ವೈಜ್ಞಾನಿಕ, ಧರ್ಮನಿರಪೇಕ್ಷ, ಜನತಾಂತ್ರಿಕ ಸಾರ್ವತ್ರಿಕ ಶಿಕ್ಷಣ ನೀತಿಗೆ ಪ್ರೊ. ಬೆಟ್ಟದೂರು ಆಗ್ರಹ

ಕಲಬುರಗಿ:ಆ.23: ಭಾರತದ ನವೋದಯದ ಚಿಂತಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಆಶಯಗಳಾದ ವೈಜ್ಞಾನಿಕ, ಧರ್ಮನಿರಪೇಕ್ಷ ಮತ್ತು ಜನತಾಂತ್ರಿಕ ಮೌಲ್ಯಗಳಿಗೆ ಬದ್ಧವಾದ ಹಾಗೂ ಸಾರ್ವತ್ರಿಕ ಶಿಕ್ಷಣವನ್ನು ಖಾತ್ರಿಪಡಿಸುವ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವುದು ಜನಗಳ ಆಶಯ ಮತ್ತು ಸರ್ಕಾರದ ಬದ್ಧತೆಯಾಗಬೇಕು ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಅವರು ಒತ್ತಾಯಿಸಿದ್ದಾರೆ.
ವೈಜ್ಞಾನಿಕ ಕಲಿಕೆಗೆ ಮಾರಕವಾದ, ಕಾಪೆರ್Çರೇಟ್ ಪರವಾದ ಹಾಗೂ ತಾರತಮ್ಯದಿಂದ ಕೂಡಿರುವ ಎನ್‍ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ-2020)ಯ ವಿರುದ್ಧ ಶಿಕ್ಷಣ ತಜ್ಞರ ಹಾಗೂ ರಾಜ್ಯದ ಜನತೆಯ ಬೆಳೆಸಿದ ಹೋರಾಟಕ್ಕೆ ಕರ್ನಾಟಕ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಶಿಕ್ಷಣ ವಿರೋಧಿ ಎನ್‍ಇಪಿ- 2020 ಅನ್ನು ಹಿಂಪಡೆಯುವುದಾಗಿ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಅವರು ಹೇಳಿಕೆಯಲ್ಲಿ ಸ್ವಾಗತಿಸಿದ್ದಾರೆ.
ಕರ್ನಾಟಕಕ್ಕೆ ಜನಪರ ಶಿಕ್ಷಣ ನೀತಿಯನ್ನು ರೂಪಿಸಲು ನಿಷ್ಪಕ್ಷಪಾತವಾಗಿರುವ ಹಾಗೂ ಶಿಕ್ಷಣಕ್ಕೆ ಬದ್ಧವಾಗಿರುವ ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಸಾಹಿತಿಗಳು, ವಿಜ್ಞಾನಿಗಳು ಹಾಗೂ ವಿದ್ಯಾರ್ಥಿ-ಪೋಷಕರನ್ನು ಒಳಗೊಂಡ ಒಂದು ಜನತಾಂತ್ರಿಕ ಸಮಿತಿಯನ್ನು ಈ ಕೂಡಲೇ ರಚಿಸಬೇಕು. ಈ ಸಮಿತಿಯು ವ್ಯಾಪಕ ಜನತಾಂತ್ರಿಕ ಚರ್ಚೆಗಳ ಮೂಲಕ ಜನಪರ ಶಿಕ್ಷಣ ನೀತಿಯನ್ನು ರೂಪಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ನವೋದಯದ ಹರಿಕಾರರಾದ ಕುವೆಂಪು, ಬಿ.ಎಂ,ಶ್ರೀ ಮುಂತಾದವರ ಆಶಯಗಳಾದ ಧರ್ಮನಿರಪೇಕ್ಷ, ವೈಜ್ಞಾನಿಕ, ಜನತಾಂತ್ರಿಕ ಮೌಲ್ಯಗಳು ಹಾಗೂ ಸಮಾನತೆ-ಸಹಬಾಳ್ವೆ-ಚಾರಿತ್ರ್ಯವನ್ನು ಬೆಳೆಸುವಂತಹ ಪಠ್ಯಪುಸ್ತಕಗಳು ರಚನೆಯಾಗಬೇಕು. ಇದಕ್ಕಾಗಿ ತಕ್ಷಣವೇ ಶೈಕ್ಷಣಿಕ ತತ್ವಗಳಿಗೆ ಬದ್ಧರಾಗಿರುವವರÀ ಶಿಕ್ಷಣ ತಜ್ಞರ ಸಮಿತಿಯನ್ನು ರಚಿಸಬೇಕು. ಮುಂದಿನ ಶೈಕ್ಷಣಿಕ ವರ್ಷ ಆರಂಭ ಮುನ್ನವೇ ಗುಣಮಟ್ಟದ ಹೊಸ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಸರಿಯಾದ ಸಮಯಕ್ಕೆ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಂತಹ ಜನಪರ ಶಿಕ್ಷಣ ನೀತಿಗಾಗಿ ಆಗ್ರಹಿಸಿ ಂISಇಅ ಪ್ರಬಲ ಜನ ಚಳುವಳಿಗಳನ್ನು ಸಂಘಟಿಸುತ್ತಿದೆ. ಕಳೆದ ತಿಂಗಳ ಜುಲೈ 28ರಂದು ಸಮಿತಿಯು ಸಂಘಟಿಸಿದ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಯುಜಿಸಿ ಮಾಜಿ ಅಧ್ಯಕ್ಷ ಪೆÇ್ರ. ಸುಖದೇವ್ ಥೋರಟ್, ವಿಶ್ರಾಂತ ಕುಲಪತಿಗಳಾದ ಪೆÇ್ರ. ಮುರಿಗೆಪ್ಪ, ಪೆÇ್ರ. ಖಾಜಾಫೀರ್, ಪೆÇ್ರ.ಕೆ.ಆರ್. ಇಕ್ಬಾಲ್, ಮುಂತಾದವರು ಹಾಗೂ ಅನೇಕ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ಸಾಹಿತಿಗಳು, ಬರಹಗಾರರು, ಪೆÇೀಷಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿ ವೈಜ್ಞಾನಿಕ – ಧರ್ಮನಿರಪೇಕ್ಷ – ಜನತಾಂತ್ರಿಕ ಶಿಕ್ಷಣ ನೀತಿಗೆ ಆಗ್ರಹಿಸಿದನ್ನು ಇಲ್ಲಿ ಸ್ಮರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರುಗಳು ಸಮಾವೇಶದಲ್ಲಿ ಭಾಗವಹಿಸಿ, ಜನವಿರೋಧಿ ಎನ್‍ಇಪಿ ಕೈಬಿಡುವುದಾಗಿ ಭರವಸೆ ನೀಡಿದರು. ಮುಂಬರುವ ರಾಜ್ಯ ಶಿಕ್ಷಣ ನೀತಿಯು, ಶಿಕ್ಷಣದ ವ್ಯಾಪಾರೀಕರಣ ಹಾಗೂ ಶುಲ್ಕ ಏರಿಕೆಯನ್ನು ತಡೆಗಟ್ಟಬೇಕು, ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.