ರುಗಳು ಕಡಿಮೆಯಾಗುವರು ಅಥವಾ ನಾಶ ಮಾಡಬಹುದು ಎಂಬುದನ್ನು ಮನುಷ್ಯನಿಗೆ ತುಂಬಿ ಕಳಿಸುತ್ತಿದ್ದಾರೆ. ಹಾಗಾಗಿ ಇವೆಲ್ಲವನ್ನೂ ವಿಜ್ಞಾನದ ಮುಂದೆ ಪರೀಕ್ಷೆಗೊಳಪಡಿಸಿ, ಜನರಲ್ಲಿರುವ ಮೂಢನಂಬಿಕೆಯನ್ನು ತೊಲಗಿಸಬೇಕಾಗಿದೆ ಎಂದಿದ್ದಾರೆ.ಆಧ್ಯಾತ್ಮಿಕತೆಯನ್ನ ಮೂಢನಂಬಿಕೆಯೊAದಿಗೆ ಜೊಡಿಸಿ, ಜನರ ಶೋಷಣೆ ನೆಡೆಯುತಿದೆ. ಈ ಎಲ್ಲವನ್ನು ಬೇರ್ಪಡಿಸಿ, ಜನರಿಗೆ ಸರಿಯಾದ ಭಾವನೆಗಳ ತುಂಬಬೇಕಾಗಿದೆ. ಹೆೆದರಿದ ಮನಸ್ಸಿಗೆ ಮತ್ತಷ್ಟು ಹೆದರಿಸುವ ಮತ್ತು ಶೋಷಣೆ ಮಾಡುವಂತಹ ಸಂದರ್ಭಗಳು ಹೆಚ್ಚಾಗುತ್ತಿವೆ. ಮಕ್ಕಳಾಗಲಿಲ್ಲದವರಿಗೆ ಮಕ್ಕಳಾಗುವಂತೆ, ಮಕ್ಕಳಾದ ನಂತರ ಅವುಗಳ ಶ್ರೇಯಸ್ಸಿಗೋಸ್ಕರ, ಮದುವೆಯಾಗದಿದ್ದರೆ ಮದುವೆಯಾಗುವಂತಹ ವಿಚಾರಗಳನ್ನೆಲ್ಲ, ಈ ಮರದ ಸುತ್ತ ಸುತ್ತಿಸೆಇ, ಜನರನ್ನು ವಂಚಿಸುವ ಸಂಖ್ಯೆ ಹೆಚ್ಚಾಗುತ್ತಿದೆ. ಟಿ.ವಿ.ಗಳಲ್ಲಿ, ಮೋಬೈಲ್‌ಗಳಲ್ಲಿ ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಜನರಿಗೆ ನಾವು ವೈಜ್ಞಾನಿಕ ಮನೋಭಾವನೆ ತುಂಬಿ, ಮನೋಸ್ಥೆöÊರ್ಯ ಹೆಚ್ಚಿಸಿ, ಮನುಷ್ಯನಿಗೆ ಕಷ್ಟ ಸುಖಗಳು ಬಂದೇ ಬರುತ್ತೆ, ಅದರಿಂದ ಶಕ್ತಿಯನ್ನ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಸಿಕೊಡಬೇಕಾಗಿದೆ ಎಂದಿದ್ದಾರೆ.

ಒAದು ಅರಳೀ ಮರದ ಸುತ್ತ, ಬೇಕಾದಷ್ಟು ಕಲ್ಪನೆಗಳನ್ನ, ಕಥೆÉಗಳನ್ನು ಕಟ್ಟಿ, ಜನರಲ್ಲಿರುವ ಮೂಢನಂಬಿಕೆಗಳನ್ನು ಶೋಷಣೆ ಮಾಡಲು ಬಳಸಿಕೊಳ್ಳಬಹುದು ಎನ್ನುವುದಕ್ಕೆ ಇದು ಒಂದು ಉದಾಹರಣೆ, ಮದುವೆಯಾಗದಿದ್ದರೆ ಮರಕ್ಕೆಕ್ಕೊಂದು ತಾಳಿ ಕಟ್ಟಿಸುವರು, ಮದುವೆ ಆದ ನಂತರ ಮಕ್ಕಳಾಗದಿದ್ದರೆ ಅದಕ್ಕೊಂದು ತೊಟ್ಟಿಲು ಕಟ್ಟಿಸುವರು, ಮಕ್ಕಳಾಗಿ ಅವರ ಏಳ್ಗೆಗಾಗಿ ದಾರವನ್ನು ಕಟ್ಟಿಸುವುದು, ಮದುವೆಯಾದವರ ಮಡಿಲು ತುಂಬಿದರೆ, ಅದಕೊಂದು ಸೀರೆ ಸುತ್ತುವುದು, ಹೀಗೆ ಎಲ್ಲಾ ಭಾವನೆಗಳನ್ನು ಆ ಮರದ ಮೇಲೆ ಪ್ರಯೋಗ ಮಾಡಿ ಕೊಂಡು ಜನರು ಬರುತ್ತಿದ್ದಾರೆ. ಹಾಗಾಗಿ ಮನಸ್ಸನ್ನ ಗಟ್ಟಿಗೊಳಿಸುವಂತಹ ಎಲ್ಲಾ ವಿಚಾರಗಳನ್ನು ಶಿಕ್ಷಣದಲ್ಲಿ ನೀಡಬೇಕು. ಅವರನ್ನ ನಿಜವಾದ ಆಧ್ಯಾತ್ಮಿಕತೆಯ ಕಡೆಗೆ ಸೆಳೆದುಕೊಂಡು ಬರಬೇಕಾದ್ದು ಉತ್ತಮ ಎಂದಿದ್ದಾರೆ. 

ವಿಜ್ಞಾನವನ್ನು ಜನಸಾಮಾನ್ಯರ ಬಳಿಗೆ ತೆಗೆದುಕೊಂಡು ಹೋಗಿ, ಅವರನ್ನು ಮಾನಸಿಕವಾಗಿ, ದೈಹಿಕವಾಗಿ, ಆಧ್ಯಾತ್ಮಿಕವಾಗಿ, ಶಕ್ತಿಶಾಲಿಯನ್ನಾಗಿ ಮಾಡಬೇಕಾದ್ದು ನಮ್ಮಗಳ ಕರ್ತವ್ಯವಾಗಿದೆ. ನಮ್ಮ ದೇಶದಲ್ಲಿ ಜನರು ಕಲಿಕೆಯಲ್ಲಿ ಹಿಂದುಳಿದು, ಅನರಕ್ಷತೆಯಿಂದ ತುಂಬಿರುವುದರಿAದ, ಹೆಣ್ಣು ಮಕ್ಕಳನ್ನ ಬಹಳ ಸುಲಭವಾಗಿದೆ ಶೋಷಿಸಬಹುದು, ಅದಕ್ಕೆ ಇಂತಹ ಮರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮರಗಳನ್ನು ಉಳಿಸಿಕೊಳ್ಳುವುದು ಒಂದು ಕಡೆಯಾದರೆ, ಅವುಗಳನ್ನೆ ಬಳಸಿ ಶೋಷಣೆ ಮಾಡುವುದು ಇನ್ನೊಂದು ಕಡೆಯ ಮುಖವಾಗಿದೆ. ಹಾಗಾಗಿ ಗ್ರಾಮೀಣ ಮತ್ತು ನಗರದ ಜನರಲ್ಲೂ ಇರುವ ಸಾವಿರಾರು ಮೂಡನಂಬಿಕೆಗಳನ್ನು ತೊಲಗಿಸುವತ್ತÀ ಪ್ರಯತ್ನಗಳಾಗಬೇಕು. ಮನುಷ್ಯನ ದುರಾಸೆಗಂತೂ ಕೊನೆಯೇ ಇಲ್ಲ, ಭಿಕ್ಷುಕನಿಗೆ ಲಕ್ಷಾಧೀಶರಾಗಬೇಕೆಂಬ ಆಸೆ, ಲಕ್ಷಾಧೀಶನಿಗೆ ಕೊಟ್ಯಾದೀಶನಾಗುವ ಆಸೆ, ಇವುಗಳಿಗೆಲ್ಲಾ ಮರಗಳನ್ನು ಸುತ್ತುವುದು, ಮರಗಳಿಗೇ ಪೂಜೆ ಸಲ್ಲಿಸುವುದು, ಅದರ ಮಣ್ಣು ತೆಗೆದುಕೊಂಡು ಹೋಗುವುದು, ಮಣ್ಣು ತಂದು ಹಾಕುವುದರಿಂದ ಸಾದ್ಯವೇ?. ಹೀಗೆ ಹಲವಾರು ಪ್ರಯೋಗಗಳು ಮರದ ಜೊತೆ ನೆಡೆಯುತ್ತಲೇ ಬಂದಿದೆ. ಹಾಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಜನರಲ್ಲಿ ಮಾನಸಿಕ ಸ್ಥಿರತೆಯನ್ನು ತಂದುಕೊಡುವ ಪ್ರಯತ್ನಗಳನ್ನು ಮಾಡಬೇಕಾಗಿದೆ. ಜನರಿಗೆ ಉತ್ತಮ ಶಿಕ್ಷಣವನ್ನು ನೀಡಿ, ಮಕ್ಕಳಾಗುವುದು, ಮಗುವಾಗುವುದು, ಮಗುವಿನ ಶ್ರೇಯಸ್ಸಿನ ಬಗೆಗೆ ವೈಜ್ಞಾನಿಕ ತಿಳುವಳಿಕೆಗಳು ನೀಡಿ, ಶೋಷಣೆಗೊಳಗಾಗದಂತೆ ಅವರ ತಡೆಯಬೇಕಾಗಿದೆ. ಈಗಂತೂ ಸಾಕಷ್ಟು ಮಹಿಳೆಯರಿಗೆ ಮಾಡುತ್ತಿರುವ ಶೋಷಣೆಯ ಒಂದು ಪಟ್ಟಿಯೇ ಸಿಗುತ್ತದೆ, ದೆವ್ವ, ಭೂತ ಬರುವುದು, ದೇವದಾಸಿ ಪದ್ಧತಿ, ಋತುಮತಿಯಲ್ಲಿ ಮುಟ್ಟದೇ ಇರುವುದು, ಮಣಿ ಕಟ್ಟುವುದು, ತಲೆ ಕೂದಲು ಬಾಚದಂತೆ ಮಾಡುವುದು, ಗಂಡು ಸಂತಾನವಿಲ್ಲದಿದ್ದರೇ ನಿಂದಿಸುವುದು, ಬಂಜೆಯಾದರೆ ನೋಹಿಸುವುದು, ಈಗೇ ಪಟ್ಟಿ ಬೆಳೆಯುತ್ತದೆ. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೇ ಇವೆಲ್ಲವು ತೊಲಗುತ್ತವೆ. ಶ್ರೀಮಂತರಿದ್ದರೆ ಅವರಿಗೆ ಪೂಜಾ ಸಾಮಗ್ರಿ, ದಕ್ಷಿಣೆ, ದಾನಮಾಡಲು ವಸ್ತುಗಳನ್ನ ಕೊಳ್ಳಲು, ಪೂಜೆಮಾಡುವರ ಶುಲ್ಕ ಕೊಡುವಷ್ಟ್ಟು ಶಕ್ತಿ ಇರುತ್ತದೆ, ಬಡವರಾದರೆ ಸಾಲ ಮಾಡಬೇಕಾಗುತ್ತದೆ. ಬಹಳಷ್ಟು ಜನರಿಗೆ ಉಡಲು ಮೈಮೇಲೆ ಬಟ್ಟೆಯಿಲ್ಲದಿದ್ದರು, ಮರಗಳಿಗೆ ಬಟ್ಟೆ ಸುತ್ತುವುದು ನಡೆದೇ ಇದೆ ಎಂದಿದ್ದಾರೆ. 

ಜನರಲ್ಲಿ ಸ್ಪಷ್ಟವಾದ ಪರಿಸರ ಚಿಂತನೆ ಮೂಡಿಸಿ, ಮರಗಳನ್ನು ಉಳಿಸಿಕೊಳ್ಳುವ ಏರ್ಪಡು ಮಾಡಿಕೊಳ್ಳಬಹುದು, ಇದನ್ನ ಮೂಢನಂಬಿಕೆಯಿAದ ಮಾಡಬಾರದು, ಕೆಲವರು ಇದು ಆಧ್ಯಾತ್ಮಿಕತೆÀ ಎನ್ನುವರು. ಹೀಗೆ ಪ್ರತಿಯೊಬ್ಬರು, ಒಂದೊAದು ವಿಧದಲ್ಲಿ ಮರ ಉಳಿಸಲು ಪ್ರಯತ್ನಿಸುತ್ತಿದ್ದಾರೆ, ಎಲ್ಲವೂ ಸತ್ಯದ ಮಾರ್ಗವಾದರೆ ಎಷ್ಟು ಚಂದ. ಸುಳ್ಳಿನ ಮಾರ್ಗಗಳಿಂದ ಮನಸನ್ನ ಗಟ್ಟಿಗೊಳಿಸುವುದು ಬೇಡ. ವೈಜ್ಞಾನಿಕ ಮಾರ್ಗಗಳನ್ನ ಬಳಸಿಕೊಂಡು ಪರಿಸರ ಉಳಿಸುವುದು ಉತ್ತಮ ಎಂದು ಪತ್ರಿಕೆ ಪ್ರಕಟಣೆಯ ಮೂಲಕ ವಿನಂತಿಸಿಕೊAಡಿದ್ದಾರೆ.