ವೈಜ್ಞಾನಿಕ ಮನೋಭಾವದಿಂದ ದೇಶದ ಪ್ರಗತಿ

ಕಲಬುರಗಿ,ಸೆ.19-ನಗರದ ಸ್ಟೇಷನ್ ಬಜಾರದ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2021-2022ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ನಾಲ್ಕನೇ ದಿನದ ಕಾಯಕ್ರಮದಲ್ಲಿ ಎನ್.ಎಸ್.ಎಸ್. ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ ಅವರು ” ಮೂಢನಂಬಿಕೆ ಮತ್ತು ವೈಜ್ಞಾನಿಕ ಮನೋಭಾವ” ವಿಷಯ ಕುರಿತು ಮಾತನಾಡಿದರು.
ನಂಬಿಕೆ ಮತ್ತು ಮೂಢನಂಬಿಕೆ ಯಾವುದು ಎಂದು ತಿಳಿದುಕೊಂಡು ಜೀವನ ನಡೆಸಬೇಕು. ನಂಬಿಕೆ ಜೀವನದ ಸತ್ಯ ಘಟನೆಗಳ ಆಧಾರಿತವಾಗಿದ್ದರೆ, ಮೂಢನಂಬಿಕೆ ಮನುಷ್ಯನನ್ನು ಅಧ:ಪ್ಪತನಕ್ಕೆ ತಳ್ಳುತ್ತÀದೆ. ಮೂಢನಂಬಿಕೆಯಿಂದ ಮನುಷ್ಯ ತನ್ನತನವನ್ನು ಕಳೆದುಕೊಂಡು ಗುಲಾಮನಾಗುತ್ತಾನೆ. ಇದರಿಂದ ಆರ್ಥಿಕ ನಷ್ಟ ಮತ್ತು ಸ್ವಂತಿಕೆ ಕಳೆದುಕೊಂಡು ಪರವಾಲಂಬಿ ಆಗುತ್ತಾನೆ. ಪ್ರತಿಯೊಬ್ಬ ವಿದ್ಯಾರ್ಥಿಯು ವೈಜ್ಞಾನಿಕ ತರ್ಕ ಮನೋಭಾವ ಬೆಳೆಸಿಕೊಂಡು ಯಾವುದು ಸತ್ಯ ಯಾವುದು ಮಿಥ್ಯ ತಿಳಿದುಕೊಂಡು ಜೀವಿಸಬೇಕು ಎಂದರು.
ವೈಜ್ಞಾನಿಕ ಮನೋಭಾವ ಗುಣಗಳು ಯಾವ ದೇಶದಲ್ಲಿ ಜನರು ಬೆಳೆಸಿಕೊಳ್ಳುತ್ತಾರೋ ಆ ದೇಶ ಸರ್ವಪಥದಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಯಾವ ದೇಶದಲ್ಲಿ ಮೂಢÀನಂಬಿಕೆ ಸಮಾಜದಲ್ಲಿ ಅಂಟಿಕೊಂಡಿರುತ್ತದೋ ಆ ದೇಶ ಪತನಕ್ಕೆ ಹೋಗುತ್ತದೆ. ದೇಶದಲ್ಲಿ ವೈಜ್ಞಾನಿಕ ತರ್ಕ ಬದ್ಧ ಹಾಗೂ ಜಾತ್ಯತೀತ ಮನೋಭಾವವುಳ್ಳ ಗುಣಗಳನ್ನು ಬೆಳೆಸುವ ಸಂಸ್ಕøತಿ ಇದ್ದಾಗ ಆ ದೇಶ ಭದ್ರವಾಗಿ ನಿರ್ಮಾಣವಾಗುತ್ತದೆ ಎಂದರು.
ಅತಿಥಿಗಳಾಗಿ ವಿಶ್ರಾಂತ ಪ್ರಧ್ಯಾಪಕ ಮಧುಕರ್ ಮಾಶಾಳಕರ ಮಾತನಾಡಿದರು ,ಮುಖ್ಯ ಅತಿಥಿಗಳಾಗಿ ರಾಜೇಶ್, ಕಾರ್ಯಕ್ರಮದ ಅಧ್ಯಕ್ಷತೆ ಮಾಪಣ್ಣ ಜಿರೋಳ್ಳಿ, ಕಾರ್ಯಕ್ರಮ ಅಧಿಕಾರಿ ಪಾಂಡು ಎಲ್ ರಾಠೋಡ್ ಸ್ವಯಂಸೇವಕರು ಹಾಜರಿದ್ದರು.