ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹಬ್ಬಗಳ ಆಚರಣೆ

ಹರಪನಹಳ್ಳಿ.ಜ.೧೬ : ನಮ್ಮ ಪೂರ್ವಿಕರು ಹಬ್ಬ ಹರಿದಿನಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಪ್ರದಾಯಗಳನ್ನು ರೂಢಿ ಮಾಡಿದ್ದಾರೆ. ಅವುಗಳನ್ನು ಮುಂದಿನ ಪೀಳಿಗೆಯು ಆಚರಣೆ ಮಾಡುವ ಸಂಸ್ಕೃತಿಯನ್ನು ನಾವು ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.ಅವರು ತಾಲೂಕಿನ ತಾವರಗೊಂದಿ ಗ್ರಾಮದ ಬಳಿ ತುಂಗಭದ್ರ ನದಿ ತಟದಲ್ಲಿ ಸಂಕ್ರಾAತಿ ಹಬ್ಬದ ಪ್ರಯುಕ್ತ ಎಂ.ಪಿ.ರವೀAದ್ರ ಪ್ರತಿಷ್ಠಾನ ಹಾಗೂ ಎಂ.ಪಿ.ಲತಾ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಜನಪದ ನೃತ್ಯ ದರ್ಶನಂ ಕಾರ್ಯಕ್ರಮದಲ್ಲಿ ಎಳ್ಳು ಬೆಲ್ಲ ಬೀರಿ, ಸಾಮೂಹಿಕ ಭೋಜನಸವಿಯೊಂದಿಗೆ ಮಾತನಾಡಿದರು.ಪ್ರತಿ ಹಬ್ಬಗಳಲ್ಲಿ ವಿಶಿಷ್ಟವಾದ ರೀತಿಯ ಭಕ್ಷೆಗಳನ್ನು ತಯಾರಿಸಿ ನೈವೈದ್ಯ ಮಾಡುವ ಪರಿಪಾಠ ನಮ್ಮಲ್ಲಿ ಚಾಲ್ತಿಯಲ್ಲಿದೆ. ಪ್ರಮುಖವಾಗಿ ಸಂಕ್ರಾತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ, ಈ ಹಬ್ಬದಲ್ಲಿ ಎಳ್ಳು ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ.ಹಿರಿಯರ ಸಂಪ್ರದಾಯ ಉಳಿಸಿ ಬೆಳಸಲು ಇಂತಹ ಹಬ್ಬಹರಿದಿನಗಳನ್ನು ಸಾಮೂಹಿಕವಾಗಿ ಆಚರಣೆ ಮಾಡೋಣ ಎಂದರು.ಸAಕ್ರಾತಿ ಹಬ್ಬದಾಚರಣೆಗೆ ಆಗಮಿಸಿದ ಎಲ್ಲಾರಿಗೂ ಎಳ್ಳು ಬೆಲ್ಲ ನೀಡಿ ಸ್ವಾಗತಿಸಿ ರಾಮನಗರದ ಬಾಲಕೀಯರನೃತ್ಯ, ಯಕ್ಷಗಾನ, ಕಂಸಾಳೆ, ಸುಗ್ಗಿ ಹಾಡು, ಪಟ ಕುಣಿತ, ಪೂಜಾ ಕುಣಿತ, ಕೊಡವ ನೃತ್ಯ ಹೀಗೆ ವಿವಿಧ ಜಾನಪದ ಕಲಾ ಪ್ರಕಾರಗಳು ಸಂಕ್ರಾAತಿಗೆ ಮೆರಗು ನೀಡಿ ಬಂದAತಹ ಜನರಿಗೆ ಮುದ ನೀಡಿದವು.ಮಹಿಳೆಯರಿಗೆ ಉಡಿ ತುಂಬಿ ಗೌರವಿಸಲಾಯಿತು. ಜಿಪಂ ಮಾಜಿ ಸದಸ್ಯರಾದ ತೆಲಿಗಿ ಈಶ್ವರಪ್ಪ, ಅನುರಾದ ಕೊಟ್ರೇಶ, ಮತ್ತಿಹಳ್ಳಿ ಶಿವಣ್ಣ, ಪುರಸಭಾ ಸದಸ್ಯರಾದ ಎಂ.ವಿ.ಅAಜಿನಪ್ಪ, ಲಾಟಿ ದಾದಾಪೀರ, ಗೊ0ಗಡಿ ನಾಗರಾಜ, ವಕೀಲ ವೆಂಕಟೇಶ, ಗಣೇಶ, ಚಿಕ್ಕೇರಿ ಬಸಪ್ಪ, ತಾವರಗೊಂದಿ ಜಯಪ್ರಕಾಶ, ಶಂಕರ,ಪೈಲ್ವಾನ ಬಸಪ್ಪ. ಇಟಗಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಐಗೋಳ ಚಿದಾನಂದ, ಎಚ್.ಎಂ.ಮಲ್ಲಿಕಾರ್ಜುನ, ಗೌತಮಪ್ರಭು, ಅಲಗಿಲವಾಡ ಎ.ಎಂ. ವಿಶ್ವನಾಥ್ ತಾಪಂ ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಓ.ಮಂಹತೇಶ್, ಪುಷ್ಪಾದಿವಾಕರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ಕಂಚಿಕೇರಿ ಜಯಲಕ್ಷ್ಮಿ, ಭಾಗ್ಯಮ್ಮ, ನಂದಿಬೇವೂರು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ, ರೆಡ್ಡಿ ಶಾಂತಕುಮಾರ, ಡಾ.ಕೊಟ್ರೇಶ, ವನಜಾಕ್ಷಮ್ಮ,ಎಲ್.ಎಂ. ನಾಯ್ಕ, ಬಾಗಳಿ ಭರನಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು, ಬಸವರಾಜ, ಉದಯಶಂಕರ, ಶಿವರಾಜ, ಪ್ರಸಾದ್ ಕಾವಡಿ, ಹುಲಿ ರಮೇಶ, ಸೋಮಣ್ಣ, ನೇಮರಾಜ ನಾಯ್ಕ, ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.