ವೈಜ್ಞಾನಿಕ ಮನೋಭಾವ ಹೊಂದಲು ಕರೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.28: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹಾಗೂ ಆವಿಷ್ಕಾರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್. ಸಿ.ವಿ.ರಾಮನ್ ಅವರಿಂದ 1928 ಫೆಬ್ರವರಿ 28ರಂದು ಆವಿಷ್ಕಾರಗೊಂಡ ಬೆಳಕಿನ ಪರಿಣಾಮಗಳು,ರಾಮನ್ ಪರಿಣಾಮಗಳೆಂದೇ ಪ್ರಸಿದ್ಧಿ ಪಡೆದು,1930ರಲ್ಲಿ ನೋಬೆಲ್ ಬಹುಮಾನ ಪಡೆದಿದ್ದಾರೆ ಎಂದು ಹೇಳಿದರು.
ರಾಮನ್ ಅವರ ಬಹುತೇಕ ಆವಿಷ್ಕಾರಗಳು ನೀರಿನ ಕುರಿತು ಬೆಳಕು ಚೆಲ್ಲುತ್ತವೆ ಎಂದು ಹೇಳುವುದರ ಜೊತೆಗೆ ವಿಜ್ಞಾನ ಕ್ಷೇತ್ರ ಎಷ್ಟೇ ಪ್ರಗತಿ ಸಾಧಿಸಿದರೂ ಕೂಡ ಹೊಸತನ್ನು ಆವಿಷ್ಕಾರ ಮಾಡಲು ಹಲವಾರು ದಾರಿಗಳಿವೆ ಎಂದರು.
 ವಿಜ್ಞಾನ ದಿನ ಕುರಿತು ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳು:
1.ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಕುರಿತು ಎಂಟನೇ ತರಗತಿ ವಿದ್ಯಾರ್ಥಿನಿ ಟಿ.ಎನ್. ಅಂಕಿತ ವಾಲ್ಮೀಕಿ ಮನಮೋಹಕವಾಗಿ ವಿವರಿಸಿ ಪ್ರಥಮ ಬಹುಮಾನ ಪಡೆದರು.
2.ಲೋಹ,ಅಲೋಹಗಳಲ್ಲಿ ವಿದ್ಯುತ್ ಪ್ರವಾಹದ ಬಗ್ಗೆ ಎಂಟನೇ ತರಗತಿ ವಿದ್ಯಾರ್ಥಿ ಕಿರಣ್ ಪ್ರಯೋಗ ಮಾಡಿ ದ್ವಿತೀಯ ಬಹುಮಾನ ಪಡೆದರೆ,ನೈಸರ್ಗಿಕ ವಿದ್ಯಮಾನಗಳಲ್ಲಿ ಒಂದಾದ ಭೂಕಂಪಗಳ ಬಗ್ಗೆ ಸೀಸ್ಮೋಗ್ರಾಫ್ ಸಹಯದಿಂದ ವಿವರಣೆ ನೀಡಿದ ಎಂಟನೇ ತರಗತಿ ವಿದ್ಯಾರ್ಥಿಗಳಾದ ಶಿವಶಂಕರ, ಕೆ.ಟಿ.ಶಂಕರ, ಸುಂಕಮ್ಮ, ಸುಮ,ಅರ್ಪಿತ ತೃತೀಯ ಬಹುಮಾನ ಪಡೆದರು.
ವಿಜ್ಞಾನ ಶಿಕ್ಷಕಿ ಮುನಾವರ ಸುಲ್ತಾನ ಸನ್ಮಾನ ಸ್ವೀಕರಿಸಿ ಮಾತನಾಡಿ ರಾಮನ್ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿ ಕೊಳ್ಳಬೇಕೆಂದು ಹೇಳಿದರು.
ಶಿಕ್ಷಕರಾದ ಸುಮತಿ ರಾಮನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರೆ,ಶಶಮ್ಮ ಪೂಜೆ ನೆರವೇರಿಸಿದರು. ಶಿಕ್ಷಕರಾದ ಬಸವರಾಜ, ದಿಲ್ಷಾದ್ ಬೇಗಂ,ಚನ್ನಮ್ಮ, ವೈಶಾಲಿ, ಶ್ವೇತಾ, ಉಮ್ಮೆಹಾನಿ, ರಾಮಾಂಜಿನೇಯ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.